ಸೋಮವಾರಪೇಟೆ, ಜು. ೧೩: ವಿದ್ಯುತ್ ಬಿಲ್ ಕಲೆಕ್ಟರ್ ಮೇಲೆ ಮನೆಯ ಮಾಲೀಕ ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆ ಮಾದಾಪುರ ಸಮೀಪದ ಜಂಬೂರು ಬಾಣೆಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಬಡಾವಣೆಯಲ್ಲಿ ನಡೆದಿದೆ. ಮಾದಾಪುರ ಜಂಬೂರು ಬಾಣೆ ವ್ಯಾಪ್ತಿಯ ಬಿಲ್ ಕಲೆಕ್ಟರ್ ಪ್ರಶಾಂತ್ ಎಂಬಾತ ಪ್ರಾಣಾಪಾಯದಿಂದ ಪಾರಾಗಿದ್ದು, ಆರೋಪಿ ರತೀಶ್ನನ್ನು ವಿಚಾರಣೆಗೊಳಪಡಿಸಲಾಗಿದೆ. ಮನೆಗೆ ಸಂಪರ್ಕ ನೀಡಿರುವ ವಿದ್ಯುತ್ ಮೀಟರ್ನ ರೀಡಿಂಗ್ ನಂತರ ಕರೆಂಟ್ ಬಿಲ್ನಲ್ಲಿ ವ್ಯತ್ಯಾಸ ಬಂದ ಹಿನ್ನೆಲೆ ಪ್ರಶಾಂತ್ ಹಾಗೂ ರತೀಶ್ ನಡುವೆ ವಾಗ್ವಾದ ಏರ್ಪಟ್ಟಿದ್ದು, ಈ ಸಂದರ್ಭ ಅವಾಚ್ಯ ಶಬ್ದಗಳಿಂದ ನಿಂದನೆಯೂ ಜರುಗಿದೆ. ಜಗಳ ತಾರಕಕ್ಕೇರಿದ
(ಮೊದಲ ಪುಟದಿಂದ) ಹಿನ್ನೆಲೆ ರತೀಶ್ ಮನೆಯೊಳಗಿದ್ದ ಚಾಕುವನ್ನು ತಂದು ಪ್ರಶಾಂತ್ಗೆ ಇರಿದಿದ್ದಾನೆ ಎನ್ನಲಾಗಿದ್ದು, ಘಟನೆಯಿಂದ ಪ್ರಶಾಂತ್ನ ಹೊಟ್ಟೆ ಹಾಗೂ ಕೈ ಭಾಗಕ್ಕೆ ಗಾಯಗಳಾಗಿವೆ. ಗಾಯಾಳುವನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಸ್ಥಳಕ್ಕೆ ಸೋಮವಾರಪೇಟೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.