ಕರಿಕೆ, ಜು. ೧೪: ಗಡಿ ಗ್ರಾಮವಾದ ಕರಿಕೆ ಸಮರ್ಪಕವಾಗಿ ನೆಟ್‌ವರ್ಕ್ ಇಲ್ಲದೆ ಮೊಬೈಲ್ ಸಂಪರ್ಕಕ್ಕೆ ಕೇರಳದ ಟವರ್‌ನ ಅವಲಂಬಿತವಾಗಿದ್ದು, ಗ್ರಾಮಸ್ಥರು, ಸ್ಥಳೀಯ ಗ್ರಾಮ ಪಂಚಾಯತಿಯವರು ಈ ಬಗ್ಗೆ ಪ್ರಧಾನಿ ಹಾಗೂ ಸಂಸದರಿಗೆ ಮನವಿ ಸಲ್ಲಿಸಿದ ಪರಿಣಾಮವಾಗಿ ಸಂಸದ ಪ್ರತಾಪ್ ಸಿಂಹ ಅವರ ಪ್ರಯತ್ನದಿಂದಾಗಿ ನೂತನ ಟವರ್ ಮಂಜೂರಾಗಿದೆ.
ಈ ಬಗ್ಗೆ ಬಿಎಸ್‌ಎನ್‌ಎಲ್ ಹಲವು ಬಾರಿ ಸ್ಥಳ ಪರಿಶೀಲನೆ ನಡೆಸಿ ತಾಂತ್ರಿಕ ಪ್ರಕ್ರಿಯೆ ನಡೆಸಿದ್ದು, ಸಂಸ್ಥೆಗೆ ಕಂದಾಯ ಇಲಾಖೆಯಿಂದ ೫ ಸೆಂಟ್ ಜಾಗ ಮಂಜೂರಾತಿ ಆಗಿದ್ದು, ಇದೀಗ ಇಲಾಖೆ ಅಧಿಕಾರಿಗಳು ಅಂತಿಮ ಹಂತದ ಸ್ಥಳ ಪರಿಶೀಲನೆ ನಡೆಸಿದರು. ಈ ಸಂದರ್ಭ ಪಂಚಾಯಿತಿ ಉಪಾಧ್ಯಕ್ಷ ಎನ್. ಬಾಲಚಂದ್ರ ನಾಯರ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಗಣಪತಿ ಪಿ.ಪಿ. ಹಾಜರಿದ್ದರು.