ಮಡಿಕೇರಿ, ಜು. ೧೬: ಮಡಿಕೇರಿ ರೋಟರಿ ವತಿಯಿಂದ ನಗರದ ಜಿ. ಟಿ. ರಸ್ತೆಯಲ್ಲಿರುವ ನಗರಸಭಾ ಶಾಲೆಯ ೨೦ ಮಕ್ಕಳಿಗೆ ಪುಸ್ತಕ ಮತ್ತು ಲೇಖನಿಗಳನ್ನು ವಿತರಿಸಲಾಯಿತು. ಅಲ್ಲದೆ ಶಿಕ್ಷಕಿಯರಿಗೆ ಗೌರವ ಸಂಭಾವನೆಯನ್ನು ಡಾ. ಪಾಟ್ಕರ್ ದಂಪತಿ ಮತ್ತು ಹೆಚ್ ಎಸ್. ಅನಂತ ಸುಬ್ಬರಾವ್ ಅವರುಗಳು ನೀಡಿದರು.
ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷೆ ಗೀತಾ ಗಿರೀಶ್, ಕಾರ್ಯದರ್ಶಿ ಶರತ್ ಎಂ. ಕೆ, ಸದಸ್ಯರಾದ ಮೃಣಾಲಿನಿ ಚಿಣ್ಣಪ್ಪ, ಮಲ್ಲಿಗೆ ಪೈ, ಲಲಿತಾ ರಾಘವನ್ ಹಾಜರಿದ್ದರು.