ವೀರಾಜಪೇಟೆ, ಜು. ೧೭: ಸೇವಾ ಮನೋಭಾವದಿಂದ ಉದಯವಾದ ಸೇವಾ ಸಂಸ್ಥೆಗಳು ತಮ್ಮ ಪರಿಮಿತಿಯೊಂದಿಗೆ ಹಾಗೂ ಸಾಮಾಜಿಕ ಬದ್ದತೆಯೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಲಯನ್ಸ್ ಸಂಸ್ಥೆಯ ಮಾಜಿ ಪ್ರಾಂತೀಯ ಅಧ್ಯಕ್ಷ ಧನು ಉತ್ತಯ್ಯ ಹೇಳಿದರು.

ವೀರಾಜಪೇಟೆ ಕೊಡವ ಸಮಾಜದ ಸಭಾಂಗಣದಲ್ಲಿ ನಡೆದ ಲಯನ್ಸ್ ಕ್ಲಬ್ ವೀರಾಜಪೇಟೆಯ ೨೦೨೩-೨೪ನೇ ಸಾಲಿನ ನೂತನ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ನೂತನವಾಗಿ ರಚನೆಗೊಂಡ ಆಡಳಿತ ಮಂಡಳಿಯ ಸದಸ್ಯರಿಗೆ ಪ್ರಮಾಣವಚನ ಭೋದಿಸಿ ಮಾತನಾಡಿದ ಧನು ಉತ್ತಯ್ಯ ಸಾಮಾಜಿಕ ಕಳಕಳಿಯೊಂದಿಗೆ ಸಮಾಜದ ಎಲ್ಲಾ ಕ್ಷೇತ್ರದಲ್ಲಿ ಸಮಾಜಕ್ಕೆ ಒಳಿತಾಗುವ ಕಾರ್ಯಕ್ರಮಗಳನ್ನು ಸೇವಾ ಸಂಸ್ಥೆಗಳು ರೂಪಿಸುವಂತಾಗಬೇಕು ಎಂದರು.

ನಿರ್ಗಮಿತ ಅಧ್ಯಕ್ಷರಾದ ನರೇಂದ್ರ ಪಿ.ಟಿ. ಮಾತನಾಡಿ ೨೦೨೨-೨೩ನೇ ಸಾಲಿನಲ್ಲಿ ವೀರಾಜಪೇಟೆ ಘಟಕದಿಂದ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಿ ಉತ್ತಮ ರೀತಿಯಲ್ಲಿ ಸದಸ್ಯರು ಸಹಕಾರ ನೀಡಿದ್ದಾರೆ ಎಂದು ಸ್ಮರಿಸಿದರು.

ಘಟಕದ ನೂತನ ಅಧ್ಯಕ್ಷ ಕರ್ನಂಡ ಜಯ ಮಾತನಾಡಿ, ಸಂಸ್ಥೆಯಿAದ ಮುಂದಿನ ದಿನಗಳಲ್ಲಿ ಆರೋಗ್ಯ ಶಿಬಿರಗಳು, ಶಿಕ್ಷಣಕ್ಕೆ ಸಂಬAಧಿಸಿದAತೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಅಲ್ಲದೆ ಕೃಷಿಕರಿಗೆ ಉಪಯುಕ್ತವಾಗುವ ಕಾರ್ಯಕ್ರಮ ರೂಪಿಸಲಾಗುತ್ತದೆ ಎಂದು ಹೇಳಿದರು.

ವೀರಾಜಪೇಟೆ ಲಯನ್ಸ್ ಕ್ಲಬ್ ಘಟಕದ ಕಾರ್ಯದರ್ಶಿಯಾಗಿ ಪಟ್ಟಡ ವಿಕ್ರಂ ಚೆಂಗಪ್ಪ, ಕೋಶಾಧಿಕಾರಿಗಳಾಗಿ ನಿಯಾಜ್ ಕೆ.ಪಿ. ಆಯ್ಕೆಯಾದರು.

ಉಪಾಧ್ಯಕ್ಷರುಗಳಾಗಿ ಪ್ರಧಾನ್ ತಮ್ಮಯ್ಯ ಪಿ.ಜಿ., ಸುಬ್ಬಯ್ಯ ಪಿ.ಪಿ ಮತ್ತು ಅಜಿತ್ ಎ.ಎ., ಕ್ಲಬ್‌ನ ಆಡಳಿತಾಧಿಕಾರಿಗಳಾಗಿ ತ್ರಿಷು ಗಣಪತಿ ಬಿ.ಯು, ನಿರ್ದೇಶಕರಾಗಿ ಸೋಮಯ್ಯ ಕೆ.ಎಂ, ಮೋಹನ್ ರೈ, ಪ್ರತಾಪ್ ಚಿನ್ನಪ್ಪ, ಗಿಲ್ ಸೋಮಯ್ಯ ಮತ್ತು ಪೌಲ್ ಕ್ಸೇವಿಯರ್ ಅವರುಗಳು ಆಯ್ಕೆಗೊಂಡರು.

ಕಾರ್ಯಕ್ರಮ ಉದ್ದೇಶಿಸಿ ಪ್ರಾಂತೀಯ ಅಧ್ಯಕ್ಷ ನವೀನ್ ಅಂಬೆಕಲ್ ಮತ್ತು ವಲಯ ಅಧ್ಯಕ್ಷ ಎಂ.ಎ. ಬಾಲಕೃಷ್ಣ ಮಾತನಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಕ್ಲಬ್‌ಗಳ ಪದಾಧಿಕಾರಿಗಳು, ಲಯನ್ಸ್ ಕ್ಲಬ್ ವೀರಾಜಪೇಟೆಯ ಸದಸ್ಯರು ಹಾಜರಿದ್ದರು.