ಭಾರತೀಯ ಸೇನೆಯಲ್ಲಿ ಖಡಕ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಬ್ರಿಗೇಡಿಯರ್ ಕೊಂಗAಡ ಎಂ ಮುತ್ತಣ್ಣ (ಫ್ರೆಡಿ) ಅವರು ತಾ. ೧೦ ರಂದು ಇಹಲೋಕ ತ್ಯಜಿಸಿದ್ದಾರೆ. ಪ್ರಾಮಾಣಿಕತೆ ತಮ್ಮ ಕೈ ಕೆಳಗಿನವರ ಬಗ್ಗೆ ಅಪಾರ ಕಾಳಜಿ ಮತ್ತು ದೇಶಭಕ್ತಿಯನ್ನು ಮೈಗೊಡಿಸಿ ಕೊಂಡಿದ್ದ ಕೊಡಗಿನ ಈ ಅಧಿಕಾರಿ ಇದೀಗ ತಮ್ಮ ೮೭ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.

೪ ಗಾರ್ಡ್ಸ್ನ (೧ನೇ ರಜಪೂತ್) ೫೪ನೇ ಕಮಾಂಡೆAಟ್ ಆಗಿದ್ದ ಬ್ರಿಗೇಡಿಯರ್ ಮುತ್ತಣ್ಣ ಅವರು ನಿವೃತ್ತರಾದ ಬಳಿಕ ಚೆಟ್ಟಳ್ಳಿಯಲ್ಲಿ ನೆಲೆಸಿದ್ದರು. ಇವರು ೧೯೩೬ರ ಮಾರ್ಚ್ ೧೬ ರಂದು ಸೇನೆಗೆ ಸೇರ್ಪಡೆಯಾಗಿದ್ದರು. ಪುಣೆಯ ಖಡಕವಾಸ್ಲಾದ ೩೯ನೇ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ತರಬೇತಿ ಪಡೆದ ಮೊದಲ ಕೆಲವು ಕೋರ್ಸ್ಗಳಲ್ಲಿ ಇವರು ಒಬ್ಬರಾಗಿದ್ದರು. ಎನ್.ಡಿ.ಎ. ಬಳಿಕ ಅವರನ್ನು ಡೆಹ್ರಾಡೂನ್‌ನ ಭಾರತೀಯ ಮಿಲಿಟರಿ ಅಕಾಡೆಮಿಯಿಂದ ೧೯೫೭ರ ಜೂನ್ ೯ ರಂದು ೪ ಗಾರ್ಡ್ಸ್ (೧ನೇ ರಜಪೂತ್)ಗೆ ನಿಯೋಜಿಸಲಾಗಿತ್ತು.

ತಮ್ಮ ವೃತ್ತಿ ಜೀವನದಲ್ಲಿ ಇವರು ವಿವಿಧ ರೆಜಿಮೆಂಟಲ್, ಇನ್ಸಟ್ರಕ್ಷನ್ ಮತ್ತು ಸ್ಟಾಫ್ ನೇಮಕಾತಿಗಳನ್ನು ನಿರ್ವಹಿಸಿದ್ದಾರೆ. ೧೯೭೨ರ ಮೇ ೨೨ ರಿಂದ ೧೯೭೬ನೇ ಸೆಪ್ಟಂಬರ್ ೨೩ರ ವರೆಗೆ ೪ ಗಾರ್ಡ್ಸ್ ಅನ್ನು ಇವರು ಕಮಾಂಡ್ ಮಾಡಿದ್ದರು. ೧೯೮೧-೮೨ರಲ್ಲಿ ಕಾಂಮ್ ಟೀಯ ಗಾರ್ಡ್ಸ್ ರೆಜಿಮೆಂಟನ್ ಕೇಂದ್ರದ ಮುಖ್ಯಸ್ಥರಾಗಿ, ಇನ್‌ಫೆಂಟ್ರಿ ಬ್ರಿಗೇಡ್ ಅನ್ನು ೧೯೮೨-೮೪ ರಲ್ಲಿ ಮುನ್ನಡೆಸಿದರು. ತದನಂತರ ೨೨ನೆಯ ಇನ್‌ಫ್ರೆಂಟ್ರಿ ಡಿವಿಷನ್‌ನ ಡೆಪ್ಯೂಟಿ ಕಮಾಂಡರ್ ಆಗಿ, ಆಂಧ್ರ, ತಮಿಳುನಾಡು, ಕರ್ನಾಟಕ, ಕೇರಳ, ದ. ಡೆಪ್ಯುಟಿ ಜನರಲ್ ಆಫೀಸರ್ ಆಗಿ ಕೂಡ ಸೇವೆ ಸಲ್ಲಿಸಿದ್ದರು.

ಈ ಸಮಯದಲ್ಲಿ ಮುತ್ತಣ್ಣ ಅವರು ಶ್ರೀಲಂಕಾದ ಐ. ಪಿ. ಕೆ. ಎಂಫರರ್‌ಗೆ ಕದನದಲ್ಲಿ ಲಾಜಿಸ್ಟಿಕ್ ಸಹಾಯ ನೀಡುವಲ್ಲಿಯೂ ಗಮನಾರ್ಹ ಪಾತ್ರವಹಿಸಿದ್ದರು. ಮೂರು ದಶಕಗಳಿಗೂ ಹೆಚ್ಚು ಕಾಲ ಸೇನೆಯಲ್ಲಿ ಸಾರ್ಥಕ್ಯ ಸೇವೆ ಸಲ್ಲಿಸಿದ ನಂತರ ೧೯೯೦ರ ಮಾರ್ಚ್ ೩೧ ರಂದು ನಿವೃತ್ತರಾಗಿದ್ದರು. ಇವರು ಯಾವತ್ತೂ ಅಸಧಾರಣ ಭಾವೋದ್ರಿಕ್ತ ಮಿಲಿಟರಿ ನಾಯಕರಾಗಿ ನೆನಪಿನಲ್ಲಿ ಉಳಿಯುತ್ತಾರೆ ಎಂದು ನಿವೃತ್ತ ಮೇಜರ್ ಬಿದ್ದಂಡ ನಂಜಪ್ಪ ಅವರು ಸ್ಮರಿಸಿಕೊಳ್ಳುತ್ತಾರೆ.

ಮೃತರು ಪತ್ನಿ ವಿಜಯ್ ಮುತ್ತಣ್ಣ (ತಾಮನೆ ಚೆಪ್ಪುಡೀರ) ಪುತ್ರ ತಿಮ್ಮಯ್ಯ, ಸೊಸೆ ಪ್ರಿಯಾ ಮೊಮ್ಮಕ್ಕಳಾದ ಮುದ್ದಯ್ಯ ಮತ್ತು ಮಾನ್ಯ ಅವರನ್ನು ಅಗಲಿದ್ದಾರೆ.

ನಾವು ೧ನೇ ರಜಪೂತ್ ಬೆಟಾಲಿಯನ್‌ನವರು ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಅವರು ಮಾತೃಭಾಷೆಗೆ ಸೇರಿದವರು ಎಂಬುದನ್ನು ಅವರು ಪದೇ-ಪದೇ ನೆನಪಿಸುತ್ತಿದ್ದರು ಎಂಬದಾಗಿ ಮೇಜರ್ ನಂಜಪ್ಪ ಹೇಳುತ್ತಾರೆ. ತಾವು ಈ ಬೆಟಾಲಿಯನ್‌ಗೆ ನೇಮಕಗೊಂಡ ನಂತರ ಅವರ ಅಡಿಯಲ್ಲಿ ಮತ್ತೊಬ್ಬ ಕೊಡವ ಅಧಿಕಾರಿಯಾಗಿ ಸೇವೆ ಸಲ್ಲಿಸುವ ಸೌಭಾಗ್ಯ ದೊರೆತಿತ್ತು. ಲೆಫ್ಟಿನೆಂಟ್ ಜನರಲ್‌ಗಳಾದ ಎಸ್. ಪಿ. ಮಲ್ಹೋತ್ರ, ಹಾಗೂ ವಾಗ್ ಪೀಟೋ ಅಶೋಕ್‌ಹಾಂಡೂ, ಹಿಮ್ಮತ್‌ಸಿಂಗ್ ಮತ್ತಿತರ ಅಧಿಕಾರಿಗಳು ಮುತ್ತಣ್ಣ ಅವರ ಪ್ರಾಮಾಣಿಕತೆ, ಸಮಗ್ರ ಕರ್ತವ್ಯ ಪರತೆಯನ್ನು ಗೌರವದಿಂದ ಕಾಣುತ್ತಿದ್ದರು. ಎಂದೂ ನಂಜಪ್ಪ ಅಭಿಪ್ರಾಯಪಟ್ಟಿದ್ದಾರೆ.

ಮುತ್ತಣ್ಣ ಅವರು ವಿಧಿವಶರಾದ ಸುದ್ದಿ ಅರಿತು ಪ್ರತಿಕ್ರಿಯಿಸಿರುವ ಮೇಜರ್ ವಿಜಯ್ ಉಪ್ಪಲ್ ಅವರು ನಾವು ಒಬ್ಬ ಸೈನಿಕನ ಸೈನಿಕನನ್ನು ಪ್ರಾಮಾಣಿಕ, ನೈತಿಕತೆಯ ಅತ್ಯುತ್ತತ ಮಾನದಂಡವನ್ನು ಹೊಂದಿದ್ದ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ. ‘ಓಂ ಸದ್ಗತಿ’ ಪ್ರೀತಿಯ ಬ್ರಿಗೇಡಿಯರ್...ನಿಮ್ಮನ್ನು ನಮ್ಮ ಸ್ನೇಹಿತ ಮತ್ತು ಮಾರ್ಗದರ್ಶಕರಾಗಿ ಹೊಂದಲು ನಾವು ಅದೃಷ್ಟವಂತರು ಎಂಬದಾಗಿ ಪ್ರತಿಕ್ರಿಯಿಸಿದ್ದಾರೆ.

ಮತ್ತೋರ್ವ ಅಧಿಕಾರಿ ೪ ಗಾರ್ಡ್ಸ್ನ ಕರ್ನಲ್ ಅನಿಲ್ ಅಲಫ್... ಮುತ್ತಣ್ಣ ಅವರ ನೆನಪುಗಳು, ಅವರ ರೆಜಿಮೆಂಟೇಶನ್, ಅವರ ಸೆಳೆವು ಅವರನ್ನು ಭೇಟಿಯಾದ ಎಲ್ಲರ ಹೃದಯಗಳಲ್ಲಿ ಶಾಶ್ವತವಾಗಿ ಉಳಿಯುತ್ತದೆ. ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳಲಾಗುತ್ತದೆ. ಜೈ ಹಿಂದ್ ಫ್ರೆಡ್ಡಿ ಸರ್, ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿರುವುದು ಇವರ ಮೇಲಿನ ಅಭಿಮಾನಕ್ಕೆ ಸಾಕ್ಷಿಯಾಗಿದೆ.

-ಶಶಿ