ಮಡಿಕೇರಿ, ಜು. ೧೭: ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ರಾಜ್ಯದ ಇತರೆಡೆಗಳಂತೆ ಇಲ್ಲಿಯೂ ಮಳೆ ಇಳಿಮುಖವಾಗಿದೆ. ಇದೀಗ ಜುಲೈ ೩ನೇ ವಾರ ನಡೆಯುತ್ತಿದ್ದರೂ, ವಾಡಿಕೆಯಂತೆ ಮುಂಗಾರಿನ ಅಬ್ಬರ ಕಂಡುಬರುತ್ತಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ಬಾರಿ ಜಿಲ್ಲೆಯಲ್ಲಿ ಸರಾಸರಿ ೩೪.೯೭ ಇಂಚಿನಷ್ಟು ಕಡಿಮೆ ಮಳೆಯಾಗಿದೆ. ಕಳೆದ ವರ್ಷ ಜನವರಿಯಿಂದ ಈತನಕ ಜಿಲ್ಲೆಯಲ್ಲಿ ಸರಾಸರಿ ೭೦.೭೨ ಇಂಚು ಮಳೆಯಾಗಿದ್ದರೆ, ಈ ಬಾರಿ ೩೫.೭೫ ಇಂಚು ಮಾತ್ರವಾಗಿದೆ.

ತಾಲೂಕುವಾರು ಮಳೆಯ ಪ್ರಮಾಣ ಗಮನಿಸಿದರೆ ಮಡಿಕೇರಿ ತಾಲೂಕಿನಲ್ಲಿ ೪೧ ಇಂಚು, ವೀರಾಜಪೇಟೆಯಲ್ಲಿ ೩೧.೫೬ ಹಾಗೂ ಸೋಮವಾರಪೇಟೆಯಲ್ಲಿ ೩೨.೪೧ ಇಂಚುಗಳಷ್ಟು ಕಡಿಮೆ ಮಳೆಯಾಗಿದೆ. ಕಳೆದ ವರ್ಷ ಮಡಿಕೇರಿ ತಾಲೂಕಿನಲ್ಲಿ ಜನವರಿಯಿಂದ ಈತನಕ ೯೮ ಇಂಚು ಮಳೆಯಾಗಿದ್ದರೆ, ಈ ಬಾರಿ ೫೭.೦೬ ಇಂಚು ಮಳೆಯಾಗಿದೆ. ವೀರಾಜಪೇಟೆ ತಾಲೂಕಿನಲ್ಲಿ ಕಳೆದ ವರ್ಷ ಈ ಅವಧಿಯಲ್ಲಿ ೫೬.೪೭ ಇಂಚು ಮಳೆಯಾಗಿತ್ತು. ಈ ಬಾರಿ ೨೪.೯೧ ಇಂಚು ಮಾತ್ರ ಸುರಿದಿದೆ. ಇನ್ನು ಸೋಮವಾರಪೇಟೆ ತಾಲೂಕಿನಲ್ಲೂ ಇದೇ ಪರಿಸ್ಥಿತಿಯಿದೆ.

(ಮೊದಲ ಪುಟದಿಂದ) ಇಲ್ಲಿ ಕಳೆದ ವರ್ಷ ೫೭.೭೦ ಇಂಚು ಮಳೆ ಬಿದ್ದಿದ್ದರೆ, ಈ ವರ್ಷ ಈ ತನಕ ೨೫.೨೯ ಇಂಚು ಮಳೆಯಾಗಿದೆ. ಪ್ರಸ್ತುತ ಆಟಿ ತಿಂಗಳು ಆರಂಭಗೊAಡಿದೆ ಯಾದರೂ, ಈ ಹಿಂದಿನ ವರ್ಷ ಗಳಂತೆ ಇನ್ನೂ ಮಳೆಯ ರಭಸ ಕಂಡು ಬಾರದಿರುವುದು ಭವಿಷ್ಯದ ದೃಷ್ಟಿ ಯಿಂದ ಜನರು ಆತಂಕಪಡುವAತಾಗಿದೆ.