ಜೆಡಿಎಸ್-ಬಿಜೆಪಿ ಮೈತ್ರಿ?
ಹುಬ್ಬಳ್ಳಿ, ಜು. ೧೬: ಕರ್ನಾಟಕ ರಾಜಕೀಯ ಅಂಗಳದಲ್ಲಿ ಈಗ ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರ ಬಹಳ ಚರ್ಚೆಯಾಗುತ್ತಿದೆ. ತಾ. ೧೮ ರಂದು ದೆಹಲಿಯಲ್ಲಿ ಎನ್ಡಿಎ ಸಭೆಯಿದ್ದು ಅದಕ್ಕು ಮುನ್ನ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ದೆಹಲಿಗೆ ಹೋಗಿ ಬಿಜೆಪಿ ವರಿಷ್ಠರ ಜೊತೆ ಮಾತುಕತೆ ನಡೆಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ೨೦೨೪ರ ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿ-ಜೆಡಿಎಸ್ ಮೈತ್ರಿಗೆ ವೇದಿಕೆ ಸಿದ್ಧವಾಗುತ್ತಿದೆ ಎಂದು ಹೇಳಲಾಗುತ್ತಿದ್ದು, ಇದಕ್ಕೆ ಪೂರಕವಾಗಿ ಇಂದು ಹುಬ್ಬಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ನಮ್ಮ ಬಿಜೆಪಿ ವರಿಷ್ಠರು ಮತ್ತು ಜೆಡಿಎಸ್ ವರಿಷ್ಠರಾದ ದೇವೇಗೌಡರ ನಡುವೆ ಮಾತುಕತೆ ನಡೆಯುತ್ತಿದೆ. ಈಗಾಗಲೇ ಕುಮಾರಸ್ವಾಮಿಯವರು ಕೂಡ ಕೆಲವು ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಆ ದಿಕ್ಕಿನಲ್ಲಿ ಮಾತುಕತೆ ಮುಂದುವರಿಯುತ್ತದೆ. ಮಾತುಕತೆಯ ಫಲಶ್ರುತಿ ಆಧಾರದ ಮೇಲೆ ಮುಂದಿನ ರಾಜಕೀಯ ಬೆಳವಣಿಗೆಯಿದೆ.
ಇಂದಿನಿAದ ಭಾರತ-ಮಂಗೋಲಿಯಾ ಮಿಲಿಟರಿ ತಾಲೀಮು
ನವದೆಹಲಿ, ಜು. ೧೬: ಭಾರತ ಮತ್ತು ಮಂಗೋಲಿಯಾ ಸೇನಾ ಪಡೆಗಳು ಉಲನ್ಬಾತಾರ್ನಲ್ಲಿ ತಾ. ೧೭ ರಿಂದ ೩೧ ರವರೆಗೆ ೧೫ನೇ ಆವೃತ್ತಿಯ ದ್ವಿಪಕ್ಷೀಯ ಮಿಲಿಟರಿ ತಾಲೀಮು ನಡೆಸಲಿದೆ ಎಂದು ಭದ್ರತಾ ಸಚಿವಾಲಯ ಭಾನುವಾರ ತಿಳಿಸಿದೆ. ಭಾರತೀಯ ಸೇನೆಯ ೪೩ ಸೈನಿಕರು ಸಿ-೧೭ ವಿಮಾನದ ಮೂಲಕ ಉಲಾನ್ಬತಾರ್ಗೆ ತಲುಪಿದ್ದಾರೆ. ಈ ಬಾರಿಯ ಸಮರಾಭ್ಯಾಸಕ್ಕೆ ‘ನೋಮ್ಯಾಡಿಕ್ ಎಲಿಫೆಂಟ್ -೨೩’ ಎಂದು ನಾಮಕರಣ ಮಾಡಲಾಗಿದೆ. ಸಕಾರಾತ್ಮಕ ಮಿಲಿಟರಿ ಸಂಬAಧಗಳನ್ನು ನಿರ್ಮಿಸುವುದು, ಉತ್ತಮ ಅಭ್ಯಾಸಗಳನ್ನು ವಿನಿಮಯ ಮಾಡಿಕೊಳ್ಳುವುದು, ಪರಸ್ಪರ ಕಾರ್ಯಸಾಧ್ಯತೆ, ಬೋನ್ಹೋಮಿ, ಸೌಹಾರ್ದತೆ ಮತ್ತು ಎರಡು ಸೇನೆಗಳ ನಡುವೆ ಸ್ನೇಹವನ್ನು ಅಭಿವೃದ್ಧಿಪಡಿಸುವುದು ಈ ಸಮರಾಭ್ಯಾಸದ ಉದ್ದೇಶವಾಗಿದೆ. ಮಂಗೋಲಿಯನ್ ಸೇನಾ ಪಡೆಯ ೦೮೪ ಘಟಕದ ಸೈನಿಕರು ಹಾಗೂ ಜಮ್ಮು ಮತ್ತು ಕಾಶ್ಮೀರದ ಲಘು ಪದಾತಿ ದಳ ಈ ವ್ಯಾಯಾಮದಲ್ಲಿ ಭಾಗವಹಿಸಲಿವೆ ಎಂದು ಸಚಿವಾಲಯ ತಿಳಿಸಿದೆ.
ಇಂದಿನಿAದ ವಿಪಕ್ಷಗಳ ಸಭೆ
ಬೆಂಗಳೂರು, ಜು. ೧೬: ಬೆಂಗಳೂರಿನಲ್ಲಿ ಇಂದಿನಿAದ ಎರಡು ದಿನ ನಡೆಯಲಿರುವ ವಿಪಕ್ಷಗಳ ಸಭೆ ಹಿನ್ನೆಲೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ೨೦೨೪ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ ಅಧಿಕಾರದಿಂದ ದೂರವಿಡುವ ಮಹತ್ವಕಾಂಕ್ಷೆಯೊAದಿಗೆ ನಡೆಯಲಿರುವ ಈ ಸಭೆಯಲ್ಲಿ ೨೪ ರಾಜಕೀಯ ಪಕ್ಷಗಳ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ. ಬಿಜೆಪಿಯ ವಿರುದ್ಧ ಒಗ್ಗಟ್ಟನ್ನು ಪ್ರದರ್ಶಿಸುವ ವಿಪಕ್ಷಗಳ ಸಭೆಗೆ ಎಂಟು ಹೊಸ ಪಕ್ಷಗಳು ತಮ್ಮ ಬೆಂಬಲವನ್ನು ನೀಡಿವೆ ಎಂದು ಮೂಲಗಳು ತಿಳಿಸಿವೆ. ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮಹಾರಾಷ್ಟçದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತಿತರ ನಾಯಕರ ಫೋಸ್ಟರ್ ಗಳು ರಾಜಧಾನಿಯಲ್ಲಿ ರಾರಾಜಿಸುತ್ತಿವೆ. ದೆಹಲಿಯಲ್ಲಿ ಸೇವೆಗಳ ನಿಯಂತ್ರಣಕ್ಕೆ ಕೇಂದ್ರದ ಸುಗ್ರೀವಾಜ್ಞೆಯನ್ನು ಬೆಂಬಲಿಸುವುದಿಲ್ಲ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದ ನಂತರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡಾ ಈ ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದ್ದು, ಅವರ ಫೋಸ್ಟರ್ ಕೂಡಾ ಕಂಡುಬAದಿದೆ.
ಪೆರೋಲ್ನಲ್ಲಿ ಮದುವೆಯಾದ ಕೊಲೆ ಅಪರಾಧಿಗಳು
ಪಶ್ಚಿಮ ಬಂಗಾಳ, ಜು. ೧೬: ಜೈಲಿನಲ್ಲಿ ಪರಸ್ಪರ ಪರಿಚಿತರಾಗಿ, ಆ ಪರಿಚಯ ಪ್ರೀತಿಗೆ ತಿರುಗಿ, ಆ ಪ್ರೀತಿಯ ಕಲರವ ಮದುವೆಯ ಮೂಲಕ ಸುಖಾಂತ್ಯವಾಗಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಅಸ್ಸಾಂ ರಾಜ್ಯದ ಅಬ್ದುಲ್ ಹಸೀಮ್ ಕೊಲೆ ಪ್ರಕರಣದಲ್ಲಿ ಅಪರಾಧಿಯಾಗಿ ೮ ವರ್ಷ ಜೈಲು ಶಿಕ್ಷೆಗೆ ಒಳಗಾಗಿದ್ದರು. ಪಶ್ಚಿಮ ಬಂಗಾಳದ ಶಹನಾರಾ ಖಾತುನ್ ಕೂಡ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ೬ ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಇಬ್ಬರು ಬರ್ಧಮಾನ್ ಸೆಂಟ್ರಲ್ ಕರೆಕ್ಷನಲ್ ಮಹಿಳಾ ಮತ್ತು ಪುರುಷರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದರು. ಇವರು ಆಗಾಗ ಕರೆಕ್ಷನಲ್ ಹೋಮ್ನಲ್ಲಿ ಭೇಟಿಯಾಗುತ್ತಿದ್ದರು. ಆ ಭೇಟಿ ಪ್ರೀತಿಗೆ ತಿರುಗಿ ಇದೀಗ ಮದುವೆಯಾಗಿದ್ದಾರೆ. ಇವರು ಐದು ದಿನಗಳ ಪೆರೋಲ್ನಲ್ಲಿ ಬಿಡುಗಡೆಯಾಗಿ ಮದುವೆಯಾಗಿದ್ದಾರೆ.
ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ
ಇAಫಾಲ, ಜು. ೧೬: ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಮತ್ತೆ ಗಲಭೆ ಭುಗಿಲೆದ್ದಿದ್ದು, ರಾಜಧಾನಿ ಪೂರ್ವ ಇಂಫಾಲ್ನಲ್ಲಿ ಮಹಿಳೆಯೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಇಂಫಾಲದ ಸಾವೊಂಬAಗ್ ಪ್ರದೇಶದಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿದ್ದು, ದುಷ್ಕರ್ಮಿಗಳು ೫೦ ವರ್ಷ ವಯಸ್ಸಿನ ಮಾರಿಂಗ್ ಎಂಬ ಮಹಿಳೆಯ ಮನೆಗೆ ನುಗ್ಗಿ ಅವರ ಮುಖದ ಮೇಲೆ ಗುಂಡು ಹಾರಿಸಿದ್ದಾರೆ. ದಾಳಿಕೋರರು ಮಹಿಳೆಯ ಮೇಲೆ ಗುಂಡು ಹಾರಿಸಿದ್ದರ ಜೊತೆಗೆ, ಘಟನಾ ಸ್ಥಳದಿಂದ ಪಲಾಯನ ಮಾಡುವ ಮೊದಲು ಆಕೆಯ ಮುಖವನ್ನು ವಿರೂಪಗೊಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಣಿಪುರ ಪೊಲೀಸರು ಆರೋಪಿಗಳನ್ನು ಬಂಧಿಸಲು ಕಾರ್ಯಾಚರಣೆ ಆರಂಭಿಸಿದ್ದು, ಗುಂಡಿನ ದಾಳಿ ನಡೆದ ಪ್ರದೇಶವನ್ನು ಪೊಲೀಸರು ಸುತ್ತುವರಿದಿದ್ದು, ಸಮೀಪದ ಪ್ರದೇಶಗಳಲ್ಲಿನ ಮನೆಗಳಲ್ಲೂ ಶೋಧ ನಡೆಸಲಾಗುತ್ತಿದೆ. ಘಟನೆ ಸಂಬAಧ ಪೊಲೀಸರು ಈಗಾಗಲೇ ಸುತ್ತಮುತ್ತಲಿನ ಜನರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಮೃತ ಮಹಿಳೆ ನಾಗಾ ಸಮುದಾಯಕ್ಕೆ ಸೇರಿದವರಾಗಿದ್ದು, ಕೆಲವು ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಅಮೆರಿಕದ ಅಲಾಸ್ಕದಲ್ಲಿ ಭೀಕರ ಭೂಕಂಪನ
ನವದೆಹಲಿ, ಜು. ೧೬: ಅಮೆರಿಕದ ಅಲಾಸ್ಕ ಬಳಿ ಭೀಕರ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ೭.೪ ತೀವ್ರತೆ ದಾಖಲಾಗಿದೆ. ಅಲಸ್ಕಾದ ಪೆನಿನ್ಸುಲಾ ಪ್ರದೇಶದ ಬಳಿ ಇಂದು ಭೂಕಂಪ ಸಂಭವಿಸಿದೆ ಎಂದು ಯುಎಸ್ ಜಿಯಾಲಜಿಕಲ್ ಸರ್ವೇ ಸಂಸ್ಥೆ ಹೇಳಿದ್ದು ಸುನಾಮಿ ಎಚ್ಚರಿಕೆಯನ್ನು ಸಹ ನೀಡಲಾಗಿದೆ. ಭೂಕಂಪ ಮಾಪನ ಕೇಂದ್ರ ಅಲಾಸ್ಕ, ಪೆನಿನ್ಸುಲಾ ದ್ವೀಪದದಲ್ಲಿ ಭೂಮಿಯಿಂದ ೯.೩ ಕಿ.ಮೀ. ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ಪತ್ತೆಯಾಗಿದ್ದು, ೭.೪ ತೀವ್ರತೆಯ ಭೂಕಂಪ ಸಂಭವಿಸಿರುವುದರಿAದ ಸುನಾಮಿ ಸಾಧ್ಯತೆ ಇದೆ ಎಂದು ಯುನೈಟೆಡ್ ಸ್ಟೇಟ್ಸ್ ಭೂ ವೈಜ್ಞಾನಿಕ ಸಮೀಕ್ಷೆ (ಯುಎಸ್ಜಿಎಸ್) ಖಚಿತಪಡಿಸಿದೆ.
ರೂ. ೧೨ ಕೋಟಿ ಮೌಲ್ಯದ ಗಾಂಜಾ ವಶ
ಬೆಂಗಳೂರು, ಜು. ೧೬: ಸಿಸಿಬಿಯ ಮಹಿಳಾ ಹಾಗೂ ನಾರ್ಕೊಟಿಕ್ಸ್ ಸ್ಕಾ÷್ವಡ್ನ ಪೊಲೀಸ್ ಅಧಿಕಾರಿಗಳು ನಗರದಲ್ಲಿ ಡ್ರಗ್ ಪೆಡ್ಲರ್ಗಳನ್ನು ಬಂಧಿಸಿದ್ದು, ಓರ್ವ ಎಂಬಿಎ ಪದವೀಧರನೂ ಬಂಧನಕ್ಕೊಳಗಾಗಿದ್ದಾನೆ. ಬಂಧಿತರಿAದ ೧೫೦೦ ಕೆ.ಜಿ. ಗಾಂಜಾವನ್ನು ವಶಕ್ಕೆ ಪಡೆಯಲಾಗಿದ್ದು, ಇದರ ಮೌಲ್ಯ ೧೨ ಕೋಟಿ ರೂಪಾಯಿಗಳೆಂದು ಹೇಳಲಾಗುತ್ತಿದೆ. ಇ-ಕಾಮರ್ಸ್ ವೇದಿಕೆಗಳ ಮೂಲಕ ಪಾರ್ಸಲ್ ಮಾಡಿ ಡ್ರಗ್ಗಳನ್ನು ಸಾಗಣೆ ಮಾಡಲಾಗುತ್ತಿತ್ತು. ಇದಷ್ಟೇ ಅಲ್ಲದೇ ಗೌಪ್ಯ ವಿಭಾಗವೊಂದನ್ನು ಸೃಷ್ಟಿಸಿ ಅದರಲ್ಲಿ ರಹಸ್ಯವಾಗಿ ಸಾಗಣೆ ಮಾಡಲಾಗುತ್ತಿತ್ತು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆರೋಪಿಗಳನ್ನು ರಾಜಸ್ಥಾನ ಮೂಲದ ಎಂಬಿಎ ಪದವೀಧರ ಚಂದ್ರಬಾನು ಬಿಷ್ಣೋಯಿ ಆಂಧ್ರಪ್ರದೇಶ ಮೂಲದ ಬಿಎ ಪದವೀಧರ ಲಕ್ಷ್ಮಿ ಮೋಹನ್ ದಾಸ್ ಎಂದು ಗುರುತಿಸಲಾಗಿದೆ.
ಯಮುನಾ ನದಿಯಲ್ಲಿ ಇಬ್ಬರು ನಾಪತ್ತೆ
ನವದೆಹಲಿ, ಜು. ೧೬: ಕಳೆದ ಕೆಲವು ದಿನಗಳಿಂದ ರಾಷ್ಟç ರಾಜಧಾನಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಯಮುನಾ ನದಿ ಅಪಾಯದ ಹಂತ ಮೀರಿ ಹರಿಯುತ್ತಿದೆ. ಗ್ರೇಟರ್ ನೋಯ್ಡಾದ ಯಮುನಾ ನದಿ ದಡಕ್ಕೆ ಭಾನುವಾರ ಸ್ನಾನಕ್ಕೆ ತೆರಳಿದ್ದ ಇಬ್ಬರು ನಾಪತ್ತೆಯಾಗಿದ್ದಾರೆ. ಇವರಿಬ್ಬರನ್ನು ಡಂಕೌರ್ ಪೊಲೀಸ್ ಠಾಣಾ ವ್ಯಾಪ್ತಿಯ ಮಕನ್ಪುರ ಖಾದರ್ ಗ್ರಾಮದ ಧೀರಾಜ್ (೨೧) ಮತ್ತು ಸಂಜಿತ್ (೧೭) ಎಂದು ಗುರುತಿಸಲಾಗಿದೆ. ಧೀರಜ್ ಮತ್ತು ಸಂಜಿತ್ ಇಂದು ಬೆಳಿಗ್ಗೆ ಯಮುನಾ ನದಿ ಬಳಿಯಿರುವ ಪ್ರವಾಹ ಪ್ರದೇಶದಲ್ಲಿ ಸ್ನಾನಕ್ಕೆ ತೆರಳಿದ್ದರು. ಅವರ ಫೋನ್ ಮತ್ತು ಬಟ್ಟೆಗಳನ್ನು ನದಿ ತೀರದಲ್ಲಿ ಇಡಲಾಗಿತ್ತು. ಆದರೆ ಇಬ್ಬರೂ ನಾಪತ್ತೆಯಾಗಿದ್ದಾರೆ.