ಸುAಟಿಕೊಪ್ಪ, ಜು. ೧೩: ಸುಂಟಿಕೊಪ್ಪದಲ್ಲಿ ಗಾಂಜಾ ಹಾಗೂ ಎಂಡಿಎA ಮಾದಕ ವಸ್ತು ಮಾರಾಟ ಜಾಲವೊಂದನ್ನು ಪೊಲೀಸರು ಯಶ್ವಸಿಯಾಗಿ ಭೇದಿಸಿದ್ದು ಮಾಲು ಹಾಗೂ ವಾಹನ ಸಹಿತ ಆರು ಮಂದಿಯನ್ನು ಬಂಧಿಸಿದ್ದಾರೆ.

ಸುಂಟಿಕೊಪ್ಪ ಚೆಸ್ಕಾಂ ಬಳಿಯ ನಿವಾಸಿಯಾದ ರಫೀಕ್ ಆಲಿಯಾಸ್ ಸತ್ತಾರ್, ರಫೀಕ್, ನಯನ ಹೆರೂರು, ಸುಂಟಿಕೊಪ್ಪ ಅಭಿಷೇಕ್, ಮುಕ್ರಂ ಹಾಗೂ ಅತೀಕ್ ಎಂಬ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಬಂಧಿತರಿAದ ೧ ಕೆ.ಜಿ. ೬೫ ಗ್ರಾಂ. ಗಾಂಜಾ ಮತ್ತು ೨ ಗ್ರಾಂ. ಎಂಡಿಎA ಮಾದಕ ವಸ್ತು ಹಾಗೂ ಗೂಡ್ಸ್ ಆಟೋವೊಂದನ್ನು ವಶಪಡಿಸಿಕೊಂಡಿದ್ದಾರೆ.

ಗುರುವಾರದAದು ಸುಂಟಿಕೊಪ್ಪದ ಮಾರುಕಟ್ಟೆ ರಸ್ತೆ ಬಳಿಯಲ್ಲಿ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿದ್ದು ಆರೋಪಿಗಳನ್ನು ಬಂಧಿಸಿ ನ್ಯಾಯಾಲ ಯಕ್ಕೆ ಹಾಜರುಪಡಿಸಲಾಗಿದೆ.

ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕ ರಾಮರಾಜನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಂದರ್ ರಾಜ್, ಡಿವೈಎಸ್‌ಪಿ ಆರ್.ವಿ. ಗಂಗಾಧರಪ್ಪ, ಕುಶಾಲನಗರ

(ಮೊದಲ ಪುಟದಿಂದ) ವೃತ್ತ ನಿರೀಕ್ಷಕ ಬಿ.ಜಿ. ಮಹೇಶ್, ನೇತೃತ್ವದಲ್ಲಿ ಸುಂಟಿಕೊಪ್ಪ ಠಾಣಾಧಿಕಾರಿ ಶ್ರೀಧರ್ ಎಂ.ಸಿ., ಅಪರಾಧ ವಿಭಾಗದ ಎಸ್.ಐ. ಸ್ವಾಮಿ ಸಿಬ್ಬಂದಿಗಳಾದ ಮುಖ್ಯಪೇದೆ ಸತೀಶ್ ಎಂ.ವಿ., ಜಗದೀಶ್, ಪ್ರವೀಣ್, ಸಂಪತ್, ನಿಶಾಂತ್, ಸತೀಶ್ ಕುಮಾರ್, ಇಳಗೆರೆ, ಅಭಿಲಾಷ್, ಪ್ರಶಾಂತ್ ಕುಮಾರ್, ಉದಯಕುಮಾರ್, ಸೌಮ್ಯ, ಸಂತೋಷ್, ಸತೀಶ್ ಹಿರಿಗೇರಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಕುಶಾಲನಗರ : ಕುಶಾಲನಗರ, ಗುಡ್ಡೆಹೊಸೂರು ವ್ಯಾಪ್ತಿಯಲ್ಲಿ ಅಕ್ರಮ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಹೊರರಾಜ್ಯದ ವ್ಯಕ್ತಿ ಸೇರಿದಂತೆ ೭ ಮಂದಿ ಆರೋಪಿಗಳು ಹಾಗೂ ಅವರ ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು ಹೆಚ್ಚಿನ ವಿಚಾರಣೆ ನಡೆಯುತ್ತಿದೆ.

ಗುಡ್ಡೆಹೊಸೂರು ಬಳಿ ತೂಗು ಸೇತುವೆ ಮೂಲಕ ಕೆಲವು ಆರೋಪಿಗಳು ಪರಾರಿಯಾಗಿದ್ದು ಹೆಚ್ಚಿನ ತನಿಖೆ ಮುಂದುವರಿದಿದೆ.