ಮಡಿಕೇರಿ, ಜು. ೧೯: ಕೊಡವ ತಕ್ಕ್ ಎಳ್ತ್ಕಾರಡ ಕೂಟ ಹಾಗೂ ಪೊನ್ನಂಪೇಟೆ ಕೊಡವ ಸಮಾಜದ ಆಶ್ರಯದಲ್ಲಿ ಎಳ್ತ್ಕಾರಡ ಕೂಟದ ಬೆಳ್ಳಿಹಬ್ಬ ಕಾರ್ಯಕ್ರಮ ತಾ. ೨೩ ರಂದು ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಜರುಗಲಿದೆ.
ಈ ಪ್ರಯುಕ್ತ ೨೫ ನೂತನ ಪುಸ್ತಕ ‘ಬೊಳ್ಳಿ ಚಂದೂಕ’ ಸ್ಮರಣ ಸಂಚಿಕೆ ಬಿಡುಗಡೆ, ಸನ್ಮಾನ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಅಂದು ಜರುಗಲಿದೆ.
ತಾ. ೨೩ ರ ಬೆಳಿಗ್ಗೆ ೯.೩೦ಕ್ಕೆ ಉದ್ಘಾಟನಾ ಸಮಾರಂಭ ಎಳ್ತ್ಕಾರಡ ಕೂಟದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಅವರ ಅಧ್ಯಕ್ಷತೆಯಲ್ಲಿ ಆರಂಭಗೊಳ್ಳಲಿದೆ. ಅಖಿಲ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಎಂ. ಮೋಟಯ್ಯ, ಜಂಟಿ ಕಾರ್ಯದರ್ಶಿ ಆಲೆಮಾಡ ಡಿ. ಸುಧೀರ್ ಹಾಗೂ ನಿರ್ದೇಶಕ ಚೆಪ್ಪುಡಿರ ರಾಕೇಶ್ ದೇವಯ್ಯ ಪಾಲ್ಗೊಳ್ಳಲಿದ್ದಾರೆ.
ಸನ್ಮಾನ ಸಮಾರಂಭ ಬೆಳಿಗ್ಗೆ ೧೧ ಗಂಟೆಗೆ ಜರುಗಲಿದ್ದು, ಅಪರಾಹ್ನ ೨೫ ನೂತನ ಪುಸ್ತಕ, ಸ್ಮರಣ ಸಂಚಿಕೆ ಬಿಡುಗಡೆ, ಸಾಹಿತಿಗಳಿಗೆ ಸನ್ಮಾನ, ಬಹುಮಾನ ವಿತರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ವಿವಿಧ ಸಂಘ-ಸAಸ್ಥೆಗಳ ಸಹಕಾರದೊಂದಿಗೆ ಅಂದು ದಿನವಿಡೀ ಕಾರ್ಯಕ್ರಮ ಜರುಗಲಿವೆ.