ಒಂದು ಕಾಲದಲ್ಲಿ ಮುಂಗಾರಿನ ಸಮಯದಲ್ಲಿ ನದಿಗಳ ಬದುಗಳಲ್ಲಿ ಮೀನುಗಳು ಮೊಟ್ಟೆ ಇರಿಸಿರುವು ದನ್ನು ಖುದ್ದಾಗಿ ಹೋಗಿ ಪರಿವೀಕ್ಷಿಸಿ ನಂತರ ಸಾಂಪ್ರದಾಯಿಕ ವಿಧಾನ ಗಳಿಂದ ಲಭ್ಯವಿರುವ ಸಾಮಗ್ರಿಗಳ ಷ್ಟನ್ನೇ ಬಳಸಿ ಮೀನು ಮೊಟ್ಟೆಗಳನ್ನು ಸಂಗ್ರಹಿಸಬೇಕಾದ ಪರಿಸ್ಥಿತಿಯಿತ್ತು. ಲಭ್ಯವಾಗುವ ಮೊಟ್ಟೆಗಳ ಬಗ್ಗೆ ಯಾಗಲಿ ಅವು ಬದುಕುಳಿಯುವ ಸಾಮರ್ಥ್ಯದ ಬಗ್ಗೆಯಾಗಲಿ ಯಾವುದೇ ಅಂದಾಜು ಇರುತ್ತಿರ ಲಿಲ್ಲ. ಇದು ಸ್ಥಳೀಯ ಬೇಡಿಕೆಯನ್ನು ಯಾವ ಹಂತದಲ್ಲೂ ಪೂರೈಸಲು ಸಾಕಾಗುತ್ತಿರಲಿಲ್ಲ. ಇಂತಹ ಸಮಯ ದಲ್ಲಿ ಕಟಕ್ನ ಕ್ವಿಲಾ ಫಾರಂನಲ್ಲಿ ಮೀನುಕೃಷಿಯ ಬಗ್ಗೆ ಹೆಚ್ಚಿನ ಆಸ್ಥೆ ವಹಿಸಿದ್ದ ಹಿರಾಲಾಲ್ ಛೌದರಿ ಮತ್ತು ಆಲಿ ಕುನ್ನಿ ಎಂಬ ಇಬ್ಬರು ಮತ್ಸö್ಯವಿಜ್ಞಾನಿಗಳ ಪ್ರಯತ್ನವೇ ಕೃತಕ ಮೀನುಮರಿ ಉತ್ಪಾದನೆಗೆ ನಾಂದಿ ಹಾಡಿತು. ಇದು ನಡೆದದ್ದು ೧೯೫೭ನೇ ಇಸವಿ ಜುಲೈ ೧೦ರಂದು. ಹಾಗಾಗಿ ಪ್ರತಿ ವರ್ಷದ ಜುಲೈ ೧೦ನ್ನು ಈ ಇಬ್ಬರು ವಿಜ್ಞಾನಿಗಳ ನೆನಪಿನಲ್ಲಿ ಹಾಗೂ ಮೀನು ಕೃಷಿಕರ ಗೌರ ವಾರ್ಥವಾಗಿ “ಮೀನು ಕೃಷಿಕರ ದಿನ”ವನ್ನಾಗಿ ಆಚರಿಸಲಾಗಿದೆ.
ಯಾವುದೇ ವಿಷಯದ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸುವವರು ಅದರಲ್ಲಿ ಹೊಸ ಹೊಸ ಪ್ರಯೋಗ ಗಳನ್ನು ನಡೆಸುತ್ತಲೇ ಇರುತ್ತಾರೆ. ಹಾಗೆಯೇ ಮೀನು ಕೃಷಿಯಲ್ಲಿಯೂ ಕೂಡ. ಮೀನಿನ ಮೊಟ್ಟೆ ಉತ್ಪಾದನೆ, ಪಾಲನೆ, ಹೆಚ್ಚಿನ ಮೀನು ಇಳುವರಿ ಪಡೆಯುವತ್ತ ಒಂದಲ್ಲ ಒಂದು ಪ್ರಯೋಗಗಳು ರೈತರ ಕೃಷಿ ಹೊಂಡ ದಲಿ,್ಲ ಅವರ ಜಲಕೃಷಿ ಫಾರಂಗಳಲ್ಲಿ ನಡೆಯುತ್ತಲೇ ಇರುತ್ತದೆ. ಅಂತಹ ಒಂದು ದೂರದೃಷ್ಟಿಯ ಪ್ರಯೋಗವೇ “ಇಂಡ್ಯೂಸ್ಡ್ ಬ್ರೀಡಿಂಗ್”. ನೈಸರ್ಗಿಕವಾಗಿ ಮಾತ್ರ ಸಾಧ್ಯವಿದ್ದ ಮತ್ತು ಅತೀ ಕಡಿಮೆ ಇದ್ದ ದೊಡ್ಡ ಗೆಂಡೆ ಜಾತಿಯ ಮೀನುಗಳ ಸಂತಾ ನೋತ್ಪತ್ತಿಯನ್ನು ಮತ್ತು ಮೀನುಗಳ ಸಂತಾನಾಭಿವೃದ್ಧಿ ಸಾಮರ್ಥ್ಯವನ್ನು ಹಾರ್ಮೋನ್ ಬಳಕೆ ಮಾಡುವುದರ ಮೂಲಕ ಅಂದರೆ ಇಂಡ್ಯೂಸಡ್ ಬ್ರೀಡಿಂಗ್ ಮುಖೇನ ಹೆಚ್ಚಿಸುವ ವಿಧಾ ನಕ್ಕೆ ನಾಂದಿ ಹಾಡಿದ್ದು ಹಿರಾಲಾಲ್ ಛೌದರಿ ಮತ್ತು ಆಲಿ ಕುನ್ನಿ. ಇವರ ಪ್ರಯೋಗಗಳ ಮೇಲೆ ನಡೆದ ಇನ್ನೂ ಹೆಚ್ಚಿನ ಅಧ್ಯಯನಗಳು ಇನ್ನಷ್ಟು ಮೇಲ್ದ ರ್ಜೆಯ ಹಾರ್ಮೋ ನುಗಳನ್ನು ಮತ್ಸö್ಯ ಮಾರುಕಟ್ಟೆಗೆ ಪರಿಚಯಿಸಿವೆ.
ಸಮುದ್ರ ಮೀನುಗಾರಿಕೆಯನ್ನು ಹೊರತುಪಡಿಸಿ ಹೆಚ್ಚಿನ ಉತ್ಪಾದನಾ ಸಾಮರ್ಥ್ಯವನ್ನು ಸಾಧಿಸಬಹುದಾದ ಒಳನಾಡು ಮೀನುಗಾರಿಕೆಯನ್ನು ತೆಗೆದುಕೊಳ್ಳುವುದಾದರೆ ಮೀನು ಮರಿಗಳ ಬೇಡಿಕೆಯನ್ನು ಪೂರೈಸಲು ಹೆಣಗಾಡುತ್ತಿದ್ದ ಸರ್ಕಾರಿ ಮತ್ತು ಖಾಸಗಿ ಫಾರಂಗಳು ಈ “ಇಂಡ್ಯೂಸ್ಡ್ ಬ್ರೀಡಿಂಗ್” ವಿಧಾನ ದಿಂದ ತಕ್ಕ ಮಟ್ಟಿಗೆ ನಿರಾಳವಾಗಿದೆ. ಇದಲ್ಲದೆ ವೈಜ್ಞಾನಿಕವಾಗಿ ಮೀನು ಉತ್ಪಾದನೆಯನ್ನು ಹೆಚ್ಚಿಸು ವುದರೊಂದಿಗೆ ಸಮತೋಲನವನ್ನು ಕಾಯ್ದುಕೊಳ್ಳುವುದರಲ್ಲೂ ಮೀನು ಗಾರಿಕೆಯ ಕ್ಷೇತ್ರ ಹೆಜ್ಜೆ ಇಟ್ಟಿದೆ. ಮೀನು ಮರಿಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ಮೀನುಮರಿ ಉತ್ಪಾದನೆ ಮತ್ತು ಪಾಲನೆಯ ಕೆಲಸವೇ ಮುಖ್ಯ ಉದ್ದಿಮೆಯಾಗಿ ಬೆಳೆದು ಬರುತ್ತಿದೆ. ಸಾಧ್ಯವಾದಷ್ಟು ಜಲಸಂಪನ್ಮೂಲಗಳು ಮೀನುಗಾರಿಕೆಗೆ ಒಳಪಡುತ್ತಿದೆ. ಆದಾಯ ಸೃಷ್ಟಿಯೊಂದಿಗೆ ಉದ್ಯೋಗ ಅವಕಾಶಗಳನ್ನು ಇದು ಒದಗಿಸಿಕೊಟ್ಟಿದೆ. ಹಾಗಾಗಿ ಮೀನು ಗಾರಿಕೆಯನ್ನೇ ನೆಚ್ಚಿಕೊಂಡು ಹಲ ವಾರು ಕುಟುಂಬಗಳು ಇಂದು ಬದುಕು ಕಟ್ಟಿಕೊಳ್ಳುತ್ತಿವೆ.
೧೯೫೦-೫೧ನೇ ಘಟ್ಟಕ್ಕೆ ಹೋಲಿ ಸಿದರೆ ಇಂದಿನ ಮಟ್ಟಿಗೆ ಮೀನು ಮರಿ ಉತ್ಪಾದನಾ ಕ್ಷೇತ್ರದಲ್ಲಿ ಕ್ರಾಂತಿಯೇ ಆಗಿದೆ ಎನ್ನಬಹುದು. ಹಾಗೆಯೇ ಮೀನಿನ ಉತ್ಪಾದನೆಯ ಲ್ಲಿಯೂ ಕ್ರಾಂತಿ ನಡೆದಿದೆ. ಭಾರತ ಎರಡನೇ ಅತಿದೊಡ್ಡ ಮೀನು ಉತ್ಪಾದಕ ದೇಶ. ಜವಾಬ್ದಾರಿಯುತ ಹಾಗೂ ಸುಸ್ಥಿರ ಮೀನು ಉತ್ಪಾದನೆ ಗಾಗಿ ಪ್ರಧಾನ ಮಂತ್ರಿ ಮತ್ಸö್ಯ ಸಂಪದ ಯೋಜನೆ ಮತ್ಸö್ಯ ಕೃಷಿಗೆ ಹೆಚ್ಚಿನ ಉತ್ತೇಜನ ದೊರಕಿಸಿಕೊಟ್ಟಿದೆ. ಮೀನುಗಾರರು, ಮೀನು ಕೃಷಿಕರು ಸಾಮಾಜಿಕ, ಆರ್ಥಿಕ, ಸರ್ವತೋ ಮುಖ ಅಭಿವೃದ್ಧಿಯನ್ನು ಸಾಧಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಈ ಯೋಜನೆ ರೂಪಿಸಿಕೊಂಡಿದೆ.
ನಮ್ಮ ದೇಶದ ಮೀನುಗಾರರು ಸಾಮಾಜಿಕ ಆರ್ಥಿಕ ಅಭಿವೃದ್ದಿಯ ರಾಷ್ಟಿçÃಯ ಸೂಚ್ಯಂಕಗಳಲ್ಲಿ ಹಿಂದೆ ಬೀಳುತ್ತಿರುವುದರಿಂದ ಬಡತನ ಮತ್ತು ಹಿಂದುಳಿದಿರುವಿಕೆಯ ಸುಧಾರಣೆಗೆ ಅಗತ್ಯವಾದ ಉತ್ತೇಜನವನ್ನು ನೀಡುವ ರೀತಿಯಲ್ಲಿ ಪ್ರಧಾನ ಮಂತ್ರಿ ಮತ್ಸö್ಯ ಸಂಪದ ಯೋಜನೆಯು ರೂಪಿತವಾಗಿದೆ. ನೀರಿನ ಅಭಾವವಿ ರುವ ಪ್ರದೇಶಗಳಲ್ಲೂ ಮಿತ ನೀರನ್ನು ಬಳಸಿಕೊಂಡು ಕೃತಕ ತೊಟ್ಟಿಗಳನ್ನು ನಿರ್ಮಿಸಿಕೊಂಡು ತಂತ್ರಜ್ಞಾನ ಅಳವಡಿಕೆಯ ಮುಖೇನ ಅಧಿಕ ಇಳುವರಿಯನ್ನು ಪಡೆಯಬಹುದಾದ ಬಯೋಫ್ಲಾಕ್, ಆರ್ ಎ ಎಸ್ ತಂತ್ರ ಜ್ಞಾನಗಳು ಬರಪೀಡಿತ ಪ್ರದೇಶ ಗಳಲ್ಲೂ ಮತ್ಸö್ಯ ಉತ್ಪಾದನೆಗೆ ನಾಂದಿ ಹಾಡಬಲ್ಲವಾಗಿವೆ. ಕೃಷಿ ಹೊಂಡಗಳಲ್ಲಿ ಸಾಮಾನ್ಯವಾಗಿ ಪಾಲನೆಗೊಳ್ಳುತ್ತಿದ್ದ ಗೆಂಡೆ ಜಾತಿಯ ಮೀನುಗಳಷ್ಟೇ ಅಲ್ಲದೇ ಉತ್ತಮ ಮಾರುಕಟ್ಟೆಯನ್ನು ಹೊಂದಿರುವ ಪಂಗೇಶಿಯಸ್, ತಿಲಾಪಿಯ, ಶಿಂಗಿ, ಕೋಯಿ ಮುಂತಾದ ಮೀನಿನ ತಳಿಗಳೂ ರೈತರ ತೊಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ.
ಪ್ರಸ್ತುತ ಚಾಲ್ತಿಯಲ್ಲಿರುವ ಪ್ರಧಾನ ಮಂತ್ರಿ ಮತ್ಸö್ಯ ಸಂಪದ ಯೋಜನೆ ಖಾಸಗಿ ಬಂಡವಾಳ ಹೂಡಿಕೆಯನ್ನು ಈ ಕ್ಷೇತ್ರದಲ್ಲಿ ಹೆಚ್ಚಿಸಲು ಸಹಾಯ ಮಾಡಿದೆ. ವೈಜ್ಞಾನಿಕ ಪದ್ಧತಿಗಳನ್ನೂ ಇದು ಪರಿಚಯಿಸಿದೆ. ಬರ ಪೀಡಿತ ಪ್ರದೇಶಗಳಲ್ಲಿ ಕಡಿಮೆ ನೀರಿನ ಬಳಕೆಯಿಂದ ಮೀನು ಉತ್ಪಾದನೆ ಯನ್ನು ಸಾಕಾರಗೊಳಿಸುತ್ತಿದೆ. ಆದರೆ, ಉತ್ಪಾದನೆಯನ್ನು ಸಾಧಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳು, ಕಾರ್ಯಕ್ರಮಗಳು ಯಶ ಕಾಣುತ್ತಿ ದ್ದರೂ; ಉತ್ಪಾದನೆಯು ಉತ್ತಮ ಸ್ಥಿತಿಯಲ್ಲಿದ್ದರೂ ಪ್ರತಿ ಮೀನು ಗಾರನ ಸರಾಸರಿ ಮೀನು ಉತ್ಪಾದನೆ ಅಥವಾ ಮೀನು ಹಿಡುವಳಿ ಮಟ್ಟ ಇತರ ದೇಶಗಳಿಗೆ ಹೋಲಿಸಿದರೆ ಕಡಿಮೆಯೇ. ಉತ್ತಮ ರಸ್ತೆ ಸಂಪರ್ಕ, ಸುವ್ಯವಸ್ಥೆಯ ಚಿಲ್ಲರೆ ಮಾರುಕಟ್ಟೆ, ಉತ್ತಮ ಶೀಥಲಿಕರಣ ಘಟಕಗಳು, ಸೀಮಿತವಾದ ಕೆಲವೇ ತಳಿಗಳ ಸಂಖ್ಯೆಯನ್ನು ವಿಸ್ತರಿಸುವುದು.
ಮೀನು ಹಿಡುವಳಿ ಮತ್ತು ಉತ್ಪಾದನಾ ಅಂಕಿ ಅಂಶಗಳ ನಿರ್ವಹಣೆ ಮೀನುಗಾರಿಕೆ ಕ್ಷೇತ್ರದ ಇಂದಿನ ಅವಶ್ಯಕತೆಯಾಗಿದೆ. ದೇಶದ ಆದಾಯ ವೃದ್ಧಿಯಲ್ಲಿ ತಮ್ಮದೇ ಕಾಣಿಕೆ ನೀಡುತ್ತಿರುವ ಮೀನು ಕೃಷಿಕರನ್ನು ನೆನೆಸಿಕೊಳ್ಳು ವುದೂ ಕೂಡ ಅಷ್ಟೇ ಅಗತ್ಯ. ಏನೇ ಇದ್ದರೂ ಮೀನು ಒಂದು ಉತ್ತಮ ಆಹಾರವಾಗಿ ಮತ್ತು ಆದಾಯದ ಮೂಲವಾಗಿ ಆಹಾರ ಸುರಕ್ಷತೆ ಯನ್ನು ಸಾಧಿಸುವಲ್ಲಿ ಮತ್ತು ಅಪೌಷ್ಟಿಕತೆಯನ್ನು ಹೋಗಲಾ ಡಿಸುವಲ್ಲಿ ತನ್ನದೇ ಪಾತ್ರ ವನ್ನು ನಿರ್ವಹಿಸುತ್ತಿರುವು ದಂತು ನಿಜ.
ಮಿಲನ ಕೆ. ಭರತ್,
ಮೀನುಗಾರಿಕೆ ಸಹಾಯಕ ನಿರ್ದೇಶಕರು, ದೇವನಹಳ್ಳಿ
ಮೊ. ೯೪೮೩೫೩೪೧೩೧