ಮಡಿಕೇರಿ, ಜು. ೧೬: ಜಾಗದ ಸರ್ವೆ ವಿಚಾರದಲ್ಲಿ ತಕರಾರು ಏರ್ಪಟ್ಟು ಅಣ್ಣನನ್ನು ಚಾಕುವಿನಿಂದ ಇರಿದು ಕೊಲೆಗೈದ ಪ್ರಕರಣಕ್ಕೆ ಸಂಬAಧಿಸಿದAತೆ ತಮ್ಮಂದಿರರಿಬ್ಬರನ್ನು ಬಂಧಿಸುವಲ್ಲಿ ಮಡಿಕೇರಿ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

ತಾ. ೧೪ ರಂದು ಎಂ.ಚೆAಬು ಗ್ರಾಮದ ಸಮೀಪದ ಕುದುರೆಪಾಯದಲ್ಲಿ ಈ ಘಟನೆ ನಡೆದಿತ್ತು. ತಮ್ಮಂದಿರರಾದ ಮಹಮ್ಮದ್ ರಫೀಕ್ ಹಾಗೂ ಅಬ್ದುಲ್ ಖಾದರ್ ಅವರುಗಳನ್ನು ಕೇರಳದ ಎರ್ನಾಕುಲಂನಲ್ಲಿ ಬಂಧಿಸಿ ಮಡಿಕೇರಿಗೆ ಕರೆ ತರಲಾಗಿದೆ.

ಪುತ್ತೂರಿನ ಸಂಪ್ಯ ಗ್ರಾಮದ ನಿವಾಸಿ ಉಸ್ಮಾನ್ ಅವರನ್ನು ಅವರ ತಮ್ಮಂದಿರುಗಳು ತಾ. ೧೪ ರ ಬೆಳಿಗ್ಗೆ ೧೧ ಗಂಟೆ ಸುಮಾರಿಗೆ ಕುದುರೆಪಾಯದಲ್ಲಿರುವ ೧ ಎಕರೆ ೧೦ ಸೆಂಟ್ ಜಾಗವನ್ನು ಸರ್ವೆ ನಡೆಸಿದ ಬಳಿಕ ಆಸ್ತಿ ಪಾಲು ವಿಚಾರದಲ್ಲಿ ವಾಗ್ವಾದ ೩ಐದನೇ ಪುಟಕ್ಕೆ

(ಮೊದಲ ಪುಟದಿಂದ) ಉಂಟಾಗಿ ಚಾಕುವಿನಿಂದ ಹೊಟ್ಟೆಭಾಗಕ್ಕೆ ಇರಿದು ಕೊಲೆಗೈದು ಅಲ್ಲಿಂದ ಪರಾರಿಯಾಗಿದ್ದರು.

ಪ್ರಕರಣ ದಾಖಲಿಸಿಕೊಂಡ ಗ್ರಾಮಾಂತರ ಪೊಲೀಸರು ತನಿಖೆ ಕೈಗೊಂಡು ಕೇರಳದಲ್ಲಿ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.