ಶನಿವಾರಸಂತೆ, ಜು. ೧೪: ಹೋಬಳಿ ವ್ಯಾಪ್ತಿಯ ಹೆಗ್ಗುಳ ಗ್ರಾಮದ ರಾಜ್ಯ ಹೆದ್ದಾರಿ ರಸ್ತೆ ಬದಿಯಲ್ಲಿ ಅಪಾಯಕ್ಕೆ ಆಹ್ವಾನ ನೀಡುವಂತೆ ಒಣಗಿ ನಿಂತಿರುವ ಮರವನ್ನು ಶೀಘ್ರ ತೆರವುಗೊಳಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕ.ರ.ವೇ. ಸೋಮವಾರಪೇಟೆ ತಾಲೂಕು ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ ಹಾಗೂ ಕಾರ್ಯಕರ್ತರು ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಒಣಗಿದ ಮರವಿರುವ ಸ್ಥಳ ಜನವಸತಿ ಪ್ರದೇಶವಾಗಿದ್ದು ಇದೇ ರಸ್ತೆಯಲ್ಲಿ ಶಾಲಾ ಮಕ್ಕಳು, ಸಾರ್ವಜನಿಕರು ತಿರುಗಾಡುತ್ತಿರುತ್ತಾರೆ. ವಾಹನಗಳ ಸಂಚಾರವು ಅಧಿಕವಾಗಿದ್ದು ಅಪಾಯ ಸಂಭವಿಸುವ ಸಾಧ್ಯತೆ ಇದೆ. ಮರದ ಒಣಗಿದ ಕೊಂಬೆ-ರೆAಬೆಗಳು ಈಗಾಗಲೇ ಬೀಳುವ ಸ್ಥಿತಿ ತಲುಪಿವೆ. ಶನಿವಾರಸಂತೆಯಿAದ ಸೋಮವಾರಪೇಟೆಯವರೆಗೂ ರಾಜ್ಯ ಹೆದ್ದಾರಿಯಲ್ಲಿ ಅಲ್ಲಲ್ಲಿ ಮರಗಳು ಒಣಗಿ ನಿಂತಿವೆ. ಪಾದಚಾರಿಗಳಿಗೆ ಮಾತ್ರವಲ್ಲ; ವಾಹನ ಸವಾರರಿಗೆ, ವಾಹನಗಳಿಗೂ ಅಪಾಯವಾಗುವ ಸಾಧ್ಯತೆ ಇರುವುದರಿಂದ ಅರಣ್ಯ ಇಲಾಖೆಯೇ ಹೊಣೆ ಹೊರಬೇಕಾಗುತ್ತದೆ ಎಂದು ಕ.ರ.ವೇ. ತಾಲೂಕು ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ, ಕಾರ್ಯದರ್ಶಿ ಪ್ರವೀಣ್ ಹಾಗೂ ಕಾರ್ಯಕರ್ತರು ಆಗ್ರಹಿಸಿದ್ದಾರೆ.