ವೀರಾಜಪೇಟೆ, ಜು. ೯: ಜನರ ಸಮಸ್ಯೆಗಳಿಗೆ ಸ್ಪಂದಿಸಲು ದೂರು, ಮನವಿಗಳನ್ನು ಸಲ್ಲಿಸಲು ಜನ ಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ‘ಎಎಸ್ಪೊನ್ನಣ್ಣ.ಕಾಮ್’ ವೆಬ್ಸೈಟ್ಗೆ ಶಾಸಕ ಎ.ಎಸ್. ಪೊನ್ನಣ್ಣ ಚಾಲನೆ ನೀಡಿದರು.
ಬಳಿಕ ಜನರ ತುರ್ತು ಸೇವೆಗೆ ಎಎಸ್ಪಿ ಎಂಬ ಯುವಕರ ರಕ್ಷಣಾ ತಂಡಕ್ಕೆ ಲಾಂಛನವನ್ನು ಅನಾವರಣ ಗೊಳಿಸಿದರು.
ವೀರಾಜಪೇಟೆ ಪುರಸಭಾ ಸಭಾಂಗಣದಲ್ಲಿ ಶಾಸಕರ ಜನ್ಮ ದಿನದ ಅಂಗವಾಗಿ ವೀರಾಜಪೇಟೆ ನಗರ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಎ.ಎಸ್ ಪೊನ್ನಣ್ಣ, ಕಾಮಗಾರಿ, ಅಭಿವೃದ್ದಿ ಕೆಲಸ ಎಲ್ಲವನ್ನು ಒಂದೆಡೆ ತರಲು ವೆಬ್ಸೈಟ್ನ್ನು ಚಾಲನೆಗೊಳಿಸಿ ದಾಗಿಯೂ ಮತ್ತು ಅದೇ ರೀತಿ ಜನರ ತುರ್ತು ಸೇವೆಗೆ ಎಎಸ್ಪಿ ಎಂಬ ಯುವಕರ ರಕ್ಷಣಾ ತಂಡಕ್ಕೆ ಚಾಲನೆ ನೀಡಿದಾಗಿ ಶಾಸಕ ಪೊನ್ನಣ್ಣ ಹೇಳಿದರು.
ವೆಬ್ಸೈಟ್ಗೆ ಕ್ಷೇತ್ರದ ಜನರು ತಮ್ಮ ದೂರುಗಳನ್ನು, ಸಮಸ್ಯೆಗಳನ್ನು ಸಲ್ಲಿಸಬಹುದು. ಇದರಲ್ಲಿ ಚಾಟ್ ಮಾಡಬಹುದು, ‘ಮಿಸ್ಡ್ ಕಾಲ್’ ವ್ಯವಸ್ಥೆಯು ಇದೆ. ತಕ್ಷಣಕ್ಕೆ ಸಾಧÀ್ಯವಾದಷ್ಟು ಮಟ್ಟಿಗೆ ಸ್ಪಂದಿಸುವ ಕೆಲಸವಾಗಲಿದೆ. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸಿದರು.
ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮುಖ್ಯ ಅತಿಥಿಯಾಗಿ ಮಾತನಾಡಿ, ಕೊಡಗಿನಲ್ಲಿ ಪೊನ್ನಣ್ಣ ಮೂರು ವರ್ಷದಿಂದ ಜನಪರ ಕೆಲಸ ಮಾಡಿದ್ದಾರೆ. ಜನಮನ್ನಣೆ ಗಳಿಸಿ ಇಂದು ವೀರಾಜಪೇಟೆ ಕ್ಷೇತ್ರದ ಶಾಸಕರಾಗಿದ್ದಾರೆ. ಇವರಿಗೆ ಜನಪರ ಕೆಲಸ ಕಾಳಜಿ ಇರುವ ಕಾರಣಕ್ಕಾಗಿ ಇಂದು ಉತ್ತಮ ಸ್ಥಾನ ಲಭಿಸಿದೆ ಎಂದರು.
ಸಮಾರAಭದ ಅಧ್ಯಕ್ಷತೆ ವಹಿಸಿದ್ದ ನಗರ ಕಾಂಗ್ರೆಸ್ ಅಧ್ಯಕ್ಷ ಮಾದಂಡ ತಿಮ್ಮಯ್ಯ ಮಾತನಾಡಿದರು. ಪುರಸಭೆÀ ಸದಸ್ಯ ಮಹ್ಮದ್ ರಾಫಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭ ಶಾಸಕರ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.
ವೇದಿಕೆಯಲ್ಲಿ ರಾಜ್ಯ ಕಾಂಗ್ರೆಸ್ ವಕ್ತಾರ ಸಂಕೇತ್ ಪೂವಯ್ಯ, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಪುರಸಭೆ ಮುಖ್ಯಾಧಿಕಾರಿ ಚಂದ್ರಕುಮಾರ್, ಜಿಲ್ಲಾ ಆಸ್ವತ್ರೆಯ ರಕ್ತನಿಧಿ ಕೇಂದ್ರದ ಡಾ. ಕರುಂಬಯ್ಯ, ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಶಿಧರನ್ ಉಪಸ್ಥಿತರಿದ್ದರು.
ಈ ಸಂದರ್ಭ ಶಾಸಕರ ಪತ್ನಿ ಕಾಂಚನಾ ಪೊನ್ನಣ್ಣ, ನಗರ ಕಾಂಗ್ರೆಸ್ ಉಪಾಧ್ಯಕ್ಷ ಹಮೀದ್ ಹಾಗೂ ಪದಾಧಿಕಾರಿಗಳು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು, ಸಮಾರಂಭದಲ್ಲಿ ಉಪಸ್ಥಿತರಿದ್ದರು.