*ಗೋಣಿಕೊಪ್ಪ, ಜು. ೮: ದೇವರುಗಳ ನಾಡಾಗಿರುವ ಕೇರಳ ಜಿಲ್ಲೆಗೆ ಹೊಂದಿಕೊAಡAತೆ ಇರುವ ಕೊಡಗು ಜಿಲ್ಲೆಯೂ ಒಂದು ರೀತಿಯಲ್ಲಿ ದೇವರುಗಳ., ಆರಾಧನಾಲಯಗಳ ಬೀಡು ಎಂದೇ ಹೇಳಬಹುದು. ಇಲ್ಲಿ ಎಲ್ಲ ವರ್ಗದ ಜನತೆ ನೆಲೆಸಿದ್ದು, ಅವರುಗಳಿಗೆ ಸಂಬAಧಿಸಿದ ಆರಾಧನಾಲಯಗಳಿವೆ. ಅಂತೆಯೇ ಹಿಂದೂ ಸಂಪ್ರದಾಯದ ಪ್ರಕಾರ ಆರಾಧಿಸಲ್ಪಡುವ ಅನೇಕ ದೇವಾಲಯಗಳು., ಆರಾಧನಾಲ ಯಗಳು ಇಲ್ಲಿವೆ. ಈ ಪೈಕಿ ನಂಬಿದವರ., ಬೇಡಿದ ಭಕ್ತರಿಗೆ ಇಂಬು ಕೊಡುವ ದೇವರೆಂದೇ ಪ್ರಸಿದ್ಧಿ ಹೊಂದಿರುವ ಶ್ರೀ ವನ ಭದ್ರಕಾಳಿ ದೇವಿಗೆ ತನ್ನದೇ ಆದ ಇತಿಹಾಸವಿದೆ. ಇತಿಹಾಸದ ಹಿನ್ನೆಲೆಯೊಂದಿಗೆ ಇಂದಿಗೂ ದೇವಿಯನ್ನು ನಂಬಿಕೆಯಿAದ ಆರಾಧಿಸಲಾಗುತ್ತಿದೆ. ವೀರಾಜ ಪೇಟೆಯಿಂದ ಗೋಣಿಕೊಪ್ಪಲಿಗೆ ತೆರಳುವ ಮಾರ್ಗದಲ್ಲಿ ಸಿಗುವ ಹಾತೂರಿನಲ್ಲಿ ವನ ಭದ್ರಕಾಳಿ ನೆಲೆ ನಿಂತಿದ್ದಾಳೆ.
ಹಿAದಿನ ಕಾಲದಲ್ಲಿ ಕೊಂಗೇಪAಡ ಕುಟುಂಬದ ಮಹಿಳೆಯೊಬ್ಬರಿಗೆ ದೇವಿಯು ಗದ್ದೆಯಲ್ಲಿ ಚಿನ್ನದ ಬಣ್ಣದ ಕೊಕ್ಕು ಇರುವ ಕೊಕ್ಕರೆ ಮೂಲಕ ಕಾಣಿಸಿ ಕೊಳ್ಳುತ್ತದೆ. ಈ ವಿಷಯವನ್ನು ಮನೆ ಯಲ್ಲಿ ತಿಳಿಸಿದಾಗ ವ್ಯಕ್ತಿಯೊಬ್ಬರು ಕೊಕ್ಕರೆಯನ್ನು ಕುಕ್ಕೆಯಲ್ಲಿ ಮುಚ್ಚುವ ಪ್ರಯತ್ನ ಮಾಡುತ್ತಾನೆ. ಆ ವ್ಯಕ್ತಿಯ ಮೈಮೇಲೆ ದೇವರು ಕಾಣಿಸಿಕೊಂಡು ಗ್ರಾಮದಲ್ಲಿ ಸ್ಥಾನ ನೀಡಲು ಕೇಳಿಕೊಳ್ಳುತ್ತದೆ. ಅದರಂತೆ ಕೊಕ್ಕಂಡ ಕುಟುಂಬವು ಜಾಗ ನೀಡಿ ಸ್ಥಾನ ಕಲ್ಪಿಸಿದೆ. ಹಾಗಾಗಿ ಕೊಕ್ಕಂಡ ಕುಟುಂಬಕ್ಕೆ ಪ್ರಮಖ ತಕ್ಕರ ಸ್ಥಾನ ನೀಡಲಾಗಿದೆ. ಇತಿಹಾಸದಂತೆ ಕೊಕ್ಕಂಡ ಹಾಗೂ ಕೊಂಗೇಪAಡ ಕುಟುಂಬ ನೆಲೆ ನಿಂತ ನಂತರ ದೇವಿ ನೆಲೆ ನಿಂತಿದೆ ಎಂಬ ಹಿನ್ನೆಲೆ ಇದೆ. ಭಂಡಾರ ತಕ್ಕರಾಗಿ ಕೊಕ್ಕಂಡ, ದೇವತಕ್ಕರಾಗಿ ಕೊಂಗೇಪAಡ, ಅಯ್ಯಪ್ಪ ದೇವರ ತಕ್ಕರಾಗಿ ಕೇಳಪಂಡ ಕುಟುಂಬ ಜವಬ್ದಾರಿ ನಿಭಾಯಿಸುತ್ತಿವೆ.
ಭಕ್ತರೇ ಸಾಕ್ಷಿ
ಹಾತೂರುವಿನಲ್ಲಿರುವ ವನ ಭದ್ರಕಾಳಿ ದೇವಿಯು ಬೇಡಿದ ಭಕ್ತರಿಗೆ ಇಂಬು ನೀಡುವ ದೇವಿಯಾಗಿದ್ದು, ಹಬ್ಬಕ್ಕೆ ಪಾಲ್ಗೊಳ್ಳುವ ಸಾವಿರಾರು ಭಕ್ತರು ಇದಕ್ಕೆ ಸಾಕ್ಷಿ ಎಂದು ದೇವಸ್ಥಾನದ ತಕ್ಕಮುಖ್ಯಸ್ಥ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೊಕ್ಕಂಡ ಗಿಣಿ ಗಣಪತಿ ಹೇಳುತ್ತಾರೆ.
ಎರಡು ವರ್ಷಕೊಮ್ಮೆ ಆಚರಿಸುವ ಹಬ್ಬದಲ್ಲಿ ೨೦ ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಂಡು ಹರಕೆ ಒಪ್ಪಿಸುತ್ತಾರೆ. ಇದು ದೈವಶಕ್ತಿಯ ಪ್ರತೀಕವಾಗಿದೆ ಎನ್ನುತಾರೆ.
ಭಕ್ತರ ಕಾಪಾಡುವಳು
ನಂಬಿದವರ ಕೈ ಹಿಡಿಯುವ ದೇವರಾಗಿದ್ದು, ದೇವಸ್ಥಾನ ಎದುರೇ ನಾನು ಅಪಘಾತಕ್ಕೆ ಒಳಗಾದಾಗ ನನ್ನ ಪ್ರಾಣ ರಕ್ಷಿಸಿದೆ. ಮುಖ್ಯರಸ್ತೆಗೆ ದೇವಸ್ಥಾನ ಹೊಂದಿಕೊAಡಿ ರುವುದರಿಂದ ದೇವಿ ಪ್ರಯಾಣಿಕರನ್ನು ಕಾಪಾಡುತ್ತಾಳೆ ಎಂಬುದು ಕೂಡ ಭಕ್ತರಿಗೆ ಅರಿವಾಗಿದೆ. ಎಲ್ಲ ಕಷ್ಟಗಳನ್ನು ಪರಿಹರಿಸುವ ದೇವಿಯಾಗಿ ರುವುದರಿಂದ ರಕ್ಷಕಿಯಾಗಿ ಭಕ್ತರ ಕಾಪಾಡುತ್ತಾಳೆ ಎಂದು ದೇವಿಯ ಶಕ್ತಿಯನ್ನು ವರ್ಣಿಸುತ್ತಾರೆ.
ದೇವರ ಕಾಡಿನಲ್ಲಿ ನೆಲೆ
ಗ್ರಾಮದ ೧೬.೩೮ ಎಕರೆ ದೇವರ ಕಾಡಿನಲ್ಲಿ ನೆಲೆ ನಿಂತಿರುವ ದೇವಿಯಾಗಿದ್ದು, ಇಲ್ಲಿ ಸುಮಾರು ೬೪ ಕ್ಕೂ ಹೆಚ್ಚು ಔಷಧೀಯ ಗುಣಗಳುಳ್ಳ ವನ್ಯಸಂಪತ್ತು ಪೋಷಣೆಯಲ್ಲಿದೆ. ಸುತ್ತಲೂ ಸರ್ಕಾರದಿಂದ ತಂತಿ ಬೇಲಿ ಮೂಲಕ ರಕ್ಷಣೆ ಮಾಡಲಾಗಿದೆ. ಅರಣ್ಯ ಇಲಾಖೆ ಬೇಲಿ ಹಾಕುವ ಸಂದರ್ಭ ಸಾಕಷ್ಟು ಮರ, ಕಾಡು ನಾಶವಾಗಿದೆ. ಇದರಿಂದ ನಷ್ಟವೇ ಹೆಚ್ಚು, ಬೇಲಿ ಕೂಡ ಕಿತ್ತು ಬರುತ್ತಿರುವುದರಿಂದ ಸರ್ಕಾರದ ಹಣ ಪೋಲಾದಂತೆ ಆಗಿದೆ. ರಸ್ತೆಗೆ ಒತ್ತಿನಲ್ಲಿ ಬೇಲಿ ಹಾಕಿದ್ದರೆ ಪ್ರಯೋಜನ ವಾಗುತ್ತಿತ್ತು. ರಸ್ತೆ ಬದಿಯಿಂದ ಅರಣ್ಯದ ಒಳಗೆ ಸರಹದ್ದು ರೀತಿ ಬೇಲಿ ಹಾಕಿರುವುದರಿಂದ ಅರಣ್ಯ ಕೂಡ ಕಳೆದುಕೊಳ್ಳುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ.
ಎರಡು ವರ್ಷಕ್ಕೊಮ್ಮೆ ಜುಲೈ ತಿಂಗಳಲ್ಲಿ ಸೋಮವಾರ, ಮಂಗಳವಾರ ಹಬ್ಬ ನಡೆಯುತ್ತದೆ. ಈ ವರ್ಷ ಜುಲೈ ೧೦ ಮತ್ತು ೧೧ ರಂದು ಹಬ್ಬ ನಡೆಯುತ್ತದೆ. ೧೦ ರಂದು ದೇವರನ್ನು ತರುವ ಆಚರಣೆ, ೧೧ ರಂದು ಮೊಗ, ತೆರೆ ಮೂಲಕ ಆಚರಣೆ ನಡೆಸಲಾಗುತ್ತದೆ.
ಕೋವಿಡ್ ನಂತರ ಮೊದಲ ಬಾರಿಗೆ ಭಕ್ತರು ಸೇರಲು ಅವಕಾಶ ನೀಡಿರುವುದರಿಂದ ೨೦ ಸಾವಿರಕ್ಕೂ ಅಧಿಕ ಭಕ್ತರು ಇಲ್ಲಿ ಸೇರುತ್ತಾರೆ. ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಸೋಮವಾರ ರಾತ್ರಿ ೭ ಗಂಟೆಗೆ ಕೈಕೇರಿ ಗ್ರಾಮದ ಪಕ್ಕದಲ್ಲಿರುವ ಹಲಸಿನ ಮರದ ಕೆಳಗಿರುವ ಸ್ಥಾನದಿಂದ ದೇವರನ್ನು ತಂದು ಮಹಾದೇವರ ದೇವಸ್ಥಾನದಲ್ಲಿ ಪೂಜಿಸಲಾಗುತ್ತದೆ.
ಮಂಗಳವಾರ ದೊಡ್ಡಮನೆ ಕುಟುಂಬದ ಮನೆಯ ಸಮೀಪವಿರುವ ಅರಳಿ ಕಟ್ಟೆಯಲ್ಲಿ ಪೂಜೆ ಸಲ್ಲಿಸಿ, ನಂತರ ಬೆಳಿಗ್ಗೆ ಕೊಕ್ಕಂಡ ಕುಟುಂಬದ ಮೊಗ, ಕೇಳಪಂಡ ಕುಟುಂಬದ ಪೂತೆರೆ ಪೂಜಿಸಲಾಗುತ್ತದೆ. ಮಧ್ಯಾಹ್ನ ೨ ಗಂಟೆ ಸುಮಾರಿಗೆ ಕೊಂಗೇಪAಡ ಮತ್ತು ಕೇಳಪಂಡ ಕುಟುಂಬದ ಪೂತೆರೆ ಆಚರಣೆ ನಡೆಯುತ್ತದೆ. ದೇವಸ್ಥಾನದಲ್ಲಿ ದರ್ಶನ ಇರುತ್ತದೆ. ಸುಮಾರು ೨೦ ಸಾವಿರಕ್ಕೂ ಅಧಿಕ ಭಕ್ತರು ಹರಕೆ ಒಪ್ಪಿಸುತ್ತಾರೆ. ಕೈಕೇರಿಯಿಂದ ದೇವಸ್ಥಾನದವರೆಗೂ ಮೊಗ, ಭಂಡಾರ ಆಗಮಿಸುವಾಗ ಸಾರ್ವಜನಿಕ ರಸ್ತೆಯಲ್ಲಿ ಸಾಗದೆ ಸ್ಥಾನಗಳಿಗೆ ನೇರವಾಗಿ ಸಾಗುವಂತೆ ನಡೆದುಕೊಂಡು ಹೋಗಲಾಗುತ್ತದೆ. ತೋಟ, ಗದ್ದೆ ಮೂಲಕ ಸಾಗುವುದು ಸಾಮಾನ್ಯ. ಯಾವುದೇ ಬೆಳೆ ಇದ್ದರೂ ಕೂಡ ಅದನ್ನು ತುಳಿದುಕೊಂಡೇ ಸಾಗಬೇಕಿದೆ ಎಂದು ಮಾಹಿತಿ ನೀಡಿದರು.
ಕ್ಷೇತ್ರ ದರ್ಶನ
ಇಂತಹ ಪವಿತ್ರ ದೇವಾಲಯಕ್ಕೆ ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕ್ಷೇತ್ರ ದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ದೇವಸ್ಥಾನ ತಕ್ಕರಾದ ಕೊಕ್ಕಂಡ ಪಿ. ಅರ್ಜುನ್, ಕೋಂಗೇಪAಡ ಎಂ. ಸುಬ್ಬಯ್ಯ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೊಕ್ಕಂಡ ಗಿಣಿ ಗಣಪತಿ, ಕಾರ್ಯದರ್ಶಿ ಕೊಂಗೇಪAಡ ರವಿ, ಅಭಿವೃದ್ಧಿ ಸಮಿತಿ ಸದಸ್ಯರಾದ ಪುಲಿಯಂಡ ರೋಷನ್ ಕಾಳಪ್ಪ, ಕೇಳಪಂಡ ಬಾಬು ಉತ್ತಪ್ಪ, ಚೋಣಮಾಡ ಕಾವೇರಪ್ಪ, ಮರುವಂಡ ಮಿಥುನ್ ಅಣ್ಣಯ್ಯ, ಪತ್ರಕರ್ತರ ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ಪ್ರಧಾನ ಕಾರ್ಯದರ್ಶಿ ಎನ್.ಎನ್. ದಿನೇಶ್, ಕಾರ್ಯ ದರ್ಶಿ ಮಂಡೇಡ ಅಶೋಕ್, ನಿರ್ದೇಶಕ ಸಿಂಗಿ ಸತೀಶ್, ಕೊಡಗು ಪ್ರೆಸ್‌ಕ್ಲಬ್ ಅಧ್ಯಕ್ಷ ಅಜ್ಜ ಮಾಡ ರಮೇಶ್ ಕುಟ್ಟಪ್ಪ, ಉಪಾ ಧ್ಯಕ್ಷ ತೇಜಸ್ ಪಾಪಯ್ಯ, ಪ್ರಧಾನ ಕಾರ್ಯದರ್ಶಿ ರೆಜಿತ್‌ಕುಮಾರ್ ಪಾಲ್ಗೊಂಡಿದ್ದರು.
- ದಿನೇಶ್ ಎನ್.ಎನ್.