ಮಡಿಕೇರಿ, ಜು. ೧೮: ಇತ್ತೀಚೆಗೆ ಇಂಗ್ಲೆAಡಿನಲ್ಲಿ ಸಮಾಪ್ತಿಗೊಂಡ ಪ್ರತಿಷ್ಠಿತ ವಿಂಬಲ್ಡ್ನ್ ಟೆನ್ನಿಸ್ ಟೂರ್ನಿಯ ಡಬಲ್ಸ್ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕೊಡಗಿನ ರೋಹನ್ ಬೋಪಣ್ಣ ಅವರು, ವಿಶ್ವ ಡಬಲ್ಸ್ ಟೆನ್ನಿಸ್ ರ‍್ಯಾಂಕಿAಗ್‌ನಲ್ಲಿ ೭ನೇ ಸ್ಥಾನಕ್ಕೇರಿದ್ದಾರೆ. ತಮ್ಮ ಡಬಲ್ಸ್ ಜೋಡಿ ಆಸ್ಟೆçÃಲಿಯಾದ ಮ್ಯಾಥಿವ್ ಎಬ್‌ಡನ್ ಅವರೊಂದಿಗೆ ಟೂರ್ನಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿ ಸೆಮಿಫೈನಲ್ ಹಂತಕ್ಕೆ ತಲುಪಿದ್ದರು. ಈ ಮೂಲಕ ೧೨ನೇ ಕ್ರಮಾಂಕದಿAದ ೭ನೇ ಕ್ರಮಾಂಕಕ್ಕೆ ಬೋಪಣ್ಣ ಅವರು ಜಿಗಿದಿದ್ದಾರೆ.

೨೦೨೨ರಲ್ಲಿ ಮೊಣಕಾಲು ಗಾಯದಿಂದಾಗಿ ಹಲವಾರು ಟೂರ್ನಿಗಳಲ್ಲಿ ಭಾಗವಹಿಸಲು ವಿಫಲರಾಗಿ ಪ್ರಸ್ತುತ ವರ್ಷದ

(ಮೊದಲ ಪುಟದಿಂದ) ಪ್ರಾರಂಭದಲ್ಲಿ ೧೯ನೇ ಸ್ಥಾನದಲ್ಲಿದ್ದ ಬೋಪಣ್ಣ, ಅತ್ಯುತ್ತಮ ಪ್ರದರ್ಶನ ನೀಡುತ್ತಾ ಡಬಲ್ಸ್ನಲ್ಲಿ ಒಟ್ಟು ೨೬ ಪಂದ್ಯಗಳಲ್ಲಿ ಗೆಲುವು ಸಾಧಿಸಿದರು. ಮಾರ್ಚ್ನಲ್ಲಿ ಇಂಡಿಯನ್ ವೆಲ್ಸ್ ಮಾಸ್ರ‍್ಸ್ ಚಾಂಪಿಯನ್ ಆಗುವ ಮೂಲಕ ಈ ಟೂರ್ನಿ ಗೆದ್ದ ಅತ್ಯಂತ ಹಿರಿಯ(೪೩) ಆಟಗಾರ ಎಂಬ ಖ್ಯಾತಿಗೆ ಪಾತ್ರರಾದರು. ಈ ವರ್ಷದ ಪ್ರಾರಂಭದಲ್ಲಿ ಪ್ರತಿಷ್ಠಿತ ಆಸ್ಟೆçÃಲಿಯನ್ ಓಪನ್ ಟೂರ್ನಿಯಲ್ಲಿ ಮಿಶ್ರ ಡಬಲ್ಸ್ನಲ್ಲಿ ಫೈನಲ್ ಪ್ರವೇಶಿಸಿದ್ದರು, ಜೊತೆಗಾರ್ತಿಯಾಗಿ ಸಾನಿಯಾ ಮಿರ್ಜ ಅವರು ಆಡಿದ್ದರು. ವಿಂಬಲ್‌ಡನ್ ಪ್ರಾರಂಭದಲ್ಲಿ ೧೨ನೇ ಕ್ರಮಾಂಕದಲ್ಲಿದ್ದ ಬೋಪಣ್ಣ ಇದೀಗ ೫ ಸ್ಥಾನಗಳನ್ನೇರುವ ಮೂಲಕ ಸಾಧನೆಗೈದಿದ್ದಾರೆ.

೪೩ರ ವಯಸ್ಸಿನಲ್ಲಿಯೂ ಸಕ್ರಿಯವಾಗಿ ಟೆನ್ನಿಸ್‌ನಲ್ಲಿ ತೊಡಗಿಸಿಕೊಂಡು ಕ್ರೀಡಾಭಿಮಾನಿಗಳ ಪ್ರಶಂಸೆಗೆ ಪಾತ್ರರಾಗಿದ್ದಾರೆ. ೨೦೧೩ರ ಬಳಿಕ ಇದು ಅವರ ಅತ್ಯುತ್ತಮ ಕ್ರಮಾಂಕವಾಗಿದೆ. ೨೦೧೩ ರಲ್ಲಿ ತಮ್ಮ ೩೩ನೇ ವಯಸ್ಸಿನಲ್ಲಿ ೩ನೇ ಕ್ರಮಾಂಕದಲ್ಲಿ ಸ್ಥಾನ ಪಡೆದಿದ್ದರು.