ದೇಶ ವಿರೋಧಿ ಚಟುವಟಿಕೆ - ಮೂವರು ಸರ್ಕಾರಿ ನೌಕರರ ವಜಾ

ಶ್ರೀನಗರ, ಜು. ೧೭: ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ ಆರೋಪದ ಮೇಲೆ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಆಡಳಿತ, ಕಾಶ್ಮೀರ ವಿಶ್ವವಿದ್ಯಾಲಯದ ಸಾರ್ವಜನಿಕ ಸಂಪರ್ಕ ಅಧಿಕಾರಿ (ಪಿಆರ್‌ಒ) ಮತ್ತು ಓರ್ವ ಪೊಲೀಸ್ ಸೇರಿದಂತೆ ಮೂವರು ಸರ್ಕಾರಿ ನೌಕರರನ್ನು ಸೋಮವಾರ ವಜಾಗೊಳಿಸಿದ್ದಾರೆ. ವಜಾಗೊಂಡ ಮೂವರು ಉದ್ಯೋಗಿಗಳನ್ನು ಕಾಶ್ಮೀರ ವಿಶ್ವವಿದ್ಯಾಲಯದ ಪಿಆರ್‌ಒ ಫಹೀಮ್ ಅಸ್ಲಾಂ, ಗ್ರಾಮೀಣಾಭಿವೃದ್ಧಿ ಇಲಾಖೆ ಉದ್ಯೋಗಿ ಮುರಾವತ್ ಹುಸೇನ್ ಮಿರ್ ಮತ್ತು ಕಾನ್‌ಸ್ಟೆಬಲ್ ಅರ್ಷಿದ್ ಅಹ್ಮದ್ ಥೋಕರ್ ಎಂದು ಗುರುತಿಸಲಾಗಿದೆ. ಪ್ರತ್ಯೇಕತಾವಾದಿ ಅಜೆಂಡಾವನ್ನು ಮುಂದುವರಿಸಿದ ಆರೋಪದ ಮೇಲೆ ಈ ಮೂವರು ನೌಕರರ ವಿರುದ್ಧ ಸಂವಿಧಾನದ ಸೆಕ್ಷನ್ ೩೧೧(೨) ಅನ್ನು ಅನ್ವಯಿಸುವ ಮೂಲಕ ಸರ್ಕಾರಿ ಸೇವೆಯಿಂದ ವಜಾಗೊ ಳಿಸಲಾಗಿದೆ. ವಿಶೇಷ ಕಾರ್ಯಪಡೆಯ ಶಿಫಾರಸಿನ ಮೇರೆಗೆ ಈ ಮೂವರು ನೌಕರರನ್ನು ವಜಾಗೊಳಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಸರ್ಕಾರ ತಿಳಿಸಿದೆ. ಇದಕ್ಕೂ ಮೊದಲು, ಕಳೆದ ವರ್ಷ ಮೇ ತಿಂಗಳಲ್ಲಿ ಕಾಶ್ಮೀರ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಅಲ್ತಾಫ್ ಹುಸೇನ್ ಪಂಡಿತ್ ಅವರನ್ನು ಸಂವಿಧಾನದ ಸೆಕ್ಷನ್ ೩೧೧ (೨) ಅನ್ನು ಅನ್ವಯಿಸುವ ಮೂಲಕ ವಜಾಗೊಳಿಸಲಾಗಿತ್ತು. ಭಾರತ ಸಂವಿಧಾನದ ೩೧೧(೨)ನೇ ವಿಧಿಯ ನಿಬಂಧನೆಗಳನ್ನು ಅನ್ವಯಿಸುವ ಮೂಲಕ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ ಆರೋಪದ ಮೇಲೆ ಕಾಶ್ಮೀರ ಸರ್ಕಾರವು ಇದುವರೆಗೆ ೫೦ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದೆ.

‘ಪಿಟಿಸಿಎಲ್ ಕಾಯ್ದೆ ತಿದ್ದುಪಡಿಗೆ ಸಂಕಲ್ಪ’

ಬೆAಗಳೂರು, ಜು. ೧೭: ದಲಿತರ ಜಮೀನು ಹಕ್ಕು ಪರಭಾರೆ ನಿಷೇಧ ವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ವಿಷಯದಲ್ಲಿ ಯಾವುದೇ ಬಹಿರಂಗ ಒತ್ತಡಕ್ಕೆ ಮಣಿಯುವುದಿಲ್ಲ. ಈ ವಿಚಾರದಲ್ಲಿ ನಮ್ಮ ಕಾಳಜಿಗಳ ಜೊತೆ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಪಿ. ಟಿ.ಸಿ.ಎಲ್. ಕಾಯ್ದೆ ತಿದ್ದುಪಡಿಗೆ ಸಂಬAಧಿಸಿದAತೆ ವಿವಿಧ ಸಂಘಟನೆಗಳ ಪ್ರತಿನಿಧಿಗಳು, ಸಚಿವರು, ಹಿರಿಯ ಅಧಿಕಾರಿಗಳು ಹಾಗೂ ಕಾನೂನು ತಜ್ಞ ರೊಂದಿಗೆ ಸಭೆ ನಡೆಸಿ ಚರ್ಚಿಸಿದ ಮುಖ್ಯಮಂತ್ರಿ, ದಲಿತರ ಜಮೀನು ಹಕ್ಕು ಕಾಪಾಡುವ ನಿಟ್ಟಿನಲ್ಲಿ ಪಿ.ಟಿ.ಸಿ.ಎಲ್ ಕಾಯ್ದೆಗೆ ತಿದ್ದುಪಡಿ ಮಾಡುವ ಕುರಿತ ಸರ್ಕಾರದ ನಿಲುವನ್ನು ಆಯವ್ಯಯದಲ್ಲಿಯೂ ಸ್ಪಷ್ಟಪಡಿಸ ಲಾಗಿದೆ. ಪ್ರಸ್ತುತ ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನದಲ್ಲಿಯೇ ಕಾಯ್ದೆ ತಿದ್ದುಪಡಿ ಮಾಡುವ ಉದ್ದೇಶದಿಂದ ಸಮುದಾಯದ ಮುಖಂಡರ ಅಭಿಪ್ರಾಯ ಪಡೆಯಲು ಈ ಸಭೆ ಕರೆಯಲಾಗಿದೆ ಎಂದು ವಿವರಿಸಿದರು.

ಯಮುನಾ ನದಿ ನೀರಿನ ಮಟ್ಟ ಏರಿಕೆ ಸಾಧ್ಯತೆ

ನವದೆಹಲಿ, ಜು. ೧೭: ಯಮುನಾ ನದಿಯ ನೀರಿನ ಮಟ್ಟವು ಮತ್ತೆ ಹೆಚ್ಚಾಗುವ ಸೂಚನೆ ತೋರಿಸುತ್ತಿರುವುದರಿಂದ ಜನ ಕಾಳಜಿ ಕೇಂದ್ರಗಳಲ್ಲೇ ಉಳಿಯಬೇಕು ಎಂದು ದೆಹಲಿ ಕ್ಯಾಬಿನೆಟ್ ಸಚಿವೆ ಅತಿಶಿ ಅವರು ಸೋಮವಾರ ಮನವಿ ಮಾಡಿದ್ದಾರೆ. ಹರಿಯಾಣದ ಕೆಲವು ಪ್ರದೇಶಗಳಲ್ಲಿ ಭಾನುವಾರ ಸುರಿದ ಭಾರೀ ಮಳೆಯಿಂದಾಗಿ ಯಮುನಾ ನದಿಯ ನೀರಿನ ಮಟ್ಟ ಸ್ವಲ್ಪಮಟ್ಟಿಗೆ ಏರಿದೆ ಎಂದು ಅವರು ತಿಳಿಸಿದ್ದಾರೆ. ಯಮುನಾ ನದಿ ನೀರಿನ ಮಟ್ಟವು ರಾತ್ರೋರಾತ್ರಿ ೨೦೬.೧ ಮೀಟರ್‌ಗೆ ತಲುಪಬಹುದು ಎಂದು ಕೇಂದ್ರ ಜಲ ಆಯೋಗ ಅಂದಾಜಿಸಿದೆ. ಆದರೆ ಇದರಿಂದ ದೆಹಲಿಯ ಜನರಿಗೆ ಯಾವುದೇ ಅಪಾಯವಿಲ್ಲ. ಆದರೂ ಕಾಳಜಿ ಕೇಂದ್ರಗಳಲ್ಲಿ ವಾಸಿಸುವ ಎಲ್ಲಾ ಜನ ಇನ್ನೂ ತಮ್ಮ ಮನೆಗಳಿಗೆ ಹಿಂತಿರುಗದAತೆ ವಿನಂತಿಸಲಾಗಿದೆ. ಯಮುನಾ ನದಿ ನೀರಿನ ಮಟ್ಟವು ಅಪಾಯ ಮಟ್ಟಕ್ಕಿಂತ ಕಡಿಮೆಯಾದ ನಂತರವೇ ನಿಮ್ಮ ನಿಮ್ಮ ಮನೆಗಳಿಗೆ ಹಿಂತಿರುಗಿ ಎಂದು ಅತಿಶಿ ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಐಪೋನ್ ತಯಾರಿಕ ಘಟಕ ಸ್ಥಾಪನೆಗೆ ಹೂಡಿಕೆ

ಬೆಂಗಳೂರು, ಜು. ೧೭: ತೈವಾನ್‌ನ ಫಾಕ್ಸ್ಕಾನ್ ಸಂಸ್ಥೆ ಕರ್ನಾಟಕ ದಲ್ಲಿ ಐಪೋನ್‌ಗಳ ಹೊರ ಕವಚ ತಯಾರಿಸುವ ಘಟಕ ಸ್ಥಾಪಿಸಲು ಸುಮಾರು ರೂ. ೮,೮೦೦ ಕೋಟಿ ಹೂಡಿಕೆ ಮಾಡಲು ಮುಂದೆ ಬಂದಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ. ಸೋಮವಾರ ವಿಧಾನಸೌಧದಲ್ಲಿ ಫಾಕ್ಸ್ಕಾನ್ ಇಂಡಸ್ಟಿçÃಯಲ್ ಇಂಟರ್ನೆಟ್ ಸಂಸ್ಥೆಯ ಸಿಇಒ ನೇತೃತ್ವದ ನಿಯೋ ಗವನ್ನು ಭೇಟಿಮಾಡಿ ಬಳಿಕ ಅವರು ಈ ವಿಷಯ ತಿಳಿಸಿದರು. ತುಮಕೂರಿನ ಬಳಿ ಇರುವ ಜಪಾನೀಸ್ ಕೈಗಾರಿಕಾ ಪ್ರದೇಶದಲ್ಲಿ ಅಗತ್ಯ ೧೦೦ ಎಕರೆ ಭೂಮಿ ಇದ್ದು, ಉದ್ದಿಮೆ ಸ್ಥಾಪಿಸಲು ಒಳ್ಳೆಯ ವಾತಾವರಣ ಇದೆ. ಇದಕ್ಕೆ ರಾಜ್ಯ ಸರ್ಕಾರ ಕೂಡ ಪೂರ್ಣ ಸಹಕಾರ ನೀಡಲಿದೆ ಎಂದು ಸಚಿವರು ತಿಳಿಸಿದ್ದಾರೆ. ಈ ಹೊಸ ಘಟಕದಿಂದ ಸುಮಾರು ೧೪,೦೦೦ಕ್ಕೂ ಹೆಚ್ಚು ಉದ್ಯೋಗಗಳು ದೊರೆಯ ಲಿವೆ. ಉದ್ಯಮ ಸ್ಥಾಪನೆಗೆ ರಾಜ್ಯ ಸರ್ಕಾರದಿಂದ ಸಂಪೂರ್ಣ ಸಹಕಾರ ನೀಡಲಾ ಗುವುದು ಎಂದು ತಿಳಿಸಿದ್ದಾರೆ.ಇದೇ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಫಾಕ್ಸ್ ಕಾನ್ ನಿಯೋ ಗದ ಜೊತೆ ಎಂಬಿ ಪಾಟೀಲ್ ಅವರು ಸಭೆ ನಡೆಸಿದರು. ಐಟಿ-ಬಿಟಿ ಸಚಿವ ರಾದ ಪ್ರಿಯಾಂಕ್ ಖರ್ಗೆ ಹಾಗೂ ಹಿರಿಯ ಅಧಿಕಾರಿಗಳಿದ್ದರು.

ಕಾಂಗ್ರೆಸ್ ಸರ್ಕಾರ ಬಂದರೆ ನಾಡಿಗೆ ದರಿದ್ರ - ಹೆಚ್.ಡಿ.ಕೆ.

ರಾಮನಗರ, ಜು. ೧೭: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದರೆ ನಾಡಿಗೆ ‘ದರಿದ್ರ ಮತ್ತು ಬರ' ಬರುತ್ತದೆ ಎಂಬ ಪ್ರತೀತಿ ಇದೆ. ಯಾಕೊ ಈಗಲೂ ಅದೇ ವಾತಾವರಣವಿದೆ. ಸರಿಯಾಗಿ ಮಳೆಯೂ ಆಗುತ್ತಿಲ್ಲ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದರು. ಚನ್ನಪಟ್ಟಣ ತಾಲೂಕಿನ ಹಾರೋಕೊಪ್ಪ ಗ್ರಾಮದಲ್ಲಿ ಸೋಮವಾರ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನ್ಯಾಯಾಧೀಕರಣವು ನೀಡಿರುವ ನೀರು ಹಂಚಿಕೆ ತೀರ್ಪಿನ ಆಧಾರದ ಮೇಲೆ ತಮಿಳುನಾಡಿನವರು ನೀರು ಕೇಳುತ್ತಿದ್ದಾರೆ. ಅವರಿಗೆ ನೀರು ಕೊಡಬೇಕೋ ಬೇಡವೋ ಎಂಬು ದನ್ನು ಸರ್ಕಾರ ತೀರ್ಮಾನ ಮಾಡಬೇಕು ಎಂದರು. ಬಿಜೆಪಿ ಸೇರಿದಂತೆ ಯಾರ ಬಗ್ಗೆಯೂ ನನಗೆ ಮೃದು ಧೋರಣೆ ಇಲ್ಲ. ಬೇರೆ ಪಕ್ಷಗಳ ಕುರಿತು ಅಂತಹ ಧೋರಣೆ ಇಟ್ಟುಕೊಂಡು ಏನು ಮಾಡಲಿ? ನಾಡಿನ ಜನರ ಕಷ್ಟದ ಬಗ್ಗೆಯಷ್ಟೇ ನನ್ನದು ಮೃದು ಧೋರಣೆ' ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ‘ಜೆಡಿಎಸ್ ಅವಕಾಶವಾದಿ ರಾಜಕಾರಣ' ಎಂಬ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, 'ಅವರೆಲ್ಲ ಯಾವ ರಾಜಕಾರಣ ಮಾಡುತ್ತಿದ್ದಾರೆ? ಡಿಎಂಕೆ ಜೊತೆ ಸೇರಿ ಹತ್ತು ವರ್ಷ ಸರ್ಕಾರ ಮಾಡಿದ್ದರಲ್ಲ, ಅದು ಯಾವ ರಾಜ ಕಾರಣ? ಯಾವ ತರ ರಾಜಕೀಯ ಮಾಡಬೇಕು ಅಂತ ದಿನೇಶ್ ಗುಂಡೂರಾವ್ ಅವರಿಂದ ಕಲಿಯಬೇಕಾ? ಅಂತಹ ದರ್ದು ನನಗೆ ಬಂದಿಲ್ಲ' ಎಂದು ತಿರುಗೇಟು ನೀಡಿದರು.

ಡಾ ಮಂಜುನಾಥ್ ಸೇವಾವಧಿ ೬ ತಿಂಗಳು ವಿಸ್ತರಣೆ

ಬೆಂಗಳೂರು, ಜು. ೧೭: ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಅವರ ಸೇವಾವಧಿಯನ್ನು ಮತ್ತೆ ೬ ತಿಂಗಳು ವಿಸ್ತರಿಸಿ ರಾಜ್ಯ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ. ೨೦೦೭ರಿಂದ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ.ಸಿಎನ್ ಮಂಜುನಾಥ್ ಅವರ ಅಧಿಕಾರ ಅವಧಿ ಕಳೆದ ವರ್ಷವೇ ಮುಕ್ತಾಯವಾಗಿತ್ತು. ಆದರೆ ರೋಗಿಗಳು ಮತ್ತು ಸಿಬ್ಬಂದಿ ಒತ್ತಾಯದ ಮೇರೆಗೆ ಈ ಹಿಂದಿನ ಬಿಜೆಪಿ ಸರ್ಕಾರ ಮಂಜು ನಾಥ್ ಅವರ ಅವಧಿಯನ್ನು ೧ ವರ್ಷ ವಿಸ್ತರಣೆ ಮಾಡಿತ್ತು ಮತ್ತು ಜುಲೈ ೧೯ಕ್ಕೆ ಡಾ.ಸಿ.ಎನ್.ಮಂಜುನಾಥ್ ಅವರ ಅವಧಿ ಮುಕ್ತಾಯ ಗೊಳ್ಳಲಿತ್ತು. ಈ ಹಿನ್ನೆಲೆಯಲ್ಲಿ ಇಂದು ವಿಧಾನಸೌಧದಲ್ಲಿ ಅಧಿಕಾರಿ ಗಳೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕಲಬುರಗಿ ಜಯದೇವ ಆಸ್ಪತ್ರೆಯ ಕೆಲಸ ಜವಾಬ್ದಾರಿ ಹಿನ್ನಲೆಯಲ್ಲಿ ಜನವರಿ ತಿಂಗಳವರೆಗೆ ಡಾ.ಸಿಎನ್ ಮಂಜುನಾಥ್ ಅವರನ್ನು ನಿರ್ದೇಶಕರಾಗಿ ಮುಂದುವರಿಸುವ ನಿರ್ಧಾರ ಕೈಗೊಂಡಿದ್ದಾರೆ.