ಸೋಮವಾರಪೇಟೆ, ಜು. ೧೪: ಅರಣ್ಯ ಇಲಾಖೆಯಿಂದ ನಡೆಯು ತ್ತಿರುವ ಅವೈಜ್ಞಾನಿಕ ಕ್ರಮದಿಂದಾಗಿ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರು, ಯಡವಾರೆ, ಸಜ್ಜಳ್ಳಿ, ಐಗೂರು ಭಾಗದಲ್ಲಿ ಕಾಡಾನೆಗಳ ಸಮಸ್ಯೆ ಮುಂದುವರೆಯುತ್ತಲೇ ಇದೆ.

ಒಂದು ಕಿ.ಮೀ.ಗೆ ಒಂದೂವರೆ ಕೋಟಿಯಂತೆ ರೈಲ್ವೆ ಬ್ಯಾರಿಕೇಡ್ ಅಳವಡಿಸುವ ಕೆಲಸ ನಡೆಯುತ್ತಿದ್ದರೂ ಕಾಡಾನೆಗಳು ಮಾತ್ರ ತಮಗೆ ಸಿಕ್ಕಿದ ಕಡೆಗಳಲ್ಲಿ ಜನವಸತಿ ಹಾಗೂ ಕಾಫಿ ತೋಟಕ್ಕೆ ಲಗ್ಗೆಯಿಡುತ್ತಿದ್ದು, ಆ ಮೂಲಕ ಕಾಡಾನೆಗಳಿಗೆ ಕಡಿವಾಣ ಹಾಕುವ ಇಲಾಖೆಯ ಯತ್ನವನ್ನು ವಿಫಲಗೊಳಿಸುತ್ತಿವೆ.

ಐಗೂರು ವ್ಯಾಪ್ತಿಯ ಕಾಜೂರು ಭಾಗದಲ್ಲಿ ಅರಣ್ಯ ಇಲಾಖೆಯಿಂದ ರೈಲ್ವೇ ಬ್ಯಾರಿಕೇಡ್ ಅಳವಡಿಸುವ ಕೆಲಸ ನಡೆಯುತ್ತಿದ್ದು, ಕೆಲವೊಂದು ಕಡೆಗಳಲ್ಲಿ ಹಾಗೆಯೇ ಬಿಟ್ಟಿರುವುದರಿಂದ ಯಡವನಾಡು ಮೀಸಲು ಅರಣ್ಯದ ಕಾಜೂರು ಅರಣ್ಯದಿಂದ ಕಾಡಾನೆಗಳು ಜನವಸತಿ ಪ್ರದೇಶಕ್ಕೆ ಲಗ್ಗೆಯಿಡುತ್ತಿವೆ.

ನಿನ್ನೆ ರಾತ್ರಿ ಕಾಜೂರು ಅರಣ್ಯದಿಂದ ಟಾಟಾ ಕಾಫಿ ತೋಟಕ್ಕೆ ಹೋಗಿದ್ದ ಕಾಡಾನೆಯನ್ನು ಇಂದು ಬೆಳಿಗ್ಗೆ ಅರಣ್ಯ ಇಲಾಖಾ ಸಿಬ್ಬಂದಿಗಳು ಹರಸಾಹಸ ಪಟ್ಟು ಮರಳಿ ಅರಣ್ಯಕ್ಕೆ ಅಟ್ಟುವಲ್ಲಿ ಯಶಸ್ವಿಯಾದರು. ಕಾಫಿ ತೋಟಕ್ಕೆ ತೆರಳಿದ್ದ ಕಾಡಾನೆ ಇಂದು ಬೆಳಿಗ್ಗೆ ವಾಪಸ್ ಅರಣ್ಯಕ್ಕೆ ಹೋಗುವ ಸಂದರ್ಭ ಸೋಲಾರ್ ತಂತಿ ಬೇಲಿಗೆ ವಿದ್ಯುತ್ ಪ್ರವಹಿಸಲಾಗಿದ್ದರಿಂದ ವಾಪಸ್ ತೆರಳಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆ ರೈಲ್ವೇ ಬ್ಯಾರಿಕೇಡ್‌ನ ಪಕ್ಕದಲ್ಲಿಯೇ ಸುಮಾರು ೨ ಕಿ.ಮೀ.ನಷ್ಟು ಸಾಗಿದ ಕಾಡಾನೆಯನ್ನು ಕಾಜೂರು ನಡೆಯುತ್ತಿದ್ದು, ಕೆಲವೊಂದು ಕಡೆಗಳಲ್ಲಿ ಹಾಗೆಯೇ ಬಿಟ್ಟಿರುವುದರಿಂದ ಯಡವನಾಡು ಮೀಸಲು ಅರಣ್ಯದ ಕಾಜೂರು ಅರಣ್ಯದಿಂದ ಕಾಡಾನೆಗಳು ಜನವಸತಿ ಪ್ರದೇಶಕ್ಕೆ ಲಗ್ಗೆಯಿಡುತ್ತಿವೆ.

ನಿನ್ನೆ ರಾತ್ರಿ ಕಾಜೂರು ಅರಣ್ಯದಿಂದ ಟಾಟಾ ಕಾಫಿ ತೋಟಕ್ಕೆ ಹೋಗಿದ್ದ ಕಾಡಾನೆಯನ್ನು ಇಂದು ಬೆಳಿಗ್ಗೆ ಅರಣ್ಯ ಇಲಾಖಾ ಸಿಬ್ಬಂದಿಗಳು ಹರಸಾಹಸ ಪಟ್ಟು ಮರಳಿ ಅರಣ್ಯಕ್ಕೆ ಅಟ್ಟುವಲ್ಲಿ ಯಶಸ್ವಿಯಾದರು. ಕಾಫಿ ತೋಟಕ್ಕೆ ತೆರಳಿದ್ದ ಕಾಡಾನೆ ಇಂದು ಬೆಳಿಗ್ಗೆ ವಾಪಸ್ ಅರಣ್ಯಕ್ಕೆ ಹೋಗುವ ಸಂದರ್ಭ ಸೋಲಾರ್ ತಂತಿ ಬೇಲಿಗೆ ವಿದ್ಯುತ್ ಪ್ರವಹಿಸಲಾಗಿದ್ದರಿಂದ ವಾಪಸ್ ತೆರಳಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆ ರೈಲ್ವೇ ಬ್ಯಾರಿಕೇಡ್‌ನ ಪಕ್ಕದಲ್ಲಿಯೇ ಸುಮಾರು ೨ ಕಿ.ಮೀ.ನಷ್ಟು ಸಾಗಿದ ಕಾಡಾನೆಯನ್ನು ಕಾಜೂರು ದಾಟುತ್ತಿದ್ದವು.

ರೈಲ್ವೇ ಬ್ಯಾರಿಕೇಡ್ ಅಳವಡಿಸಿದ ನಂತರ ಇದರಿಂದಾಗಿ ಕಾಡಾನೆಗಳು ಸಿಕ್ಕಸಿಕ್ಕ ಸ್ಥಳಗಳಲ್ಲಿ ರಸ್ತೆ ದಾಟುತ್ತಿವೆ. ವಾಹನ ಸವಾರರು ಮತ್ತು ಸ್ಥಳೀಯರು ಜೀವ ಭಯದಿಂದ ಸಂಚರಿಸು ವಂತಾಗಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.

ಪ್ರಸ್ತುತ ಕಾಜೂರು ಭಾಗದಲ್ಲಿ ಎರಡು ಆನೆಗಳು ಪ್ರತ್ಯೇಕವಾಗಿ ಓಡಾಡುತ್ತಿವೆ. ಉಳಿದಂತೆ ಮರಿಯಾನೆಯನ್ನು ಒಳಗೊಂಡAತೆ ನಾಲ್ಕು ಆನೆಗಳ ಗುಂಪು ಬೀಡುಬಿಟ್ಟಿವೆ. ಮೊನ್ನೆಯಷ್ಟೇ ದುರ್ಗಾ ಎಸ್ಟೇಟ್‌ನಲ್ಲಿ ಕಾಡಾನೆ ಅಡ್ಡಲಾಗಿ ಬಂದಿದ್ದರಿAದ ರೈಟರ್ ಬೈಕ್ ಬಿಟ್ಟು ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಷ್ಟೆಲ್ಲಾ ಅವಾಂತರಕ್ಕೆ ಆನೆ ಕಾರಿಡಾರ್ ಮುಚ್ಚಿರುವುದೇ ಕಾರಣವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಕಾಡಾನೆ ಕಾರಿಡಾರ್‌ನ್ನು ಒಳಗೊಂಡAತೆ ಸೋಲಾರ್ ಹಾಕಿರುವುದು ಹಾಗೂ ಕೆಲವೊಂದು ಸ್ಥಳಗಳನ್ನು ಹೊರತುಪಡಿಸಿ ಬ್ಯಾರಿಕೇಡ್ ಅಳವಡಿಸಿರುವುದರಿಂದ ಕಾಡಾನೆಗಳು ಯಡವಾರೆ, ಕಾಜೂರು, ಸಜ್ಜಳ್ಳಿ, ಐಗೂರು ವ್ಯಾಪ್ತಿಯಲ್ಲಿ ಸಂಚರಿಸುತ್ತಿವೆ. ಜನವಸತಿ ಪ್ರದೇಶದಲ್ಲಿ ಓಡಾಡುತ್ತಿವೆ. ಜನವಸತಿ ಪ್ರದೇಶದಲ್ಲಿರುವ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಿ ನಂತರ ಅರಣ್ಯದ ಸುತ್ತಲೂ ಬ್ಯಾರಿಕೇಡ್ ಅಳವಡಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ನಿನ್ನೆ ದಿನ ಕಾಫಿ ತೋಟಕ್ಕೆ ಲಗ್ಗೆಯಿಟ್ಟು ಇಂದು ವಾಪಸ್ ತೆರಳಲಾರದೇ ರಸ್ತೆ ಬದಿಯಲ್ಲಿ ನಿಂತಿದ್ದ ಕಾಡಾನೆಯನ್ನು ಅರಣ್ಯ ಇಲಾಖಾ ಸಿಬ್ಬಂದಿಗಳಾದ ಶ್ರೀಕಾಂತ್, ಧರ್ಮಪ್ಪ, ಅರಣ್ಯ ವೀಕ್ಷಕರಾದ ಹರ್ಷಿತ್, ವಿನೋದ್, ದರ್ಶನ್, ಆನೆ ಕಾರ್ಯಾಚರಣೆ ಪಡೆ ಹಾಗೂ ಟಾಟಾ ಕಾಫಿ ಸಂಸ್ಥೆಯ ಸಿಬ್ಬಂದಿಗಳು ಹರಸಾಹಸ ಪಟ್ಟು ಕಾಡಾನೆಯನ್ನು ಅರಣ್ಯಕ್ಕೆ ಅಟ್ಟಿದರು.