*ಗೋಣಿಕೊಪ್ಪ, ಜು. ೧೭: ಕೊಡ ಗಿನ ಸಂಸ್ಕೃತಿಯಾಗಿ ಹಾಕಿ ಕ್ರೀಡೆ ಹೆಸರು ಪಡೆದುಕೊಂಡಿರುವುದರಿAದ ಮತ್ತಷ್ಟು ಟರ್ಫ್ ಮೈದಾನಗಳ ನಿರ್ಮಾಣ ಅವಶ್ಯ ಎಂದು ಅಂರ‍್ರಾಷ್ಟಿçÃಯ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಹೇಳಿದರು.
ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕಾಲ್ಸ್ ಶಾಲೆಯಲ್ಲಿ ಆಯೋಜಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಜಿಲ್ಲೆಯಿಂದ ರಾಷ್ಟçವನ್ನು ಪ್ರತಿನಿಧಿಸಿರುವ ಹಾಕಿ ಆಟಗಾರರಲ್ಲಿ ಅದ್ಭುತ ಪ್ರತಿಭೆಯನ್ನು ನಾವು ಕಂಡಿದ್ದೇವೆ. ಇಲ್ಲಿನ ಸಂಸ್ಕೃತಿ ಯಲ್ಲಿ ಹಾಕಿ ಅಡಗಿರುವುದರಿಂದ ಒಲಿಂಪಿಕ್‌ನಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಇದರ ಅನುಷ್ಠಾನಕ್ಕೆ ಹಾಕಿ ಮೈದಾನ, ಮೂಲಭೂತ ಸೌಕರ್ಯ ದಕ್ಕಿಸಿಕೊಳ್ಳಲು ಹೋರಾ ಟಗಳು ಹೆಚ್ಚಾಗಬೇಕಿದೆ. ಟರ್ಫ್ ಮೈದಾನಗಳು ಒಬ್ಬ ಪ್ರತಿಭೆಯನ್ನು ವಿಶ್ವಮಟ್ಟದ ಗುಣಮಟ್ಟ ಪಡೆದು ಕೊಳ್ಳಲು ಪೂರಕವಾಗಲಿದೆ. ಜಿಲ್ಲೆಯ ಮತ್ತಷ್ಟು ಹಾಕಿ ಆಟಗಾರರನ್ನು ದೇಶ ನಿರೀಕ್ಷಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.
ಕೊಡಗಿನ ವಾತಾವರಣ, ಆಹಾರ ಪದ್ಧತಿ ಇಲ್ಲಿನ ಹಾಕಿ ಕಲಿಗಳ ಬೆಳವಣಿಗೆಗೆ ಸಹಕಾರಿಯಾಗುತ್ತಿದೆ. ಕ್ರೀಡಾ ಕ್ಷೇತ್ರದಲ್ಲಿ ವಿಶೇಷವಾಗಿ ಕೊಡಗು ಹಾಕಿಯಲ್ಲಿ ಗುರುತಿಸಿ ಕೊಂಡಿರುವುದರಿAದ ಸಾಂಪ್ರದಾಯಿಕ ಹಿನ್ನೆಲೆ ಕೂಡ ಹೊಂದಿದೆ. ಜಮೈಕಾದಿಂದ ಹೆಚ್ಚು ಓಟಗಾರರನ್ನು ವಿಶ್ವಕ್ಕೆ ದೊರೆಯುವಂತಾಗಿದೆ. ದೇಶದ ಮಹಾರಾಷ್ಟç, ಮುಂಬೈ ಭಾಗದಿಂದ ಉತ್ತಮ ಬ್ಯಾಟರ್ ಕೂಡ ದೊರೆ ಯುತ್ತಿದೆ. ಇವೆಲ್ಲವೂ ಸ್ಥಳೀಯವಾಗಿ ಸಾಂಪ್ರದಾಯಿಕವಾಗಿ ದೊರೆಯುವ ಸಂಪನ್ಮೂಲಗಳು. ಇದರ ಬೆಳವಣಿಗೆ ಪೋಷಣೆ ಅಗತ್ಯ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಮತ್ತಷ್ಟು ಹಾಕಿ ಮೈದಾನ ನಿರ್ಮಾಣವಾಗಬೇಕು. ಸ್ಥಳೀಯ ವಾಗಿ ಸಾಂಪ್ರದಾಯಿಕವಾಗಿ ಬೆಳವಣಿಗೆಯಲ್ಲಿರುವ ಕ್ರೀಡೆಗೆ ಮತ್ತಷ್ಟು ಒತ್ತು ನೀಡಲು ದೇಶವನ್ನು ಗಮನ ಸೆಳೆಯುವ ಪ್ರಯತ್ನ ಕೂಡ ನಡೆಸಲಾಗುತ್ತಿದೆ. ಮೈದಾನ, ತರಬೇತಿ, ಮೂಲಭೂತ ಸೌಕರ್ಯಕ್ಕೆ ಆದ್ಯತೆ ಕಲ್ಪಿಸುವಂತಾಗಬೇಕು ಎಂದರು.
ಕ್ರಿಕೆಟ್ ಕ್ಷೇತ್ರಕ್ಕೆ ರಾಬಿನ್ ಉತ್ತಪ್ಪ ಅವರಂತಹ ಪ್ರತಿಭೆ ದೊರೆತಿದೆ. ಆದರೆ, ಕ್ರಿಕೆಟ್ ಆಟಕ್ಕೆ ಮಾತ್ರ ಉತ್ತೇಜನ ನೀಡುವುದರಿಂದ ಪ್ರಯೋಜನವಾಗುವುದಿಲ್ಲ. ಕೇವಲ ಹಣಗಳಿಸಬೇಕೆಂಬ ಉದ್ದೇಶದಿಂದ ಕ್ರಿಕೆಟ್ ಆಟವನ್ನು ಗುರಿಯಾಗಿಸಿಕೊಳ್ಳುವುದು ಉತ್ತಮ ಬೆಳವಣಿಗೆಯಾಗದು. ಒಂದು ಆಟ ಸಂಸ್ಕೃತಿಯAತೆ ಬಿಂಬಿಸಿಕೊAಡಾಗ ಅದರ ಪೋಷಣೆಗೆ ಯೋಜನೆ ರೂಪಿಸಿಕೊಳ್ಳಬೇಕಿದೆ. ಕೊಡವ ಕೌಟುಂಬಿಕ ಹಾಕಿ ಕ್ರೀಡೆ ವಿಶ್ವಕ್ಕೆ ಮಾದರಿಯಾಗಿ ದಾಖಲಾಗಿದೆ. ಇಷ್ಟೊಂದು ಪ್ರತಿಭೆ ಕುಟುಂಬದಲ್ಲಿಯೆ ದೊರೆಯುವಾಗ ಪ್ರೋತ್ಸಾಹಕ್ಕೆ ಕಾರ್ಯಕ್ರಮ ರೂಪಿಸಬೇಕಿದೆ. ದೇಶದ ಇಂತಹದ್ದೇ ಭಾಗದಲ್ಲಿ ಮಾತ್ರ ಒಲಿಂಪಿಕ್ ತರಬೇತಿ ಕೇಂದ್ರಗಳನ್ನು ನಿರ್ಮಿಸುವುದಕ್ಕಿಂತ ಸ್ಥಳೀಯ ಪ್ರತಿಭೆಯನ್ನಾಧರಿಸಿ ಮೂಲ ಸೌಕರ್ಯದೊಂದಿಗೆ ತರಬೇತಿ ಕೇಂದ್ರ ಸ್ಥಾಪಿಸಲು ಗಮನ ಸೆಳೆಯಲಾಗಿದೆ. ಕ್ರೀಡಾ ಮೂಲ ಸೌಕರ್ಯಗಳು ದೇಶದಲ್ಲಿ ಮತ್ತಷ್ಟು ವಿಸ್ತಾರಗೊಳ್ಳಬೇಕಿದೆ ಎಂದರು.
ಪ್ರತಿ ವ್ಯಕ್ತಿಗೆ ಒತ್ತಡ ನಿಭಾಯಿಸಲು ಕ್ರೀಡೆ ಸಹಕಾರಿ. ಎಂತಹದ್ದೇ ಪರಿಸ್ಥಿತಿಯಲ್ಲಿ ಗೆದ್ದು ಬರಲು ಕ್ರೀಡೆ ಅಗತ್ಯ. ಈ ನಿಟ್ಟಿನಲ್ಲಿ ಪಾಲಕರು ಕೇವಲ ಶಿಕ್ಷಣಕ್ಕೆ ಮಾತ್ರ ಒತ್ತಡ ಹೇರುವುದಕ್ಕಿಂತ ಕ್ರೀಡಾ ಪ್ರೋತ್ಸಾಹ, ಮೂಲಭೂತ ಸೌಕರ್ಯ ಇರುವಂತಹ ಶಿಕ್ಷಣ ಕೇಂದ್ರಕ್ಕೆ ಮಕ್ಕಳನ್ನು ಸೇರಿಸುವುದರಿಂದ ಒತ್ತಡ ನಿಭಾಯಿಸುವ ಸಾಮರ್ಥ್ಯ ದೊರೆಯುತ್ತದೆ. ಕಾಲ್ಸ್ ಶಾಲೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ ವಾತಾವರಣ ಹೊಂದಿರುವುದು ಹೆಮ್ಮೆಯ ವಿಚಾರ. ನಮಗೆಲ್ಲ ಸ್ಪೂರ್ತಿಯಾಗಿರುವ ಅಂರ‍್ರಾಷ್ಟಿçÃಯ ಅಥ್ಲೀಟ್ ಅಶ್ವಿನಿ ನಾಚಪ್ಪ ದೂರದೃಷ್ಠಿಯ ಚಿಂತನೆಯಲ್ಲಿ ಕ್ರೀಡೆಗೆ ಪೂರಕ ಸೌಲಭ್ಯ ನೀಡಿ ಮಕ್ಕಳಲ್ಲಿನ ಪ್ರತಿಭೆಗೆ ಪ್ರೋತ್ಸಾಹ ನೀಡುತ್ತಿರುವುದು ಸಂತಸದ ವಿಚಾರ. ಸೂಕ್ತವಾದ ಮೈದಾನ, ಹಸಿರು ಪರಿಸರ, ನೈರ್ಮಲ್ಯ, ಪೋಶಕಾಂಶದ ಆಹಾರ ಪದ್ಧತಿ ಎಲ್ಲವೂ ಮಕ್ಕಳಲ್ಲಿ ಭಾವನಾತ್ಮಕ ಬೆಳವಣಿಗೆಗೆ ಸಹಕಾರಿಯಾಗಿದೆ. ಆಟವನ್ನು ಶಿಕ್ಷಣದ ಮೂಲಕ ಗೋಡೆಗಳ ನಡುವೆ ಕಲಿಸಲು ಸಾಧ್ಯವಿಲ್ಲ. ಪೂರಕವಾದ ಮೈದಾನ ಕೂಡ ಅವಶ್ಯ. ಇವೆಲ್ಲವೂ ಕಾಲ್ಸ್ ಶಾಲೆಯಲ್ಲಿ ರೂಪಿಸಿರುವುದು, ಅವರ ಕ್ರೀಡಾಸಕ್ತಿಯ ಸಂಕೇತವಾಗಿದೆ ಎಂದರು.
ಅAರ‍್ರಾಷ್ಟಿçÃಯ ಮಾಜಿ ಅಥ್ಲೀಟ್ ಅಶ್ವಿನಿ ನಾಚಪ್ಪ, ಕಾಲ್ಸ್ ಶಾಲಾ ಮುಖ್ಯಸ್ಥ ದತ್ತ ಕರುಂಬಯ್ಯ, ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ಪ್ರ. ಕಾರ್ಯದರ್ಶಿ ಎನ್. ಎನ್. ದಿನೇಶ್, ಖಜಾಂಚಿ ವಿ. ವಿ. ಅರುಣ್‌ಕುಮಾರ್, ನಿರ್ದೇಶಕರಾದ ಚಿಮ್ಮಣಮಾಡ ದರ್ಶನ್ ದೇವಯ್ಯ, ಸಿಂಗಿ ಸತೀಶ್, ಎಂ. ಎಂ. ಚನ್ನನಾಯಕ ಇದ್ದರು.