(ಕೆ.ಎಂ. ಇಸ್ಮಾಯಿಲ್ ಕಂಡಕರೆ)

ಮಡಿಕೇರಿ, ಜು. ೧೭: ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಮಹಿಳೆಯರಿಗೆ ಸರ್ಕಾರಿ ಬಸ್‌ನಲ್ಲಿ ಉಚಿತ ಪ್ರಯಾಣ ಯೋಜ ನೆಗೆ ಕೊಡಗು ಜಿಲ್ಲೆಯ ಲ್ಲಿಯೂ ಭಾರೀ ಸ್ಪಂದನ ದೊರೆತಂದಿದೆ.

ಮಹಿಳೆಯರ ಉಚಿತ ಪ್ರಯಾಣ ಯೋಜನೆ ಕಳೆದ ತಿಂಗಳು ಜೂನ್ ೧೧ಕ್ಕೆ ಜಾರಿಗೆ ಬಂದಿತ್ತು. ಯೋಜನೆ ಜಾರಿಗೆ ಬಂದು, ಜುಲೈ ೧೧ಕ್ಕೆ ಒಂದು ತಿಂಗಳು ಪೂರ್ಣಗೊಂಡಿದೆ.

ಜುಲೈ ೧೧ವರೆಗೆ ಕೊಡಗು ಜಿಲ್ಲೆಯಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್‌ನಲ್ಲಿ ೪,೧೨,೪೪೦ ಮಹಿಳೆಯರು ಉಚಿತ ಪ್ರಯಾಣವನ್ನು ಮಾಡುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ ಪ್ರಯೋಜನ ಪಡೆದಿದ್ದಾರೆ.

ಮಹಿಳೆಯರ ಉಚಿತ ಪ್ರಯಾ ಣದಿಂದ ಜಿಲ್ಲೆಯಲ್ಲಿ ಕೆ.ಎಸ್. ಆರ್.ಟಿ.ಸಿ ಬಸ್ಸ್ನಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.

ಕೊಡಗಿನಲ್ಲಿ ಪ್ರತಿನಿತ್ಯ ೨೪ ಸಾವಿರ ಮಂದಿ ಕೆ.ಎಸ್.ಆರ್.ಟಿ.ಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು.

ಆದರೆ ಇದೀಗ ಮಹಿಳೆಯರ ಶಕ್ತಿ ಯೋಜನೆಯಿಂದ ಪ್ರತಿನಿತ್ಯ ೨೯,೦೦೦ ಸಾವಿರ ಮಂದಿ ಕೆ.ಎಸ್. ಆರ್.ಟಿ.ಸಿ ಬಸ್‌ನಲ್ಲಿ ಸಂಚಾರ ಮಾಡುತ್ತಿದ್ದಾರೆ ಎಂಬುದು ಈಗಿನ ಲೆಕ್ಕಚಾರ. ಇದರಿಂದ ಮಹಿಳೆಯರು ಕೆ.ಎಸ್.ಆರ್.ಟಿಸಿಗೆ ಆದಾಯವನ್ನು ಕೂಡ ತಂದುಕೊಟ್ಟಿದ್ದಾರೆ.

ಜೂನ್ ತಿಂಗಳಲ್ಲಿ ೨,೬೭,೦೦೦ ಮಂದಿ ಮಹಿಳೆಯರು, ಜುಲೈ ೧೦ವರೆಗೆ ಜಿಲ್ಲೆಯಲ್ಲಿ ೧,೪೫,೦೦೦ ಮಹಿ ಳೆಯರು ಕೆ.ಎಸ್.ಆರ್.ಟಿ.ಸಿ. ಬಸ್ ನಲ್ಲಿ ಉಚಿತ ಪ್ರಯಾಣ ಮಾಡಿದ್ದಾರೆ.

ಜೂನ್ ತಿಂಗಳಲ್ಲಿ ೯೯,೫೯,೦೦೦ ರೂ, ಜುಲೈ ತಿಂಗಳ ೧೦ವರೆಗೆ ೫೭,೫೮,೦೦೦ ರೂ. ಗಳಷ್ಟು ಹಣ ಕೆ.ಎಸ್. ಆರ್.ಟಿ.ಸಿ.ಗೆ ಸರಕಾರದಿಂದ ಬರಲಿದೆ.

ಪ್ರತಿನಿತ್ಯ ಅಂದಾಜು ಕೊಡಗು ಜಿಲ್ಲೆಯಲ್ಲಿ ೧೩ ಸಾವಿರ ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಶಕ್ತಿ ಯೋಜನೆಯಿಂದ ಕೆ.ಎಸ್.ಆರ್. ಟಿ.ಸಿಗೆ ೫ ಸಾವಿರ ಪ್ರಯಾಣಿಕರ ಹೆಚ್ಚಳವಾಗಿದೆ. ಪ್ರತಿನಿತ್ಯ ವಿದ್ಯಾರ್ಥಿ ಗಳು ಹೆಚ್ಚಾಗಿ ಉಚಿತ ಪ್ರಯಾಣದ ಲಾಭವನ್ನು ಪಡೆಯುತ್ತಿದ್ದಾರೆ.

ಅದಲ್ಲದೇ ಜಿಲ್ಲೆಯಿಂದ ಮಂಗ ಳೂರು, ಧರ್ಮಸ್ಥಳ, ಮೈಸೂರು ಹಾಗೂ ಬೆಂಗಳೂರು ಜಿಲ್ಲೆಗಳಿಗೆ ಮಹಿಳೆಯರು ಶಕ್ತಿ ಯೋಜನೆಯ ಮೂಲಕ ಉಚಿತ ಪ್ರಯಾಣ ಮಾಡು ತ್ತಿದ್ದಾರೆ. ಕೊಡಗಿನಲ್ಲಿ ಆರಂಭದಲ್ಲಿ ನೀರಸ ಸ್ಪಂದನೆ ವ್ಯಕ್ತವಾಗಿದ್ದ ಶಕ್ತಿ ಯೋಜನೆಗೆ ಇದೀಗ, ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.

ಗ್ರಾಮೀಣ ಭಾಗದಲ್ಲಿ ಕೆ.ಎಸ್.ಆರ್. ಟಿ.ಸಿ. ಬಸ್ ಸಂಚಾರ ವಿರಳ!

ಕೆ.ಎಸ್.ಆರ್.ಟಿ.ಸಿ ಪುತ್ತೂರು ವಿಭಾಗಕ್ಕೆ ಸೇರಿರುವ ಮಡಿಕೇರಿ ಘಟಕದಿಂದ ಪ್ರತಿನಿತ್ಯ ೯೧ ಬಸ್ ಸಂಚಾರ ಮಾಡುತ್ತಿದೆ. ಆದರೆ ಜಿಲ್ಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಕೆ.ಎಸ್.ಆರ್. ಟಿ.ಸಿ ಬಸ್ ಸಂಚಾರ ವಿರಳವಾಗಿದೆ.

ಗ್ರಾಮೀಣ ಭಾಗದಲ್ಲಿ ಇಂದಿಗೂ ಕೂಡ ಜಿಲ್ಲೆಯಲ್ಲಿ ಖಾಸಗಿ ಬಸ್‌ಗ ಳನ್ನೇ ಜನರು ಅವಲಂಬಿಸಿ ಪ್ರಯಾಣ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ೧೭೫ ಕ್ಕೂ ಅಧಿಕ ಖಾಸಗಿ ಬಸ್‌ಗಳು ಓಡಾಡುತ್ತಿದೆ.

ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯಿಂದ ಖಾಸಗಿ ಬಸ್ ಮಾಲೀಕರಿಗೆ ಹೊಡೆತ ಬಿದ್ದಿದೆ. ಕೊಡಗು ಜಿಲ್ಲೆಯಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹಾಗೂ ಮಹಿಳೆಯರು ಇದುವರೆಗೆ ಪೂರ್ಣ ಪ್ರಮಾಣದಲ್ಲಿ ಶಕ್ತಿ ಯೋಜನೆಯ ಲಾಭವನ್ನು ಪಡೆ ಯಲು ಸಾಧ್ಯವಾಗಿಲ್ಲ.

ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಕೂಡ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ ಪ್ರಾರಂಭಗೊAಡರೆ, ಕೊಡ ಗಿನಲ್ಲಿ ಸರ್ಕಾರದ ಗ್ಯಾರಂಟಿಯಲ್ಲಿ ಒಂದಾದ ಶಕ್ತಿ ಯೋಜನೆಗೆ ಮತ್ತಷ್ಟು ಶಕ್ತಿ ತುಂಬುತ್ತದೆ ಹಾಗೂ ಗ್ರಾಮೀಣ ಭಾಗದ ಮಹಿಳೆಯರು, ವಿದ್ಯಾ ರ್ಥಿಗಳಿಗೆ ಪ್ರಯೋ ಜನವಾಗಲಿದೆ.