ಮಡಿಕೇರಿ, ಜು. ೧೭: ಲಯನ್ಸ್ ಕ್ಲಬ್ ಮೂರ್ನಾಡ್ ೩೦೦ ಗಿಡಗಳನ್ನು ವಿತರಿಸುವ ಮೂಲಕ ವನಮ ಹೋತ್ಸವ ದಿನಾಚರಣೆಯನ್ನು ಆಚರಿಸಿತು. ಕ್ಲಬ್ ವತಿಯಿಂದ ಮೂರ್ನಾಡಿನ ವಿವಿಧ ಸಾರ್ವಜನಿಕ ಕಚೇರಿಗಳಾದ್ಯಂತ ಗಿಡ ನೆಟ್ಟು ಪಟ್ಟಣದ ಜನತೆಗೆ ಸಸಿಗಳನ್ನು ವಿತರಿಸಲಾಯಿತು. ಅಧ್ಯಕ್ಷೆ ಬಿಂದು ಗಣಪತಿ (ಬೋಪಣ್ಣ), ಕಾರ್ಯ ದರ್ಶಿ ಎ.ಎಸ್.ಚೆಂಗಪ್ಪ, ಖಜಾಂಚಿ ಪಿ. ಪ್ರಕಾಶ್ ಕಾವೇರಪ್ಪ, ಲಯನ್ಸ್ ಕ್ಲಬ್ ಮೂರ್ನಾಡಿನ ಸದಸ್ಯರು ಹಾಗೂ ಮೂರ್ನಾಡು ಜೂನಿಯರ್ ಕಾಲೇಜಿನ ಎನ್ಸಿಸಿ ಕೆಡೆಟ್ಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸೆಸ್ಕಾಂ ಜೂನಿಯರ್ ಇಂಜಿನಿ ಯರ್ ಪ್ರಕಾಶ್ ಎಂ, ಮೂರ್ನಾಡು ಪೊಲೀಸ್ ಠಾಣೆಯ ಎಎಸ್ಐ ಅನಿಲ್ ಕುಮಾರ್, ಮೂರ್ನಾಡು ಪಂಚಾಯಿತಿ ಪಿಡಿಓ ಚಂದ್ರಮೌಳಿ ಮತ್ತು ಕೊಡಗು ಜಿಲ್ಲಾ ಪಂಚಾಯಿತಿ ಪಶು ಚಿಕಿತ್ಸಾಲಯದ ಡಾ. ಶಿಲ್ಪಾ ಅವರ ಸಮ್ಮುಖದಲ್ಲಿ ಆಯಾ ಸಾರ್ವಜನಿಕ ಕಚೇರಿಗಳಲ್ಲಿ ತಲಾ ೧೦ ಮರಗಳನ್ನು ನೆಡಲಾಯಿತು. ಕಾರ್ಯ ಕ್ರಮದ ಅಂಗವಾಗಿ ಮೂರ್ನಾಡಿ ನಾದ್ಯಂತ ೨೫೦ ಗಿಡಗಳನ್ನು ಜನರಿಗೆ ವಿತರಿಸಲಾಯಿತು. ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡು ಗಿಡಗಳ ವಿತರಣೆಯಿಂದ ಪ್ರಯೋಜನ ಪಡೆದರು. ಪ್ರತಿ ವರ್ಷ ನಾವೆಲ್ಲರೂ ನಮ್ಮ ಹೆಸರಿನಲ್ಲಿ ಎರಡು ಗಿಡಗಳನ್ನು ಬೆಳೆಸಿ ಅದನ್ನು ಸಂರಕ್ಷಿಸಬೇಕು ಎಂದು ಅಧ್ಯಕ್ಷೆ ಬಿಂದು ಗಣಪತಿ ಹೇಳಿದರು. ಜೂನಿಯರ್ ಕಾಲೇಜು ಮೂರ್ನಾಡಿನ ಎನ್ಸಿಸಿ ಕೆಡೆಟ್ ಗಳಿಂದ "ಹಸಿರೇ ಉಸಿರು" ಮತ್ತು "ಮನೆಗೊಂದು ಮರ, ಊರಿಗೊಂದು ವನ" ಎಂಬ ಘೋಷಣೆಗಳ ನಡುವೆ ಕಾರ್ಯಕ್ರಮವು ಯಶಸ್ವಿ ಯಾಯಿತು.