ಮಡಿಕೇರಿ, ಜು. ೧೬: ಜೂನ್ ತಿಂಗಳ ೧೭ ಹಾಗೂ ೧೮ ರಂದು ಬೆಂಗಳೂರಿನ ಏರೀಸ್ ಒಳಾಂಗಣ ಕ್ರೀಡಾಂಗಣದಲ್ಲಿ ಕೊಡವ ಸಮಾಜ ಸ್ಪೋರ್ಟ್ಸ್ ಹಾಗೂ ರಿಕ್ರಿಯೇಷನ್ ಕ್ಲಬ್ ಅವರು ಆಯೋಜಿಸಿದ್ದ ಬಾಲಕರ ವಿಭಾಗದ ಯು-೧೭ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ವೀರಾಜಪೇಟೆಯ ಕಾವೇರಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ವಿಜೇತರಾಗಿದ್ದಾರೆ. ೧೦ನೇ ತರಗತಿಯ ವಿದ್ಯಾರ್ಥಿಗಳಾದ ಅಯ್ಯಪ್ಪ ಎಂ.ಜಿ. ೧೭ ವಯೋಮಿತಿ ಕೆಳಪಟ್ಟ ಬಾಲಕರ ವಿಭಾಗದ ಸಿಂಗಲ್ಸ್ ಪಂದ್ಯಾವಳಿಯಲ್ಲಿ ವಿಜೇತನಾಗಿದ್ದು, ಆಕರ್ಷ್ ಕೊಂಗAಡ ಬಾಲಕರ ವಿಭಾಗದ ೧೭ ವಯೋಮಿತಿ ಕೆಳಪಟ್ಟ ಹಾಗೂ ಪುರುಷರ ವಿಭಾಗದ ಪಂದ್ಯಾವಳಿಯಲ್ಲಿ ರನ್ನರ್ ಅಪ್ ಆಗಿದ್ದಾರೆ.