ಮಡಿಕೇರಿ, ಜು. ೧೬: ಕೋಪಟ್ಟಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನಿವೃತ್ತ ಬ್ಯಾಂಕ್ ವ್ಯವಸ್ಥಾಪಕ ಕೊಟ್ಟುಕತ್ತೀರ ಸೋಮಣ್ಣ ಅವರು ಉಚಿತವಾಗಿ ನೋಟ್ ಪುಸ್ತಕ ಹಾಗೂ ಲೇಖನಿ ಸಾಮಗ್ರಿಗಳನ್ನು ನೀಡಿದರು. ಕಳೆದ ೧೫ ವರ್ಷಗಳಿಂದ ಅವರು ಈ ಕಾರ್ಯ ಮಾಡುತ್ತಿದ್ದಾರೆ. ಈ ಸಾಲಿನ ದ್ವಿತೀಯ ಪಿ.ಯು.ಸಿ.ಯಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದ ದಾಯನ ವಿದ್ಯಾಶ್ರೀ ಅವರನ್ನು ಈ ಸಂದರ್ಭ ಸೋಮಣ್ಣ ಸನ್ಮಾನಿಸಿದರು. ಕೊಟ್ಟುಕತ್ತೀರ ವಿಜಯ ಅವರು ಮಕ್ಕಳಿಗೆ ಸಮವಸ್ತç ವಿತರಿಸಿ ದರು. ಈ ಸಂದರ್ಭ ಎಸ್.ಡಿ.ಎಂ.ಸಿ. ಅಧ್ಯಕ್ಷ ಪರದಂಡ ಪ್ರದೀಪ್, ಮುಖ್ಯ ಶಿಕ್ಷಕಿ ಪಟ್ಟಮಾಡ ಜಯಂತಿ, ಅತಿಥಿ ಶಿಕ್ಷಕಿ ಜಾಹ್ನವಿ ಹಾಗೂ ಇತರರು ಹಾಜರಿದ್ದರು.