(ಕಾಯಪಂಡ ಶಶಿಸೋಮಯ್ಯ) ಮಡಿಕೇರಿ, ಜು. ೧೮: ರಾಜ್ಯ ವಿಧಾನಸಭೆಯ ಚುನಾವಣೆ ಮುಕ್ತಾಯಗೊಂಡು ಪ್ರಸ್ತುತ ಹೊಸ ಸರಕಾರ ರಚನೆಯಾಗಿದೆ. ಕಳೆದ ಕೆಲವು ತಿಂಗಳುಗಳಿAದ ವಿಧಾನಸಭಾ ಚುನಾವಣೆಯ ಬಿಸಿ ಎದುರಾಗಿದ್ದು, ಇದೀಗÀ ತಾನೇ ಈ ರಾಜಕೀಯ ವಿದ್ಯಾಮಾನಗಳು ಮುಕ್ತಾಯಗೊಂಡಿವೆ. ಇದರ ಬೆನ್ನಲ್ಲೇ ಪ್ರಸ್ತುತ ಜೂನ್ ತಿಂಗಳಿನಿAದ ಡಿಸೆಂಬರ್ ತನಕ ಜಿಲ್ಲೆಯ ವಿವಿಧ ಸಹಕಾರ ಸಂಘಗಳಿಗೆ ಚುನಾವಣೆ ಎದುರಾಗಿದ್ದು, ಈ ಅವಧಿಯಲ್ಲಿ ಅಧಿಕಾರ ಮುಕ್ತಾಯಗೊಳ್ಳಲಿರುವ ವಿವಿಧ ಸಂಘಗಳಿಗೆ ಹೊಸ ಆಡಳಿತ ಮಂಡಳಿ ರಚನೆಯಾಗಬೇಕಾಗಿದೆ. ಈಗಾಗಲೇ ಈ ಪ್ರಕ್ರಿಯೆ ಆರಂಭಗೊAಡಿದ್ದು, ಜಿಲ್ಲೆಯಲ್ಲಿ ಅವಧಿಪೂರ್ಣಗೊಳ್ಳಲಿರುವ ಸಹಕಾರ ಸಂಘಗಳ ಚುನಾವಣೆಯ ಕಾವು ಏರತೊಡಗಿದೆ. ಗ್ರಾಮೀಣ ವಿಭಾಗದಲ್ಲಿ ಈ ಚುನಾವಣೆಗಳು ಭಾರೀ ಮಹತ್ವವನ್ನೇ ಪಡೆಯಲಿರುವದು ಸಹಜವಾಗಿ ಇದೊಂದು ಪ್ರತಿಷ್ಠೆಯ ಚುನಾವಣೆಯಾಗಿ ಪರಿಗಣಿಸಲ್ಪಟ್ಟಿದೆ.
ಈ ಹಿಂದೆ ಜಿಲ್ಲೆಯಲ್ಲಿ ೨೦೧೮ರಲ್ಲಿ ಈ ಸಹಕಾರ ಸಂಘಗಳಿಗೆ ಚುನಾವಣೆ ನಡೆದಿತ್ತು. ಇದೀಗ ಹಲವು ಸಂಘಗಳ ಅಧಿಕಾರಾವಧಿ ಮುಕ್ತಾಯಗೊಳ್ಳುತ್ತಿದ್ದು, ಇಂತಹ ಸಂಘಗಳಿಗೆ ಚುನಾವಣೆ ನಡೆಯಬೇಕಾಗಿದೆ. ಸಹಕಾರ ಸಂಘಗಳ ಚುನಾವಣೆಗಳು ನೇರವಾಗಿ ರಾಜಕೀಯ ಪಕ್ಷಗಳ ಆಧಾರಿತವಾದ ಚುನಾವಣೆಯಲ್ಲವಾದರೂ ಪ್ರಸ್ತುತದ ವರ್ಷಗಳಲ್ಲಿ ಇದು ರಾಜಕೀಯ ಪ್ರೇರಿತವಾಗಿ ನಡೆಯುತ್ತಿರುವುದು ಕಂಡು ಬಂದಿದೆ. ವಿವಿಧ ಪಕ್ಷಗಳ ಮೂಲಕ ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುತ್ತದೆ. ಹೆಚ್ಚಿನ ಸಂಘಗಳು ಗ್ರಾಮೀಣ ವಿಭಾಗಗಳಲ್ಲಿ ಬರುವುದರಿಂದ ಆಯಾ ಗ್ರಾಮ ವ್ಯಾಪ್ತಿಯಲ್ಲಿ ಇದರ ಬಿರುಸು ಎದುರಾಗುತ್ತದೆ. ಅದರಲ್ಲೂ ಪ್ರಸಕ್ತ ವರ್ಷ ರಾಜ್ಯದಲ್ಲಿ ಸರಕಾರ ಬದಲಾಗುವುದರೊಂದಿಗೆ ಜಿಲ್ಲೆಯಲ್ಲಿನ ಶಾಸಕರುಗಳು ಕೂಡ ಬದಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ಬಾರಿಗಿಂತ ಈ ಬಾರಿಯ ಚುನಾವಣೆ ಇನ್ನಷ್ಟು ಮಹತ್ವ ಪಡೆಯುತ್ತಿದೆ ಎನ್ನಲಾಗುತ್ತಿದೆ.
ಯಾವ್ಯಾವ ಸಂಘಗಳು
ಪ್ರಸ್ತುತ ಜೂನ್ ತಿಂಗಳಿನಿAದ ಡಿಸೆಂಬರ್ ತನಕದ ಅವಧಿಯಲ್ಲಿ ವಿವಿಧ ಮಾದರಿಯ ಒಟ್ಟು ೯೭ ಸಂಘಗಳ ಅಧಿಕಾರ ಮುಕ್ತಾಯಗೊಳ್ಳುತ್ತಿದೆ. ಇದರಲ್ಲಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಗಳು, ದವಸ ಭಂಡಾರಗಳು, ಹಾಲು ಉತ್ಪಾದಕರ ಸಂಘ, ಮಹಿಳಾ ಸಹಕಾರ ಸಂಘಗಳು, ಜಿಲ್ಲಾ ಮಟ್ಟ ಹಾಗೂ ತಾಲೂಕು ಮಟ್ಟದ ಇತರೆ ಸಹಕಾರ ಸಂಘಗಳು, ಜನತಾ ಬಜಾರ್, ಎಪಿಎಂಸಿ, ಫೆಡರೇಷನ್ ಇತ್ಯಾದಿಗಳು ಬರುತ್ತದೆ. ಸಹಕಾರ ಇಲಾಖೆಯ ಮೂಲಕ ಈ ಚುನಾವಣೆಗಳನ್ನು ನಡೆಸಬೇಕಾಗಿದೆ.
ಈಗಾಗಲೇ ಜಿಲ್ಲೆಯ ಮೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಗಳಿಗೆ ಚುನಾವಣೆಯೂ ಮುಕ್ತಾಯವಾಗಿದ್ದು, ಹೊಸ ನಿರ್ದೇಶಕರುಗಳು ಚುನಾಯಿತರಾಗಿದ್ದಾರೆ. ಚುನಾವಣೆ ಪ್ರಕ್ರಿಯೆ ನಡೆಸಲು ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆಯಿರುವುದರಿಂದ
(ಮೊದಲ ಪುಟದಿಂದ) ಇದಕ್ಕಾಗಿ ಪಂಚಾಯತ್ ರಾಜ್ ಇಲಾಖೆಯ ಪಿಡಿಓ ಹಾಗೂ ಕಾರ್ಯದರ್ಶಿಗಳನ್ನು ರಿಟರ್ನಿಂಗ್ ಅಧಿಕಾರಿಗಳಾಗಿ ನೇಮಕ ಮಾಡಲಾಗಿದ್ದು, ಅವರುಗಳಿಗೆ ಸೂಕ್ತ ತರಬೇತಿಯನ್ನೂ ನೀಡಲಾಗಿದೆ. ಚುನಾವಣೆ ಸಂಬAಧ ಎಲ್ಲಾ ವ್ಯವಸ್ಥೆಗಳನ್ನು ಪರಿಶೀಲಿಸಿ ಕಾಲಕಾಲಕ್ಕೆ ಸೂಕ್ತ ಸಲಹೆ - ಸೂಚನೆಗಳನ್ನು ನೀಡಲು ಸಹಕಾರ ಸಂಘಗಳ ಸಹಾಯಕ ನಿಬಂಧಕರು ಮಡಿಕೇರಿ ಉಪವಿಭಾಗ ಇವರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ.
ಚುನಾವಣೆ ನಡೆಯಲಿರುವ ಸಂಘಗಳು
ಜಿಲ್ಲೆಯ ಒಟ್ಟು ೪೭ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಗಳು, ೮ ಹಾಲು ಉತ್ಪಾದಕರ ಸಹಕಾರ ಸಂಘಗಳು, ೨೨ ಧವಸಭಂಡಾರಗಳು, ೨ ಪಟ್ಟಣ ಸಹಕಾರ ಬ್ಯಾಂಕ್ ಹಾಗೂ ಇತರೆ ಸಹಕಾರ ಸಂಘಗಳು ಒಟ್ಟು ೧೮ಕ್ಕೆ ಚುನಾವಣೆ ನಡೆಯಲಿವೆ.