(ವಿಶೇಷ ವರದಿ:ಹೆಚ್.ಕೆ.ಜಗದೀಶ್)
ಗೋಣಿಕೊಪ್ಪಲು, ಜು. ೯: ಕಾಡಿನ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಬಾರದು ಎಂಬ ದೂರದೃಷ್ಟಿಯಿಂದ ಸರ್ಕಾರವು ವಿಶೇಷವಾಗಿ ಆದಿವಾಸಿ ಬುಡಕಟ್ಟು ಜನಾಂಗವು ಹೆಚ್ಚಾಗಿರುವ ಪ್ರದೇಶದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ಆಶ್ರಮ ಶಾಲೆಗಳನ್ನು ತೆರೆದಿದೆ. ಈ ಶಾಲೆಗಳಲ್ಲಿ ಮಕ್ಕಳಿಗೆ ಪಾಠ ಪ್ರವಚನದೊಂದಿಗೆ ಶಾಲೆಯಲ್ಲಿಯೇ ತಂಗುವ ವ್ಯವಸ್ಥೆ ಕಲ್ಪಿಸುವ ಮೂಲಕ ವಸತಿ ಶಾಲೆಯನ್ನಾಗಿ ಮಾರ್ಪಡಿಸಿದೆ. ಆದರೆ ವಸತಿ ಶಾಲೆಗೆ ಬೇಕಾದ ಸವಲತ್ತುಗಳನ್ನು ನೀಡುವಲ್ಲಿ ಸರ್ಕಾರ ವಿಫಲವಾಗಿರುವುದು ರಾಷ್ಟಿçÃಯ ಉದ್ಯಾನವನವಾದ ನಾಗರಹೊಳೆಯಲ್ಲಿ ನೆಲೆ ನಿಂತಿರುವ ಸರ್ಕಾರಿ ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ಕಂಡುಬAದಿದೆ. ಒಂದೇ ಕೊಠಡಿಯಲ್ಲಿ ೮೪ ವಿದ್ಯಾರ್ಥಿಗಳು ಪಾಠ, ಊಟ ಹಾಗೂ ನಿದ್ದೆಯನ್ನು ಮಾಡುತ್ತಿದ್ದಾರೆ.
೧೯೫೯ರಲ್ಲಿ ಆದಿವಾಸಿ ಬುಡಕಟ್ಟುಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ರಾಷ್ಟಿçÃಯ ಮಟ್ಟದಲ್ಲಿ ಗಮನ ಸೆಳೆದಿರುವ ನಾಗರಹೊಳೆ ರಾಷ್ಟಿçÃಯ ಉದ್ಯಾನವನದಲ್ಲಿ ಆಶ್ರಮ ಶಾಲೆಯೊಂದನ್ನು ತೆರೆಯಲಾಗಿತ್ತು. ೧೯೬೨ರಲ್ಲಿ ಕಟ್ಟಡವನ್ನು ನಿರ್ಮಿಸಿ ಶಾಲಾ ಮಕ್ಕಳಿಗೆ ವಿದ್ಯಾಭ್ಯಾಸ ನೀಡಲು ಇಲಾಖೆಯು ಮುಂದಾಗಿತ್ತು. ಮಕ್ಕಳ ಪೋಷಕರಿಗೆ ತೊಂದರೆ ಆಗದ ರೀತಿಯಲ್ಲಿ ಶಾಲೆಯಲ್ಲಿಯೇ ಪಾಠ, ಊಟ ನೀಡುವ ಮೂಲಕ ಆಶ್ರಮ ಶಾಲೆಯನ್ನು ವಸತಿ ಶಾಲೆಯಾಗಿ ಮಾರ್ಪಡಿಸಿ ಆ ಮೂಲಕ ಶಿಕ್ಷಣ ನೀಡಲಾಗುತ್ತಿತ್ತು.
ಕಾಡಿನ ಮಕ್ಕಳು ಶಿಕ್ಷಣ ವಂಚಿತರಾಗದAತೆ ಸರ್ಕಾರವು ಈ ಯೋಜನೆಯನ್ನು ಜಾರಿಗೊಳಿಸಿದೆ. ಆದಿವಾಸಿಗಳ ಕುಟುಂಬವು ತಮ್ಮ ಮಕ್ಕಳನ್ನು ಆಶ್ರಮ ಶಾಲೆಯಲ್ಲಿ ಬಿಡುವ ಮೂಲಕ ದೈನಂದಿನ ಕೂಲಿ ಕೆಲಸಕ್ಕೆ ತೆರಳುತ್ತವೆ. ವಾರಕೊಮ್ಮೆ, ತಿಂಗಳಿಗೊಮ್ಮೆ ತಮ್ಮ ಮಕ್ಕಳನ್ನು ಶಾಲೆಗೆ ತೆರಳಿ ನೋಡಿ ಬರಲಾಗುತ್ತದೆ. ಸಹಜವಾಗಿ ಲೈನ್ ಮನೆಯಲ್ಲಿ ವಾಸವಿರುವ ಗಿರಿಜನರು ಅದರಲ್ಲೂ ವಿಶೇಷವಾಗಿ ಯರವ ಸಮುದಾಯದ ಮಕ್ಕಳು ಈ ಆಶ್ರಮ ಶಾಲೆಯ ಪ್ರಯೋಜನ ಪಡೆಯುತ್ತಿದ್ದಾರೆ. ನಾಗರ ಹೊಳೆ ಆಶ್ರಮ ಶಾಲೆಯಲ್ಲಿ ಶೇ.೯೫ ಭಾಗ ಲೈನ್ ಮನೆಯಲ್ಲಿ ವಾಸವಿರುವ ಗಿರಿಜನರ ಮಕ್ಕಳು ವಿದ್ಯಾಭ್ಯಾಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
೧ ರಿಂದ ೭ನೇ ತರಗತಿವರೆಗೆ ಈ ಶಾಲೆಯಲ್ಲಿ ವಿದ್ಯಾರ್ಥಿಗಳು ವಿದ್ಯಾರ್ಜನೆಯಲ್ಲಿ ತೊಡಗಿದ್ದಾರೆ. ೪ ಶಿಕ್ಷಕರು ಇಲ್ಲಿಯ ಮಕ್ಕಳಿಗೆ ಪಾಠ ಪ್ರವಚನ ಬೋಧಿಸುತ್ತಿದ್ದಾರೆ. ವಿಸ್ತಾರವಾದ ಒಂದು ಕೊಠಡಿಯಲ್ಲಿ ಹಗಲಿನ ವೇಳೆ ಎಲ್ಲಾ ತರಗತಿಗಳು ನಡೆಯುತ್ತವೆ. ಸಂಜೆ ಆಗುತ್ತಿದ್ದಂತೆಯೇ ಊಟದ ನಂತರ ಪಕ್ಕದಲ್ಲಿರುವ ಕಿಷ್ಕಿಂದೆಯಾಗಿರುವ ಸಣ್ಣ ಕೊಠಡಿಯಲ್ಲಿ ಹೆಣ್ಣು ಮಕ್ಕಳ ನಿದ್ರೆಗೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಉಳಿದಂತೆ ಇರುವ ಇನ್ನೊಂದು ಪಾಠದ ಕೊಠಡಿಯಲ್ಲಿ ಗಂಡು ಮಕ್ಕಳು ನಿದ್ರಿಸುತ್ತಾರೆ. ಮುಂಜಾನೆ ಎದ್ದ ನಂತರ ವಿದ್ಯಾರ್ಥಿಗಳು ತಮ್ಮ ತಮ್ಮ ಹಾಸಿಗೆಗಳನ್ನು ಮಡಚಿಟ್ಟು ಇದೇ ಕೊಠಡಿಯಲ್ಲಿ ಪಾಠ ಪ್ರವಚನಗಳಿಗೆ ಅಣಿಯಾಗಬೇಕಾಗಿದೆ. ದಿನನಿತ್ಯದ ಉಪಹಾರ ಕೂಡ ಇದೇ ಕೊಠಡಿಯಲ್ಲಿ ನಡೆಯುತ್ತಿದೆ.
ಸರ್ಕಾರ ಗಿರಿಜನರ ಕಲ್ಯಾಣಕ್ಕಾಗಿ ಅದರಲ್ಲೂ ವಿಶೇಷವಾಗಿ ಆದಿವಾಸಿ ಬುಡಕಟ್ಟು ಜನಾಂಗದ ಮಕ್ಕಳು ವಿದ್ಯಾಭ್ಯಾಸದಿಂದ ೩ಐದನೇ ಪುಟಕ್ಕೆ
ವಂಚಿತರಾಗಬಾರದೆAದು ಕೋಟ್ಯಂತರ ಅನುದಾನವನ್ನು ಮೀಸಲಿಟ್ಟಿದ್ದರೂ ಇಲ್ಲಿಯ ತನಕ ಈ ಅನುದಾನ ಸದ್ಬಳಕೆ ಆಗದೆ ಇರುವುದಕ್ಕೆ ಇಲ್ಲಿನ ಅವ್ಯವಸ್ಥೆಗಳೇ ಉದಾಹರಣೆಯಾಗಿವೆ. ಒಂದೇ ಕೊಠಡಿಯಲ್ಲಿ ಎಲ್ಲಾ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಬೇಕಾದ ದುಸ್ಥಿತಿ ಉಂಟಾಗಿದೆ. ಸರ್ಕಾರಕ್ಕೆ ಈ ಬಗ್ಗೆ ಇಲ್ಲಿಯ ಶಿಕ್ಷಕರು ಅಧಿಕಾರಿಗಳು ಅನೇಕ ಪತ್ರಗಳನ್ನು ಬರೆದಿದ್ದರೂ ಇಲ್ಲಿಯ ತನಕ ನೂತನ ಕೊಠಡಿ ನಿರ್ಮಾಣಕ್ಕೆ ಕಾಲ ಕೂಡಿ ಬಂದಿಲ್ಲ.
ತರಗತಿಗೊAದು ಕೊಠಡಿ ಇರಬೇಕಾದ ಶಾಲೆಯಲ್ಲಿ ಕೇವಲ ಲಭ್ಯವಿರುವ ಒಂದೇ ಒಂದು ಕೊಠಡಿಯಲ್ಲಿ ೧ ರಿಂದ ೩, ೪ ರಿಂದ ೫ ಹಾಗೂ ೬ ರಿಂದ ೭ ತರಗತಿಯ ಮಕ್ಕಳನ್ನು ವಿಭಾಗಿಸಿ ಪ್ರತಿನಿತ್ಯ ಪಾಠ ಪ್ರವಚನಗಳನ್ನು ಮಾಡಲಾಗುತ್ತಿದೆ. ಈ ವ್ಯವಸ್ಥೆಯು ಕಳೆದ ೬೦ ವರ್ಷಗಳಿಂದ ನಡೆಯುತ್ತಾ ಬಂದಿದೆ.