ಮಡಿಕೇರಿ, ಜು. ೧೬: ದುಲೀಪ್ ಟ್ರೋಫಿ ಫಸ್ಟ್ ಕ್ಲಾಸ್ ಟೆಸ್ಟ್ ಮ್ಯಾಚ್ ಕ್ರಿಕೆಟ್ ಟೂರ್ನಿಯಲ್ಲಿ ಕೊಡಗಿನ ಮಾಚಿಮಾಡ ವಿದ್ವತ್ ಕಾವೇರಪ್ಪ ಅವರು ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿ ತಮ್ಮ ತಂಡ, ದಕ್ಷಿಣ ವಲಯದ ಗೆಲುವಿಗೆ ಕಾರಣರಾದರಲ್ಲದೆ ಸರಣಿ ಶ್ರೇಷ್ಠ ಪ್ರಶಸ್ತಿಯನ್ನೂ ತಮ್ಮದಾಗಿಸಿ ಕೊಂಡಿದ್ದಾರೆ.
ಇAದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಕ್ತಾಯಗೊಂಡ ಫೈನಲ್ ಪಂದ್ಯದಲ್ಲಿ ೨ ಇನ್ನಿಂಗ್ಸ್ಗಳಲ್ಲಿ ಒಟ್ಟು ೮ ವಿಕೆಟ್ ಗಳನ್ನು ಕಬಳಿಸಿ ಪಂದ್ಯದ ಗೆಲುವಿಗೆ ವಿದ್ವತ್ ಕಾರಣ ಕರ್ತರಾದರು.
ಮೊದಲ ಇನ್ನಿಂಗ್ಸ್ನಲ್ಲಿ ದಕ್ಷಿಣ ವಲಯವು ೨೧೩ ರನ್ ಗಳಿಸಿದರೆ, ಎದುರಾಳಿ ಪಶ್ಚಿಮ ವಲಯವು ೧೪೬ ರನ್ ಗಳಿಸಿತು. ಈ ಇನ್ನಿಂಗ್ಸ್ನಲ್ಲಿ ೭ ವಿಕೆಟ್ ಪಡೆಯುವ ಮೂಲಕ ವಿದ್ವತ್ ಭರ್ಜರಿ ಪ್ರದರ್ಶನ ನೀಡಿದರು. ೨ನೇ ಇನ್ನಿಂಗ್ಸ್ನಲ್ಲಿ ೨೩೦ ನಾರ್ಥ್ ಈಸ್ಟ್ ವಲಯ, ಒಟ್ಟು ೬ ತಂಡಗಳು ಭಾಗವಹಿಸಿದ್ದವು.