ಭಾಗಮಂಡಲ, ಜು. ೧೭: ಮಳೆಯ ರೌದ್ರಾವತಾರ ಕಡಿಮೆಯಾಗಿ ಕಾವೇರಿ ನದಿಯು ಶಾಂತಗೊಳ್ಳಲಿ ಎಂಬ ಉದ್ದೇಶದಿಂದ ಭಾಗಮಂಡಲದಲ್ಲಿ ವರ್ಷಂಪ್ರತಿ ಆಚರಿಸುವ ಪೊಲಿಂಕಾನ ಉತ್ಸವವನ್ನು ಸೋಮವಾರ ಸಾಂಪ್ರದಾಯಿಕ ವಿಧಿವಿಧಾನ ಗಳೊಂದಿಗೆ ಆಚರಿಸಲಾಯಿತು.
ಭಗಂಡೇಶ್ವರ ದೇವಾಲಯದಲ್ಲಿ ಮಧ್ಯಾಹ್ನ ೧೨ ಗಂಟೆಗೆ ಮಹಾಪೂಜೆ ಸಲ್ಲಿಸಿದ ಬಳಿಕ ಬಾಳೆದಿಂಡಿನ ಉತ್ಸವ ಮಂಟಪದೊAದಿಗೆ ಕಾವೇರಿ ಮಾತೆಗೆ ವಸ್ತಾçಭರಣ, ಕರಿಮಣಿ, ಬಿಚ್ಚೋಲೆ, ಸೀರೆ, ಬೆಳ್ಳಿತಟ್ಟೆ, ಬೆಳ್ಳಿತೊಟ್ಟಿಲು, ಬೆಳ್ಳಿಮಗು, ಕರಿಮಣಿ ಬಿಚ್ಚೋಲೆ ಬೆಳ್ಳಿಯ ತಟ್ಟೆಯಲ್ಲಿಟ್ಟು ಭಕ್ತವೃಂದದ ಸಮ್ಮುಖದಲ್ಲಿ ಪೂಜಿಸಲಾಯಿತು.
(ಮೊದಲ ಪುಟದಿಂದ) ಚಂಡೆವಾದ್ಯದೊAದಿಗೆ ಬಾಳೆದಿಂಡು ಗಳಿಂದ ರಚಿಸಲಾದ ಪೊಲಿಂಕಾನ ಮಂಟಪವನ್ನು ಭಗಂಡೇಶ್ವರ ದೇವಾಲಯಕ್ಕೆ ಒಂದು ಸುತ್ತು ಪ್ರದಕ್ಷಿಣೆ ಬಂದು ಮಂಗಳಾರತಿ ನಡೆಸಿದ ನಂತರ ತ್ರಿವೇಣಿ ಸಂಗಮದ ಬಳಿ ಸಾಂಪ್ರದಾಯಿಕ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದ ನಂತರ ನದಿ ನೀರಿನಲ್ಲಿ ಬಾಳೆದಿಂಡಿನ ಮಂಟಪ ವನ್ನು ತೇಲಿಬಿಡಲಾಯಿತು. ಬಹಳ ಹಿಂದಿನಿAದ ಭಾಗಮಂಡಲದಲ್ಲಿ ಪೊಲಿಂಕಾನ ಉತ್ಸವವನ್ನು ಸಾಂಪ್ರ ದಾಯಿಕ ರೀತಿಯಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ. ಅರ್ಚಕ ಹರೀಶ್ ಭಟ್ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮ ಜರುಗಿತು, ಪಾಡಿ ಇಗುತಪ್ಪ ದೇವಾಲಯದ ಅರ್ಚಕ ಕುಶ ಭಟ್ ಉಪಸ್ಥಿತರಿದ್ದರು. ಪಾರು ಪತ್ತೆಗಾರ ಪೊನ್ನಣ್ಣ ಸ್ಥಳೀಯ ಭಕ್ತರು ಪಾಲ್ಗೊಂಡಿದ್ದರು. ವಾಡಿಕೆಯಂತೆ ಕಾರ್ಯಕ್ರಮ ಜರುಗಿತು. ಮಂಟಪ ವನ್ನು ತೇಲಿ ಬಿಟ್ಟ ಬಳಿಕ ಮಳೆ ಆರಂಭ ಗೊಂಡಿತು. -ಸುನಿಲ್ ಕುಯ್ಯಮುಡಿ