ಮಡಿಕೇರಿ, ಜು. ೧೪: ಕುಶಾಲನಗರ ಹಾಗೂ ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಹಾಗೂ ಎಂ.ಡಿ.ಎA.ಎ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವಿವಿಧ ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು ೧೪ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕುಶಾಲನಗರದ ಇಂದಿರಾ ಬಡಾವಣೆ, ವಾಲ್ಮೀಕಿ ಭವನದ ಬಳಿ ಮಾರಾಟದ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಕೇರಳ ರಾಜ್ಯದ ಸಿಜೆನ್ ಮಂಗಳಸೇರಿ (೩೭), ಸೋಮವಾರಪೇಟೆ ಕಲ್ಕಂದೂರು ನಿವಾಸಿಗಳಾದ ಹಕೀಂ (೪೦), ಮುಸ್ತಾಫ (೪೦), ಗುಮ್ಮನಕೊಲ್ಲಿ ನಿವಾಸಿಗಳಾದ ವಿನೋದ್ (೪೧), ಶಂಕರ (೪೧) ಎಂಬವರುಗಳನ್ನು ಬಂಧಿಸಿದ್ದಾರೆ.

ಬಂಧಿತರಿAದ ೧ ಕೆಜಿ ೭೫ ಗ್ರಾಂ ತೂಕದ ಗಾಂಜಾ ಹಾಗೂ ೫.೬ ಗ್ರಾಂ ತೂಕದ ಎಂಡಿಎAಎ ಅನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.