ಮಡಿಕೇರಿ, ಜು. ೯: ಮಳೆಯಿಂದ ಸೇತುವೆ ಜಲಾವೃತಗೊಂಡ ಪರಿಣಾಮ ರೋಗಿಯೋರ್ವನನ್ನು ಆಸ್ಪತ್ರೆಗೆ ಕೊಂಡೊಯ್ಯಲು ಪರದಾಡಿದ ಘಟನೆ ಮಡಿಕೇರಿ ತಾಲೂಕಿನ ಬೇಂಗೂರಿನಲ್ಲಿ ನಡೆದಿದೆ.

ದೋಣಿಕಡವು-ಕೂಡಕಂಡಿ ಪರಂಬು ಸೇತುವೆ ಜಲಾವೃತಗೊಂಡು ಸಂಚಾರ ಕಡಿತಗೊಂಡಿವೆ. ಅನಾರೋಗ್ಯದಿಂದ ಬಳಲುತ್ತಿದ್ದ ಗ್ರಾಮದ ರಕ್ಷಿತ್ ಎಂಬಾತನನ್ನು ಗ್ರಾಮಸ್ಥರು ಸ್ಟçಚ್ಚರ್‌ನಲ್ಲಿ ಮಲಗಿಸಿ ಹೊಳೆ ದಾಟಿಸಿ ಆಸ್ಪತ್ರೆಗೆ ರವಾನಿಸಿದ್ದಾರೆ.