ಚೆಯ್ಯಂಡಾಣೆ, ಜು. ೯. ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಕೇರಿ ಗ್ರಾಮದಲ್ಲಿ ಬೀಡುಬಿಟ್ಟ ಕಾಡಾನೆಗಳನ್ನು ಕಾಡಿಗ ಟ್ಟುವ ಕಾರ್ಯಾಚರಣೆ ನಡೆಯಿತು.

ಒಟ್ಟು ೬ ಕಾಡಾನೆಗಳ ಹಿಂಡನ್ನು ಕೋಕೇರಿ ತೋಟಗಳಿಂದ ಮರಂ ದೋಡ ಭಾಗದ ಕೆರೆತಟ್ಟು ಭಾಗಕ್ಕೆ ಓಡಿಸಲಾಯಿತು.

ಕಾರ್ಯಾಚರಣೆಯಲ್ಲಿ ಆನೆ ಕ್ಷಿಪ್ರ ಕಾರ್ಯಪಡೆಯ ಡಿಆರ್‌ಎಫ್‌ಓ ಶ್ರೀಶೈಲಾ, ಪ್ರಶಾಂತ್, ವೀರಾಜಪೇಟೆ ವಲಯ ಅರಣ್ಯ ಆರ್‌ಎಫ್‌ಓ ಕಳ್ಳೀರ ದೇವಯ್ಯ ನೇತೃತ್ವದಲ್ಲಿ ಫಾರೆಸ್ಟರ್ ಅನಿಲ್, ಕ್ಯಾಂಪ್ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.