ಗೋಣಿಕೊಪ್ಪಲು, ಜು. ೫: ಕಳೆದೆರಡು ದಿನಗಳಿಂದ ದಕ್ಷಿಣ ಕೊಡಗಿನಲ್ಲಿ ಮುಂಗಾರು ಮಳೆ ಬಿರುಸು ಪಡೆದುಕೊಂಡಿದ್ದು, ರೈತರು ತಮ್ಮ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆಗಿಂದ್ದಾಗಿಯೇ ಮಳೆಯೊಂದಿಗೆ ಗಾಳಿಯು ಬೀಸುತ್ತಿದೆ. ಇದರಿಂದ ಹಲವು ಮರಗಳು ಉರುಳಿ ಬೀಳುತ್ತಿವೆ. ವಿದ್ಯುತ್ ಕಂಬಗಳು ಹಾಳಾಗುತ್ತಿವೆ.
ತಾ.೫ರ ಮುಂಜಾನೆ ೭ ಗಂಟೆ ಸುಮಾರಿಗೆ ಬೀಸಿದ ಮಳೆ, ಗಾಳಿಗೆ ಶ್ರೀಮಂಗಲ ಸಮೀಪದ ಕಾಯಿಮನೆ ಎಂಬಲ್ಲಿ ಕಾಫಿ ತೋಟದಿಂದ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಅಡ್ಡಲಾಗಿ ಉರುಳಿ ಬಿದ್ದ ಪರಿಣಾಮ ಕುಟ್ಟ- ಶ್ರೀಮಂಗಲ ಮಾರ್ಗವಾಗಿ ಮಡಿಕೇರಿಗೆ ತೆರಳುವ ತಿರುಮಲ ಖಾಸಗಿ ಬಸ್ಸಿಗೆ ಜಖಂ ಆಗಿದೆ. ಅದೃಷ್ಟವಶಾತ್ ಯಾವುದೇ ರೀತಿಯ ಪ್ರಾಣ ಹಾನಿ ಸಂಭವಿಸಲಿಲ್ಲ.
ಮುAಜಾನೆ ೭.೧೫ರ ಸುಮಾರಿಗೆ ಕಾಯಿ ಮನೆ ಬಳಿ ತೆರಳುತ್ತಿದ್ದಂತೆಯೇ ಕಾಫಿ ತೋಟದಲ್ಲಿದ್ದ ಮರವೊಂದು ಮಳೆ ಹಾಗೂ ಗಾಳಿಯ ರಭಸಕ್ಕೆ ರಸ್ತೆಗೆ ಉರುಳಿ ಬಿದ್ದಿದೆ. ಈ ವೇಳೆ ಬಸ್ ಕೂಡ ರಸ್ತೆಯಲ್ಲಿ ಚಲಿಸುತ್ತಿದ್ದ ಪರಿಣಾಮ ಮರದ ಕೆಲವು ಭಾಗ ಬಸ್ಸಿನ ಮೇಲೆ ಆವರಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಬಸ್ ತೆರಳಿದ್ದರಿಂದ ಭಾರಿ ಅನಾಹುತವು ತಪ್ಪಿದಂತಾಗಿದೆ. ಇಲ್ಲದಿದ್ದಲ್ಲಿ ದೊಡ್ಡ ಅನಾಹುತವೇ ನಡೆದು ಹೋಗುವ ಸಂಭವವಿತ್ತು. ಬಸ್ಸಿನ ಮೇಲ್ಭಾಗ ಹಾಗೂ ಏಣಿ ಹಾಗೂ ಬಸ್ಸಿನ ಗಾಜುಗಳು ಜಖಂಗೊAಡಿವೆ. ನಿಗದಿತ ಸಮಯದಲ್ಲಿ ಬಸ್ಸ್ ಸಂಚಾರವನ್ನು ಮುಂದುವರೆಸಲಾಗಲಿಲ್ಲ. ಸಾಕಷ್ಟು ನಷ್ಟ ಸಂಭವಿಸಿದೆ ಎಂದು ಬಸ್ ಮಾಲೀಕ ಕಳ್ಳಿಚಂಡ ಧನು ತಿಳಿಸಿದ್ದಾರೆ.
ರಸ್ತೆಯಲ್ಲಿ ಸಂಚರಿಸುತ್ತಿದ್ದ ಖಾಸಗಿ ಬಸ್ಸಿನ ಮೇಲೆ ಮರವು ಉರುಳಿ ಬಿದ್ದ ಪರಿಣಾಮ ಬಸ್ಸಿನ ಗಾಜುಗಳು ಕ್ಯಾರಿಯರ್
(ಮೊದಲ ಪುಟದಿಂದ) ಹಾಗೂ ಏಣಿಯು ಜಖಂಗೊAಡಿದೆ. ಬಸ್ಸಿನಲ್ಲಿ ಸಾಕಷ್ಟು ಪ್ರಯಾಣಿಕರು ಪ್ರಯಾಣ ಬೆಳೆಸಿದ್ದರು. ಮರ ಬಿದ್ದ ಪರಿಣಾಮ ಕುಟ್ಟ-ಶ್ರೀಮಂಗಲ ರಸ್ತೆಯಲ್ಲಿ ಕೆಲ ಕಾಲ ಟ್ರಾಫಿಕ್ ಕಂಡು ಬಂತು. ಸ್ಥಳೀಯರ ಸಹಕಾರದಿಂದ ಬಸ್ಸಿನ ಮೇಲೆ ಬಿದ್ದಿದ್ದ ಮರದ ಕೊಂಬೆಗಳನ್ನು ತೆರವುಗೊಳಿಸಲಾಯಿತು. ರಸ್ತೆಗೆ ಬಿದ್ದಿದ್ದ ಭಾರಿ ಗಾತ್ರದ ಮರವನ್ನು ಕೆಲ ಗಂಟೆಗÀಳ ನಂತರ ತೆರವು ಮಾಡಿ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಯಿತು.
ಬಸ್ ಸೇರಿದಂತೆ ಇತರೆ ವಾಹನಗಳು ಸಂಚರಿಸುವ ಮುಖ್ಯರಸ್ತೆಗೆ ಹೊಂದಿಕೊAಡAತೆ ಮರದ ಕೊಂಬೆಗಳು ರಸ್ತೆಗೆ ಬಾಗಿ ನಿಂತಿವೆ, ಇದರಿಂದ ಬಸ್ಸ್ಗಳು ಸಂಚರಿಸುವ ವೇಳೆ ಮರದ ಕೊಂಬೆಗಳು ಬಸ್ಸಿನ ಗಾಜಿಗೆ ತಗುಲಿ ನಷ್ಟ ಸಂಭವಿಸಿದೆ. ಮಡಿಕೇರಿ ಸಮೀಪದ ಮೇಕೇರಿ ರಸ್ತೆ ಹಾಗೂ ಚೆಟ್ಟಳ್ಳಿ ಭಾಗದ ರಸ್ತೆಯಲ್ಲಿ ಇಂತಹ ಘಟನೆ ನಡೆದಿದೆ. ಮಳೆಗೂ ಮುನ್ನ ರಸ್ತೆಯ ಎರಡು ಬದಿಯಲ್ಲಿ ರಸ್ತೆಗೆ ಬಾಗಿರುವ ಮರದ ಕೊಂಬೆಗಳನ್ನು ತೆರವುಗೊಳಿಸಬೇಕಾದ ಇಲಾಖೆಯು ಮೌನ ವಹಿಸಿದೆ. ಇದರಿಂದ ಇಂತಹ ಸಮಸ್ಯೆಗಳು ಎದುರಾಗುತ್ತಿವೆ.
-ಹೆಚ್.ಕೆ. ಜಗದೀಶ್