ಸಿದ್ದಾಪುರ, ಜು. ೧೭: ಚಿನ್ನಾಭರಣಗಳನ್ನು ನೀಡುವುದಾಗಿ ನಂಬಿಸಿ ಹೊರ ಜಿಲ್ಲೆಯ ಮಹಿಳೆಯೋರ್ವರು ವೃದ್ಧ ಮಹಿಳೆಗೆ ಮೋಸ ಮಾಡಿ ಆಭರಣಗಳನ್ನು ಕದ್ದೊಯ್ದು ಪರಾರಿಯಾಗಿರುವ ಘಟನೆ ಸಿದ್ದಾಪುರದಲ್ಲಿ ನಡೆದಿದೆ. ಸಿದ್ದಾಪುರ ಸಮೀಪದ ಬಾಡಗ ಬಾಣಂಗಾಲ ಗ್ರಾಮದ ತೂಪನಕೊಲ್ಲಿಯ ಕಾರ್ಮಿಕ ಮಹಿಳೆ ಕಾವೇರಿ ಎಂಬವರು ಮೋಸಕ್ಕೆ ಸಿಲುಕಿದ ಮಹಿಳೆ.

ಏನಿದು ಘಟನೆ?

ತಾ. ೧೬ರಂದು ತೂಪನಕೊಲ್ಲಿಯ ಕಾಫಿ ತೋಟದ ಲೈನ್‌ಮನೆಯಲ್ಲಿ ವಾಸಮಾಡಿಕೊಂಡಿರುವ ಕಾರ್ಮಿಕ ಮಹಿಳೆ ಕಾವೇರಿ ಎಂಬವರು ತಮ್ಮ ಸಂಬAಧಿಕರ ವಿವಾಹ ಕಾರ್ಯಕ್ಕೆ ಸಿದ್ದಾಪುರಕ್ಕೆ ಬಂದಿದ್ದರು. ಸಿದ್ದಾಪುರದ ವೀರಾಜಪೇಟೆ ರಸ್ತೆಯಲ್ಲಿರುವ ಮದುವೆಯ ಮಂಟಪದಲ್ಲಿ ಮದುವೆ ಕಾರ್ಯ ಮುಗಿಸಿ ಮನೆಗೆ

(ಮೊದಲ ಪುಟದಿಂದ) ಹಿಂತಿರುಗಿ ಹೋಗಲು ಸಿದ್ದಾಪುರ ಬಸ್ ನಿಲ್ದಾಣಕ್ಕೆ ಬಂದಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಮಧ್ಯಾಹ್ನದ ಸಮಯದಲ್ಲಿ ಕಾವೇರಿ ಅವರು ಬಸ್ ನಿಲ್ದಾಣದಲ್ಲಿ ನಿಂತಿರುವ ಸಂದರ್ಭದಲ್ಲಿ ಅಪರಿಚಿತ ಮಹಿಳೆಯೋರ್ವಳು ಆಗಮಿಸಿ ತಾನು ಕೊಳ್ಳೆಗಾಲದ ನಿವಾಸಿಯಾಗಿದ್ದು, ತನಗೆ ರೂ. ೫೦೦ ಸಾಲ ನೀಡುವಂತೆ ಕೇಳಿದ್ದಾಳೆ. ಈ ಸಂದರ್ಭದಲ್ಲಿ ನನ್ನ ಬಳಿ ಹಣ ಇಲ್ಲವೆಂದು ಕಾವೇರಿ ತಿಳಿಸಿದ್ದಾರೆ. ಕೂಡಲೇ ಅಪರಿಚಿತ ಮಹಿಳೆ ನನ್ನ ಬಳಿ ಚಿನ್ನಾಭರಣಗಳು ಸುಮಾರು ಇದೆ. ಅದನ್ನು ನಿಮಗೆ ನೀಡುವುದಾಗಿ ಹೇಳಿದ್ದು, ನಿಮ್ಮ ಕತ್ತಿನಲ್ಲಿರುವ ಹಾಗೂ ಕಿವಿಯಲ್ಲಿರುವ ಆಭರಣಗಳನ್ನು ತನಗೆ ನೀಡುವಂತೆ ಹೇಳಿ ಅಪರಿಚಿತ ಮಹಿಳೆ ಕಾವೇರಿಯವರ ತಲೆಗೆ ಕೈ ಇಟ್ಟು ಕೇಳಿದ್ದಾರೆ ಎನ್ನಲಾಗಿದೆ. ಕೂಡಲೇ ಕಾವೇರಿಯವರು ತನ್ನ ಕತ್ತಿನಲ್ಲಿದ್ದ ಮತ್ತು ಕಿವಿಯಲ್ಲಿದ್ದ ಓಲೆಯನ್ನು ಬಿಚ್ಚಿ ಕೊಟ್ಟಿದ್ದಾರೆ. ನಂತರ ಸಂಶಯದಿAದ ಸಿದ್ದಾಪುರ- ವೀರಾಜಪೇಟೆ ರಸ್ತೆಯಲ್ಲಿರುವ ಚಿನ್ನದಂಗಡಿಗೆ ಈರ್ವರು ತೆರಳಿ ಚಿನ್ನಾಭರಣಗಳನ್ನು ಪರಿಶೀಲಿಸಿದಾಗ ನಕಲಿ ಎಂದು ತಿಳಿದುಬಂದಿದೆ. ಇದಾದ ನಂತರ ಸ್ವಲ್ಪ ಸಮಯ ಕಳೆದ ಬಳಿಕ ಅಪರಿಚಿತ ಮಹಿಳೆ ಬಸ್ ನಿಲ್ದಾಣಕ್ಕೆ ಬಂದ ಬಳಿಕ ನಾಪತ್ತೆಯಾಗಿದ್ದಾಳೆ. ಮೋಸಕ್ಕೆ ಸಿಲುಕಿದ ಮಹಿಳೆ ಕಾವೇರಿಯು ಮನೆಗೆ ತೆರಳಿದಾಗ ಅವರ ಪುತ್ರಿ ಕಾವೇರಿ ಬಳಿ ಚಿನ್ನಾಭರಣಗಳು ಎಲ್ಲಿ ಎಂದು ಕೇಳಿದಾಗ ಸತ್ಯಾಂಶ ಹೊರಬಂದಿದೆ. ಆದರೆ, ಅಪರಿಚಿತ ಮಹಿಳೆ ತಲೆಗೆ ಕೈ ಇಟ್ಟು ಮಂಕು ಬರುವ ರೀತಿಯಲ್ಲಿ ಮಾಡಿ ಚಿನ್ನಾಭರಣಗಳನ್ನು ಲಪಟಾಯಿಸಿ ಪರಾರಿಯಾಗಿದ್ದಾಳೆ. ತನಗೆ ಇನ್ನು ಮಂಕು ಬಿಟ್ಟಿರುವುದಿಲ್ಲ. ತಲೆ ಸುತ್ತುವ ರೀತಿಯಲ್ಲಿ ಆಗುತ್ತಿದೆ ಎಂದು ಹೇಳಿಕೊಂಡಿದ್ದಾಳೆ.

ಮೋಸಕ್ಕೆ ಸಿಲುಕಿದ ಕಾವೇರಿಯವರು ಸಿದ್ದಾಪುರ ಪೊಲೀಸ್ ಠಾಣೆಗೆ ಆಗಮಿಸಿ ಪುಕಾರು ನೀಡಿದ್ದು, ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಚಿನ್ನದಂಗಡಿಗೆ ತೆರಳಿ ಮಾಹಿತಿ ಪಡೆದುಕೊಂಡರು. ಅಲ್ಲದೆ ವಂಚನೆಗೆ ಸಿಲುಕಿದ ಮಹಿಳೆಯಿಂದ ಮಾಹಿತಿ ಕಲೆ ಹಾಕಿದ್ದಾರೆ. ಹಾಡಹಗಲೇ ಅಪರಿಚಿತ ಮಹಿಳೆಯಿಂದ ಸುಮಾರು ಒಂದೂವರೆ ಪವನ್ ಚಿನ್ನಾಭರಣಗಳನ್ನು ಕಳೆದುಕೊಂಡಿರುವ ಬಡ ಕಾರ್ಮಿಕ ಮಹಿಳೆಗೆ ದಿಕ್ಕು ತೋಚದಂತಾಗಿದೆ. ಇನ್ನಾದರೂ ಮಹಿಳೆಯರು ಚಿನ್ನಾಭರಣಗಳ ಆಸೆಗೆ ಸಿಲುಕದೆ ತಮ್ಮಲ್ಲಿರುವ ಆಭರಣಗಳ ಬಗ್ಗೆ ಜಾಗರೂಕರಾಗಿ ಎಚ್ಚರವಹಿಸಬೇಕು. ನಕಲಿ ಆಭರಣ ನೀಡಿದ ಮಹಿಳೆಗಾಗಿ ಶೋಧ ಕಾರ್ಯ ನಡೆಯುತ್ತಿದೆ. -ಎ.ಎನ್. ವಾಸು