ಮಡಿಕೇರಿ, ಜು. ೯: ತಲಕಾವೇರಿ ಪುಣ್ಯಕ್ಷೇತ್ರವಾಗಿಯೇ ಉಳಿಯಲಿದೆ ಹೊರತು ಯಾವುದೇ ಕಾರಣಕ್ಕೂ ಪ್ರವಾಸಿ ತಾಣವಾಗುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಹೇಳಿದರು.

ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಇಂದು ಪತ್ನಿ ಕಾಂಚನ ಅವರೊಂದಿಗೆ ಭಾಗಮಂಡಲದಲ್ಲಿ ಭಗಂಡೇಶ್ವರ ಹಾಗೂ ತಲಕಾವೇರಿಯ ಪವಿತ್ರ ಕುಂಡಿಕೆಯಲ್ಲಿ ಪೂಜೆ ಸಲ್ಲಿಸಿದ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು. ತಾನು ಹಿಂದಿನಿAದಲೂ ಕಾವೇರಿ ತಾಯಿಯ ಬಗ್ಗೆ ಅಪಾರ ಶ್ರದ್ಧಾ ಭಕ್ತಿ ಹೊಂದಿದ್ದು, ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ಕಾವೇರಿ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ನಂತರ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಕಾವೇರಿ ಹೆಸರಿನಲ್ಲೇ ಪ್ರಮಾಣ ವಚನ ಸ್ವೀಕರಿಸಿದ್ದೇನೆ ಎಂದು ಸ್ಮರಿಸಿದ ಅವರು, ತಲಕಾವೇರಿಯ ಧಾರ್ಮಿಕ ಸಂಪ್ರದಾಯಗಳಿಗೆ ಯಾವುದೇ ಧಕ್ಕೆಯಾಗದ ರೀತಿ ವ್ಯವಸ್ಥೆ ಕಲ್ಪಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು. ಈ ಸಂಬAಧ ಸರ್ಕಾರದಿಂದ ೩ಐದನೇ ಪುಟಕ್ಕೆ

(ಮೊದಲ ಪುಟದಿಂದ) ಆದೇಶ ಹೊರಡಿಸುವ ಅವಶ್ಯಕತೆ ಬಂದಲ್ಲಿ ಅದನ್ನು ಕೂಡ ಮಾಡಿಸಲಾಗುವುದು ಎಂದು ಪೊನ್ನಣ್ಣ ತಿಳಿಸಿದರು. ಇದೇ ಸಂದರ್ಭ ಬಹ್ಮಗಿರಿ ಬೆಟ್ಟದಲ್ಲಿ ಮಹಾಗನಿ ಸಸಿಯನ್ನು ಅರಣ್ಯ ಇಲಾಖೆ ಸಹಭಾಗಿತ್ವದಲ್ಲಿ ನೆಟ್ಟರು. ಉಪವಿಭಾಗಾಧಿಕಾರಿ ಯತೀಶ್ ಉಲ್ಲಾಳ್, ಕಾಂಗ್ರೆಸ್ ಮುಖಂಡರಾದ ಸಂಕೇತ್ ಪೂವಯ್ಯ, ಬಿ.ಎಸ್.ತಮ್ಮಯ್ಯ, ತೆನ್ನಿರ ಮೈನಾ, ಬೇಕಲ್ ರಮಾನಾಥ್, ಸುನಿಲ್ ಪತ್ರಾವೋ, ದೇವಂಗೋಡಿ ಹರ್ಷ, ಬಾಲಚಂದ್ರ ನಾಯರ್, ತಕ್ಕರಾದ ಕೋಡಿ ಮೋಟಯ್ಯ, ಪಾರುಪತ್ತೆಗಾರ ಪೊನ್ನಣ್ಣ, ಬೊಳ್ಕಂಡ ಶರಿ, ಬಾಚಮಂಡ ಲವ, ಪೊನ್ನಣ್ಣ ಸಹೋದರ ನರೇನ್ ಕಾರ್ಯಪ್ಪ, ಕುದುಪಜೆ ಪ್ರಕಾಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.