ಸುಂಟಿಕೊಪ್ಪ, ಜು. ೯: ಸುಂಟಿಕೊಪ್ಪ ಪಟ್ಟಣ ವ್ಯಾಪ್ತಿಯಲ್ಲಿ ಕಳೆದ ೩ ದಿನಗಳಿಂದ ತಾಜ್ಯ ವಿಲೇವಾರಿಯಾಗದೆ ಸಮಸ್ಯೆ ಸೃಷ್ಠಿಯಾಗಿದೆ.
ಸುಂಟಿಕೊಪ್ಪ ಈಗಾಗಲೇ ಡೆಂಗ್ಯೂ ಪೀಡಿತ ಪ್ರದೇಶವಾಗಿದ್ದು, ಇದರ ಜೊತೆಗೆ ಕೋಳಿ, ಮೀನು, ಕುರಿ ಮಾಂಸದ ಅಂಗಡಿಗಳಿAದ ತ್ಯಾಜ್ಯ ವಿಲೇವಾರಿಯಾಗದೆ ಶೇಖರಣೆಗೊಂಡಿದ್ದು ಸಾಂಕ್ರಾಮಿಕ ಹರಡಲು ಕಾರಣವಾಗಲಿದೆ. ಪಂಚಾಯಿತಿಯು ಈ ಬಗ್ಗೆ ಕಾರ್ಯನ್ಮೋಖವಾಗಬೇಕಾಗಿದೆ. ೩ ದಿನಗಳ ಕಾಲ ಕಸ ವಿಲೇವಾರಿ ಆಗದಿರುವ ಹಿನ್ನೆಲೆಯಲ್ಲಿ ಕೆಲವು ಟ್ರಾö್ಯಕ್ಟರ್ ಬರುವ ನಿರೀಕ್ಷೆಯಲ್ಲಿ ಮನೆಯ ಕಸ ತ್ಯಾಜ್ಯಗಳನ್ನು ತಂದು ರಸ್ತೆ ಬದಿಯಲ್ಲಿ ಇರಿಸಿದ್ದು, ಬೀದಿ ನಾಯಿ ಸೇರಿದಂತೆ ದನಗಳು ಎಳೆದಾಡಿರುವುದು ಕಂಡು ಬಂದಿದೆ. ಕೆಲವು ಬಡಾವಣೆಗಳಲ್ಲಿ ಮೂಗು ಮುಚ್ಚಿ ತಿರುಗಾಡುವ ಪರಿಸ್ಥಿತಿ ಎದುರಾಗಿದೆ.
ಪತ್ರಿಕೆಗೆ ಲಭ್ಯವಾದ ಮಾಹಿತಿಯಂತೆ ಪಂಚಾಯಿತಿಗೆ ಸೇರಿದ ಕಸ ವಿಲೇವಾರಿ ರಿಕ್ಷಾ ಮತ್ತು ಟ್ರಾಕ್ಟರ್ ಹಳೆಯದಾಗಿದ್ದು, ಆಗಿದ್ದಾಂಗೆ ರಿಪೇರಿಯಾಗುತ್ತದೆ. ಈ ಹಿಂದೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಂಟಿಕೊಪ್ಪಕ್ಕೆ ಭೇಟಿ ನೀಡಿದ ಸಂದರ್ಭ ಈ ವಾಹನಗಳನ್ನು ಗುಜರಿಗೆ ಹಾಕುವ ಸಂಬAಧ ಸಾರಿಗೆ ಪ್ರಾಧಿಕಾರದಿಂದ ಅಧಿಕೃತ ನಿರೀಕ್ಷೇಪಣಾ ಪತ್ರವನ್ನು ನೀಡಿದ್ದಲ್ಲಿ ನೂತನ ವಾಹನಕ್ಕೆ ಅನುಮೋದನೆ ನೀಡುತ್ತೇನೆಂದು ಹೇಳಿದರು. ಆದರಂತೆ ಸಾರಿಗೆ ಪ್ರಾಧಿಕಾರ ಇಲಾಖೆಗೆ ನಿರಾಕ್ಷೇಪಣಾ ಪತ್ರ ಬರೆಯಲಾಗಿದೆ. ಪತ್ರಕ್ಕಾಗಿ ಕಾಯಲಾಗುತ್ತಿದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್ ತಿಳಿಸಿದ್ದಾರೆ.