*ಗೋಣಿಕೊಪ್ಪ, ಜು. ೮: ಹುದಿಕೇರಿ ಪಂಚಾಯಿತಿ ವ್ಯಾಪ್ತಿಯ ಬೇಗೂರು ಗ್ರಾಮದ ಶ್ರೀ ಮಹಾವಿಷ್ಣು (ವಿಷ್ಣುಮೂರ್ತಿ) ದೇವಸ್ಥಾನದ ಜೀರ್ಣೋದ್ಧಾರ ಕೆಲಸಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗಡೆಯವರು ನೀಡಿದ ರೂ. ೨ ಲಕ್ಷದ ಚೆಕ್ಕನ್ನು ಜಿಲ್ಲೆಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕಿ ಲೀಲಾವತಿ ದೇವಸ್ಥಾನ ಆಡಳಿತ ಮಂಡಳಿಗೆ ವಿತರಿಸಿದರು.

ವೀರಾಜಪೇಟೆ ತಾಲೂಕಿನ ಯೋಜನಾಧಿಕಾರಿ ದಿನೇಶ್, ಆಡಳಿತ ಮಂಡಳಿಯ ಅಧ್ಯಕ್ಷ ಕಾಯಪಂಡ ಕಂಠಿ ಕರುಂಬಯ್ಯ, ದೇವತಕ್ಕ ಮಲ್ಲಂಡ ರಾಜು ಬೋಪಯ್ಯ, ಕಾರ್ಯದರ್ಶಿ ಕೊಟ್ಟಂಗಡ ರಾಜ ಸುಬ್ಬಯ್ಯ, ನಿರ್ದೇಶಕರುಗಳಾದ ಮಂಡAಗಡ ರಾಜ ಮಾದಪ್ಪ, ಚೋಡುಮಾಡ ಶಾಂತು ನಾಣಯ್ಯ, ಕಾಯಪಂಡ ದಿನು, ಮಂಡAಗಡ ಬೋಪಣ್ಣ, ಕೇಚಬ್ಬಿರ ಶರಣು ಹಾಜರಿದ್ದರು.