ಶನಿವಾರಸAತೆ, ಜು. ೧೭: ಶಿಕ್ಷಣ ಕೆಲವರ ಸ್ವತ್ತಲ್ಲ; ಸರ್ವರಿಗೂ ಸಿಗುವಂತಹ ಅಮೂಲ್ಯ ಸಂಪತ್ತಾಗಿದ್ದು ಶ್ರದ್ಧೆಯಿಂದ, ನಿರಂತರ ಅಧ್ಯಯನದಿಂದ ಗಳಿಸುವ ಸೌಭಾಗ್ಯವಾಗಿದೆ ಎಂದು ಕಾವೇರಿ ಪಿಯು ಕಾಲೇಜಿನ ಉಪನ್ಯಾಸಕ ಎಚ್.ಎ. ಕಾಂತ ಅಭಿಪ್ರಾಯಪಟ್ಟರು.
ಪಟ್ಟಣದ ವಿಘ್ನೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಭಾರತಿ ವಿದ್ಯಾಸಂಸ್ಥೆ ಪ್ರಥಮ ದರ್ಜೆ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಹಿಂದಿನ ಕಾಲದಲ್ಲಿ ಹಿಂದೆ ಗುರುಗಳಿದ್ದು, ಮುಂದೆ ಗುರಿ ಇದ್ದು ಸಾಗುತ್ತಿತ್ತು ವೀರರ ದಂಡು. ಅಂದು ವಿದ್ಯಾರ್ಥಿಗಳ ಭವಿಷ್ಯ ಸುಂದರವಾಗಿ ರೂಪುಗೊಳ್ಳುತ್ತಿತ್ತು. ಆದರೆ ಇಂದು ಹಿಂದೆ ಗುರುವೂ ಇಲ್ಲ ಮುಂದೆ ಗುರಿಯೂ ಇಲ್ಲದಂತಾಗಿ ಸಾಗುತ್ತಿದೆ ಕುರಿಗಳ ಹಿಂಡು ಎಂಬAತಾಗಿದೆ ಎಂದು ವಿಷಾದಿಸಿದರು.
ಉಪನ್ಯಾಸಕ ಚಂದ್ರಕಾAತ್ ಮಾತನಾಡಿ, ವಿದ್ಯಾರ್ಥಿಗಳು ಬದುಕಿನ ಬಗ್ಗೆ ಕಂಡ ಕನಸುಗಳನ್ನು ನನಸು ಮಾಡಿಕೊಳ್ಳಲು ಶಿಕ್ಷಣ ಸಹಕಾರಿಯಾಗಿದ್ದು ನಡೆ-ನುಡಿ, ಆಚಾರ-ವಿಚಾರಗಳು ಉತ್ತಮವಾಗಿರಬೇಕು ಎಂದರು.
ವಿದ್ಯಾರ್ಥಿಗಳಾದ ಪ್ರಸಾದ್ ಹಾಗೂ ನೇತ್ರಪ್ರಸಾದ್ ಅನಿಸಿಕೆ ಹಂಚಿಕೊAಡರು. ಉಪನ್ಯಾಸಕರಾದ ಮೋಹನ್ ಕುಮಾರ್, ಪೊನ್ನಪ್ಪ, ಚಂದ್ರಶೇಖರ್ ಮೂರ್ತಿ, ಶೋಭಾ, ಹರ್ಷಿತಾ ಮಾತನಾಡಿದರು.
ಪ್ರಾಂಶುಪಾಲ ಈ.ಎಂ. ದಯಾನಂದ್ ಮಾತನಾಡಿ, ಪದವಿ ಮುಗಿಸುತ್ತಿರುವ ವಿದ್ಯಾರ್ಥಿಗಳು ಉತ್ತಮ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು, ಸಂಸ್ಕಾರವನ್ನು ಕಲಿತು, ಸಮಾಜದಲ್ಲಿ ಗೌರವಯುತ ಸ್ಥಾನಮಾನ ಗಳಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರು, ಸಿಬ್ಬಂದಿಗಳು ಇದ್ದರು.