ಸAಘ-ಸAಸ್ಥೆಗಳನ್ನು ಸ್ಥಾಪನೆ ಮಾಡುವದು ಸುಲಭದ ಕೆಲಸ, ಆದರೆ ಮುಂದುವರಿಸಿಕೊAಡು ಹೋಗುವದಿದೆಯಲ್ಲ ಅದು ‘ಮುಳ್ಳಿನ ಹಾದಿಯಲ್ಲಿ ಪಾದ ಸವೆಸಿದಂತೆ’ ಇಂತಹ ಸನ್ನಿವೇಶದಲ್ಲೂ ಒಂದು ಸಂಘವನ್ನು ಸುದೀರ್ಘ ೬೮ ವರ್ಷಗಳಿಂದ ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿರುವದು ಒಂದು ಸಾಧನೆಯೇ ಸರಿ; ಅದರಲ್ಲೂ ಮಹಿಳೆಯರೇ ಸೇರಿಕೊಂಡು ಒಂದು ಮಹಿಳೆಯರ ಶ್ರೇಯೋಭಿವೃದ್ಧಿಯನ್ನೇ ಮುಂದಿಟ್ಟು ಕೊಂಡು ಬರುತ್ತಿರುವದು ಸಾಧನೆಯ ಗರಿಮೆಗೆ ಮತ್ತೊಂದು ಮೈಲಿಗಲ್ಲು ಎಂದೇ ಹೇಳಬಹುದು.

ಇದು ನಮ್ಮ ಹೆಮ್ಮೆಯ ಸಹಕಾರ ಸಂಘÀದ ಒಂದು ಯಶೋಗಾಥೆ. ಮಡಿಕೇರಿಯ ದಾಸವಾಳದಲ್ಲಿರುವ ಮಹದೇವಪೇಟೆ ಮಹಿಳಾ ಸಹಕಾರ ಸಂಘವು ೧೯೫೫ರಲ್ಲಿ ಸ್ಥಾಪನೆಯಾಯಿತು. ಆಗ ಕೊಡಗು ರಾಜ್ಯದ ಸಚಿವರಾಗಿದ್ದ ಮಲ್ಲಪ್ಪನವರು ಮತ್ತು ಮಡಿಕೇರಿ ಪುರಸಭೆಯ ಅಧ್ಯಕ್ಷರಾಗಿದ್ದ ಮೊಹಿಸಿನ್ ಅವರ ಸತತ ಪ್ರಯತ್ನ ಹಾಗೂ ಪಾರ್ವತಮ್ಮ ಬಸಪ್ಪನವರ ಆರ್ಥಿಕ ಸಹಕಾರದಿಂದ ಈ ಸಂಘದ ಸ್ಥಾಪನೆಯಾಯಿತು. ಪಾರ್ವತಮ್ಮ ಬಸಪ್ಪನವರ ೧೦,೦೦೦ ರೂ. ದೇಣಿಗೆ ಮತ್ತು ಸರಕಾರದಿಂದ ಲಭಿಸಿದ ೧೦,೦೦೦ ರೂ. ಸಹಾಯಧನದಿಂದ ಈ ಸಂಘದ ಕಟ್ಟಡವನ್ನು ಕಟ್ಟಲಾಯಿತು. ಇದನ್ನು ಸ್ವಾತಂತ್ರö್ಯ ಹೋರಾಟಗಾರ್ತಿ ಮತ್ತು ಕೇಂದ್ರ ಸಮಾಜ ಕಲ್ಯಾಣ ಮಂಡಳಿಯ ಸ್ಥಾಪಕಾಧ್ಯಕ್ಷೆ ದುರ್ಗಾಬಾಯಿದೇಶ್‌ಮುಖ್ ಅವರು ಉದ್ಘಾಟಿಸಿದರು. ಈ ಕಟ್ಟಡಕ್ಕೆ ಪಾರ್ವತಮ್ಮನವರ ಆಸೆಯಂತೆ ಅವರ ಪತಿ ಬಸಪ್ಪನವರ ಹೆಸರನ್ನು ಇಡಲಾಯಿತು. ಇಲ್ಲಿ ಸಹಕಾರ ಸಂಘದ ವತಿಯಿಂದ ಶಿಶುವಿಹಾರ ಮತ್ತು ಹೊಲಿಗೆ ತರಬೇತಿ ತರಗತಿಗಳನ್ನು ನಡೆಸುವುದೆಂದು ತೀರ್ಮಾನಿಸಲಾಯಿತು.

ಮಹಿಳೆಯರಿಗೆ ಆರ್ಥಿಕ ಭದ್ರತೆ : ಅಂದು ಆರಂಭವಾದ ಶಿಶು ವಿಹಾರ ಮತ್ತು ಹೊಲಿಗೆ ತರಬೇತಿ ತರಗತಿಗಳು ಅಂದಿನಿAದ ಇಂದಿನವರೆಗೂ ನಿರಂತರವಾಗಿ ನಡೆಯುತ್ತಾ ಬಂದಿವೆ. ಅಂತೆಯೇ ಆ ಸಂಘದ ಕಟ್ಟಡ ಇಂದು ಬಸಪ್ಪ ಶಿಶುವಿಹಾರವೆಂದು ಪ್ರಸಿದ್ಧವಾಗಿದೆ. ಇದು ಮಡಿಕೇರಿ ನಗರದ ಹೃದಯಭಾಗ ಚೌಕಿಗೆ ಹತ್ತಿರದಲ್ಲಿದೆ. ಹಳೆ ನೀರು ಹರಿದು ಹೋಗಿ, ಹೊಸ ನೀರು ಬರುವಂತೆ ಶಿಶು ವಿಹಾರದಲ್ಲಿ ಹಳೆಯ ಮಕ್ಕಳು ಹೋಗಿ ಹೊಸಬರು ಸೇರ್ಪಡೆಯಾಗುತ್ತಿದ್ದಾರೆ. ಹಾಗೆಯೇ ಹೊಲಿಗೆ ತರಗತಿಗಳಲ್ಲಿಯೂ ಇಲ್ಲಿ ಹೊಲಿಗೆ ಕಲಿತವರು ಇನ್ನೆಲ್ಲೋ ಆರ್ಥಿಕ ಭದ್ರತೆಯನ್ನು ಕಂಡುಕೊAಡಿದ್ದಾರೆ. ಕೆಲಸ ಮಾಡುತ್ತಾ ಹೀಗೆ ಮಕ್ಕಳು ಬದಲಾಗಿರಬಹುದು, ಟೀಚರ್ ಬದಲಾಗಿರ ಬಹುದು ಆದರೆ ಈ ಶಿಶು ವಿಹಾರ ಮತ್ತು ಹೊಲಿಗೆ ತರಗತಿಗಳು ನಿರಂತರ ವಾಗಿ ನಡೆಯುತ್ತಾ ಬಂದಿರುವುದು ಸಂಘಕ್ಕೆ ಒಂದು ಹೆಮ್ಮೆಯ ವಿಷಯ.

ಪ್ರತಿಭೆಗಳಿಗೆ ವೇದಿಕೆ : ಇನ್ನು ಸಹಕಾರ ಸಂಘದ ಕಾರ್ಯ ಚಟುವಟಿಕೆಯ ವಿಚಾರಕ್ಕೆ ಬರೋಣ. ಪ್ರತಿಭೆಗಳನ್ನು ಗುರುತಿಸಿ ಅದಕ್ಕೆ ಮನ್ನಣೆಯನ್ನು ದೊರಕಿಸುವುದೇ ಈ ಸಂಘದ ಉದ್ದೇಶ. ಹೀಗೆ ಆರಂಭವಾದ ಸಂಘ ಚೆನ್ನಾಗಿ ನಡೆಯುತ್ತಾ ಬಂದಿದೆ. ಪ್ರಸ್ತುತ ಇಲ್ಲಿ ೧೫೦ ಮಂದಿ ಸದಸ್ಯೆಯರಿದ್ದಾರೆ. ಇರುವ ಸದಸ್ಯೆಯರನ್ನು ೧೦ ತಂಡಗಳಾಗಿ ಮಾಡಿ ಪ್ರತಿ ತಿಂಗಳು ಒಂದೊAದು ತಂಡದಿAದ ಸಮ್ಮಿಲನ ಎಂಬ ಕಾರ್ಯಕ್ರಮ ನಡೆಸಲಾಗುತ್ತಿದೆ. ಇದು ತಿಂಗಳಲ್ಲಿ ಮಂಗಳವಾರ ನಡೆಯುತ್ತದೆ. ತಂಡದ ಸದಸ್ಯೆಯರು ಆ ದಿನದ ಕಾರ್ಯಕ್ರಮಗಳ ಜವಬ್ದಾರಿಯನ್ನೂ ಹೊತ್ತಿರುತ್ತಾರೆ. ಸಮ್ಮಿಲನದಲ್ಲಿ ತಂಡದ ಪ್ರತಿ ಸದಸ್ಯೆಯರೂ ಸಂಭ್ರಮದಿAದ ಭಾಗವಹಿಸಿ ಏನಾದರೂ ಉಪಯುಕ್ತವಾದ ವಿಷಯಗಳ ಬಗ್ಗೆ ಮಾತು, ಹಾಡು ಇತ್ಯಾದಿ ಕಾರ್ಯಕ್ರಮ ಗಳನ್ನು ನಡೆಸಿಕೊಡುತ್ತಾರೆ. ಕೆಲವು ತಂಡದವರು ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಅವರ ಭಾಷಣವನ್ನು ಏರ್ಪಡಿಸುತ್ತಾರೆ. ಆಟಗಳನ್ನು ಆಡಿಸಿ, ಬಹುಮಾನ ಕೊಡುತ್ತಾರೆ. ಲಘು ಉಪಹಾರ ಇರುತ್ತದೆ. ಸಂಘದ ಸದಸ್ಯೆಯರೆಲ್ಲರೂ ಭಾಗವಹಿಸಿ ಅನೇಕ ವಿಚಾರಗಳನ್ನು ತಿಳಿದು ಕೊಂಡು ನಕ್ಕು-ನಲಿದು ಸಂತೋಷ ದಿಂದ ಕಳೆಯುತ್ತಾರೆ.

ವಿವಿಧ ಚಟುವಟಿಕೆಗಳು: ಇವಲ್ಲದೆ ಸಂಘದಲ್ಲಿ ರಾಷ್ಟಿçÃಯ ಹಬ್ಬಗಳಾದ ಸ್ವಾತಂತ್ರö್ಯ ದಿನಾಚರಣೆ, ಕನ್ನಡ ರಾಜ್ಯೊತ್ಸವ ಗಾಂಧಿ ಜಯಂತಿ ಇತ್ಯಾದಿ ಕಾರ್ಯಕ್ರಮಗಳನ್ನು ಸಂಭ್ರಮದಿAದ ಆಚರಿಸಲಾಗುತ್ತದೆ. ಕನ್ನಡ ರಾಜ್ಯೋತ್ಸವದ ದಿನ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳಿಗೆ ಸನ್ಮಾನ ಮಾಡಲಾಗುತ್ತದೆ.

ಜನವರಿ ಮೊದಲ ವಾರದಲ್ಲಿ ಹೊಸ ವರ್ಷಾಚರಣೆಯನ್ನು ಸಂಭ್ರಮ ದಿಂದ ಆಚರಿಸಲಾಗುತ್ತದೆ. ಇಡೀ ದಿನ ವಿವಿಧ ವಿನೋದಾವಳಿಗಳು ಸಂಭ್ರಮಾ ಚರಣೆಯೂ ನಡೆಯುತ್ತದೆ. ಡಿಸೆಂಬರ್‌ನಲ್ಲಿ ಕ್ರೀಡೋತ್ಸವವನ್ನು ಆಚರಿಸ ಲಾಗುತ್ತದೆ. ನಮ್ಮ ಸಾಂಪ್ರದಾಯಿಕ ಕ್ರೀಡೆಗಳಾದ ಚೆನ್ನಮಣೆ, ಚೌಕಾಬಾರ, ಜೊತೆಗೆ ಕ್ಯಾರಂ ಇತ್ಯಾದಿ ಆಟಗಳ ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ನವರಾತ್ರಿ ಯಲ್ಲಿ ಶಾರದಾಪೂಜೆ, ಆಯುಧಪೂಜೆ ಯನ್ನು ಅದ್ಧೂರಿಯಿಂದ ನಡೆಸಲಾಗು ತ್ತದೆ. ಫೆಬ್ರವರಿಯಲ್ಲಿ ಶಿಶುವಿಹಾರದ ಮಕ್ಕಳ ಸ್ಕೂಲ್‌ಡೇ ನಡೆಯುತ್ತದೆ.

ಮಹಿಳಾ ದಿನಾಚರಣೆ: ಇನ್ನು ಸಂಘದಲ್ಲಿ ನಡೆಯುವ ದೊಡ್ಡ ಸಂಭ್ರಮಾಚರಣೆಯೇ ಮಹಿಳಾ ದಿನಾಚರಣೆ. ಅಂತರರಾಷ್ಟಿçÃಯ ಮಹಿಳಾ ದಿನವಾದ ಮಾರ್ಚ್ ೮ ರಂದು ನಡೆಯುವ ಈ ಸಂಭ್ರಮಾಚರಣೆ ಯಲ್ಲಿ ಬೆಳಿಗ್ಗೆಯಿಂದಲೇ ಅನೇಕ ಕಾರ್ಯಕ್ರಮಗಳು ನಡೆಯುತ್ತವೆ. ಮಹಿಳೆಯರಿಗಾಗಿ ಅಡುಗೆ ಸ್ಪರ್ಧೆ, ಹಾಡಿನ ಸ್ಪರ್ಧೆ, ಹೂ ಜೋಡಣೆ ಸ್ಪರ್ಧೆ ಇತ್ಯಾದಿಗಳು ನಡೆಯುತ್ತವೆ. ನಂತರ ಮಹಿಳೆಯರಿಂದಲೇ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಎಲ್ಲರೂ ಒಟ್ಟು ಸೇರಿ ನಕ್ಕುನಲಿದು ಆನಂದಿಸುತ್ತಾರೆ. ಈ ಸಹಕಾರ ಸಂಘವು (ಆಡಳಿತ ವರ್ಗ) ಜಿಲ್ಲಾ ಸಹಕಾರ ಯೂನಿಯನ್‌ನ ಅಡಿಯಲ್ಲಿ ಬರುತ್ತದೆ. ಇದಕ್ಕೆ ಪ್ರತ್ಯೇಕವಾದ ಬೈಲಾ ಇದೆ. ಅದರ ಪ್ರಕಾರ ಸಂಘವನ್ನು ನಡೆಸಲಾಗುತ್ತದೆ. ಆಡಳಿತ ಮಂಡಳಿಯಲ್ಲಿ ೧೧ ಜನ ಸದಸ್ಯೆಯರಿದ್ದಾರೆ. ಅವರಲ್ಲಿ ಒಬ್ಬರನ್ನು ಅಧ್ಯಕ್ಷರನ್ನಾಗಿ ಚುನಾಯಿಸಲಾಗುತ್ತದೆ. ಹಾಗೆಯೆ ಒಬ್ಬರು ಉಪಾಧ್ಯಕ್ಷರೂ ಇದ್ದಾರೆ. ೩ ಜನ ಸಿಬ್ಬಂದಿಗಳಿದ್ದಾರೆ. ಒಬ್ಬರು ಕಾರ್ಯದರ್ಶಿ, ಒಬ್ಬರು ಶಿಶು ವಿಹಾರದ ಶಿಕ್ಷಕಿ ಹಾಗೂ ಇನ್ನೊಬ್ಬರು ಸಹಾಯಕಿ. ಸಂಘದ ಹಾಲ್‌ಅನ್ನು ಶಿಶುವಿಹಾರಕ್ಕೆ ರಜೆ ಇದ್ದ ದಿನಗಳಲ್ಲಿ ಬಾಡಿಗೆಗೆ ನೀಡಲಾಗುತ್ತದೆ. ಸಂಘದ ಆವರಣದಲ್ಲಿರುವ ೩ ಮನೆಗಳನ್ನು ಬಾಡಿಗೆಗೆ ನೀಡಲಾಗಿದೆ. ಬಾಡಿಗೆ ಬಂದ ಹಣವನ್ನು ಸಂಘದ ಅಭಿವೃದ್ಧಿಗೆ ಬಳಸಲಾಗುತ್ತದೆ.

ಗೌರವ ಸನ್ಮಾನ: ಸಂಘದ ಕಾರ್ಯ ಚಟುವಟಿಕೆಗಳನ್ನು ಮೆಚ್ಚಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ೨೦೨೦ರ ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಂಘವನ್ನು ಅತ್ಯುತ್ತಮ ಸಹಕಾರ ಸಂಘವೆAದು ಗೌರವಿಸಿ ಸನ್ಮಾನಿಸಲಾಗಿದೆ. ಡಿಸಿಸಿ ಬ್ಯಾಂಕ್‌ನ ಶತಮಾನೋತ್ಸವ ಸಮಾರಂಭದಲ್ಲಿ ಸಂಘವು ಅತ್ಯುತ್ತಮ ಮಹಿಳಾ ಸಹಕಾರ ಸಂಘ ಎಂಬ ಗೌರವಕ್ಕೆ ಪಾತ್ರವಾಗಿದೆ. ಪ್ರತಿವರ್ಷವೂ ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಿAದ ಉತ್ತಮ ಸಹಕಾರ ಸಂಘಗಳಿಗೆ ಬಹುಮಾನವನ್ನು ನೀಡಲಾಗುತ್ತದೆ. ಈ ಬಹುಮಾನ ಹಲವು ಬಾರಿ ಈ ಸಂಘಕ್ಕೆ ಲಭಿಸಿದೆ.

ಅನುದಾನದ ಅಗತ್ಯ: ಸಮಾಜಮುಖಿ ಸಂಘಟನೆಯಾಗಿ ಮಹಿಳೆಯ ಧ್ಯೇಯೊದ್ಧೇಶಗಳನ್ನು ಮುಂದಿಟ್ಟುಕೊAಡು ಕಳೆದ ೬೮ ವರ್ಷಗಳಿಂದ ಸೇವೆಯಲ್ಲಿ ತೊಡಗಿಸಿಕೊಂಡಿರುವ ಈ ಸಹಕಾರ ಸಂಘಕ್ಕೆ ಸರಕಾರದ ಅನುದಾನ ದೊರೆತಲ್ಲಿ ಇನ್ನಷ್ಟು ಪ್ರಗತಿ ಸಾಧಿಸಲು ಸಹಕಾರಿಯಾಗಲಿದೆ. ಸರಕಾರದ ಅಧಿಕಾರಿಗಳು, ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಗಮನಹರಿಸು ವಂತಾಗಲಿ ಎಂಬದೇ ಎಲ್ಲರ ಆಶಯ.

-ಕುಡೆಕಲ್ ಸಂತೋಷ್.