ಮಡಿಕೇರಿ, ಜು. ೫: ಕೊಡಗು ಜಿಲ್ಲೆಯಲ್ಲಿ ಸೋಮವಾರದಿಂದ ಮುಂಗಾರು ಮಳೆ ಒಂದಷ್ಟು ಬಿರುಸು ಕಾಣುತ್ತಿದೆ. ಬಹುತೇಕ ಜಿಲ್ಲೆಯಾದ್ಯಂತ ಇದೀಗ ಮುಂಗಾರಿನ ಲಕ್ಷಣ ಕಂಡು ಬಂದಿದ್ದು ಅಲ್ಲಲ್ಲಿ ಮಳೆ ಸುರಿಯುತ್ತಿದೆ. ಕಳೆದ ೨೪ ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ ೧.೪೫ ಇಂಚಿನಷ್ಟು ಮಳೆ ಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ಸರಾಸರಿ ೧.೯೫, ವೀರಾಜಪೇಟೆ ೧.೩೯ ಹಾಗೂ ಸೋಮವಾರಪೇಟೆಯಲ್ಲಿ ೧.೦೨ ಇಂಚಿನಷ್ಟು ಮಳೆಯಾಗಿದೆ.
ಈತನಕ ಕ್ಷೀಣಗೊಂಡAತಿದ್ದ ಮಳೆ ಇದೀಗ ತುಸು ಬಿರುಸು ಕಾಣುತ್ತಿದ್ದು ಜಿಲ್ಲ್ಲೆಯಾದ್ಯಂತ ಮಳೆ ಸುರಿಯುತ್ತಿದೆ. ಕಳೆದ ೨೪ ಗಂಟೆಗಳ ಅವಧಿಯಲ್ಲಿ ಭಾಗಮಂಡಲ ಹೋಬಳಿಗೆ ೩.೧೨ ಇಂಚಿನಷ್ಟು ಮಳೆಯಾಗಿದೆ. ಉಳಿದಂತೆ ಮಡಿಕೇರಿ ಕ.ಸ.ಬಾ. ೧.೭೬, ನಾಪೋಕ್ಲು ೧.೬೦, ಸಂಪಾಜೆ ೧.೩೦, ವೀರಾಜಪೇಟೆ ಕ.ಸ.ಬಾ. ೧.೭೯, ಹುದಿಕೇರಿ ೧.೩೨, ಶ್ರೀಮಂಗಲ ೨.೧೨, ಪೊನ್ನಂಪೇಟೆ ೦.೮೦, ಅಮ್ಮತ್ತಿ ೧.೯೬, ಬಾಳೆಲೆ ಹೋಬಳಿಯಲ್ಲಿ ೦.೩೬ ಇಂಚು ಮಳೆಯಾಗಿದೆ. ಸೋಮವಾರಪೇಟೆ ಕ.ಸ.ಬಾ.ದಲ್ಲಿ ೧.೧೪, ಶನಿವಾರಸಂತೆ ೦.೬೦, ಶಾಂತಳ್ಳಿ ೨.೬೪, ಕೊಡ್ಲಿಪೇಟೆ ೦.೭೬, ಕುಶಾಲನಗರ ೦.೩೦ ಹಾಗೂ ಸುಂಟಿಕೊಪ್ಪ ಹೋಬಳಿಯಲ್ಲಿ ೦.೭೨ ಇಂಚು ಮಳೆಯಾಗಿದೆ. ಜಿಲ್ಲೆಯಲ್ಲಿ ಈತನಕ
(ಮೊದಲ ಪುಟದಿಂದ) ಇದ್ದಂತಹ ವಾತಾವರಣ ಮರೆಯಾಗಿದ್ದು ಇದೀಗ ಮೋಡಕವಿದ ಸನ್ನಿವೇಶದೊಂದಿಗೆ ನೈಜ ಮುಂಗಾರು ಆರಂಭಗೊAಡAತಿದೆ.
ಮಳೆಯಿAದ ಹಾನಿ
ಪ್ರಸ್ತುತ ಮಳೆಯೊಂದಿಗೆ ಸಣ್ಣ ಪ್ರಮಾಣದ ಗಾಳಿಯೂ ಕಂಡುಬರುತ್ತಿದ್ದು ಆರಂಭಿಕ ಮಳೆಗೆ ಒಂದಷ್ಟು ಹಾನಿಗಳೂ ಉಂಟಾಗುತ್ತಿವೆ. ನಿನ್ನೆ ಕೆಲವೆÀಡೆ ವಿದ್ಯುತ್ ಕಂಬ - ಮರ ಮುರಿದು ಬಿದ್ದಿದ್ದು ಇದನ್ನು ಸರಿಪಡಿಸಲಾಗಿತ್ತು. ಇದೀಗ ಇಂದು ಮುಕ್ಕೋಡ್ಲುವಿನಲ್ಲಿ ರವಿಕುಶಾಲಪ್ಪ ಅವರ ಮನೆಯ ಬಳಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದು ತಂತಿಪಾಲ - ಮುಕ್ಕೋಡ್ಲು ರಸ್ತೆ ಸಂಪರ್ಕಕ್ಕೆ ಅಡಚಣೆಯಾಗಿತ್ತು.