ವೀರಾಜಪೇಟೆ, ಜು. ೩: ವೀರಾಜಪೇಟೆಯ ಕಾವೇರಿ ಶಾಲೆಯಲ್ಲಿ (ಕೃತಕ ವಿಜ್ಞಾನ) ಎಂಬ ಹೊಸ ಆವಿಷ್ಕಾರದ ಬಗ್ಗೆ ೬ನೇ ತರಗತಿಯಿಂದ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಯಿತು.
ಈ ಸಂದರ್ಭ ಪೊನಂಪೇಟೆಯ ಓಜಸ್ವಿ ಫೌಂಡೇಶನ್ ಟ್ರಸ್ಟಿ ಡಾ. ಕವಿತಾ ಪಿ.ಸಿ. ಹಾಗೂ ಸಿ.ಇ.ಓ. ಕೋ ಫೌಂಡರ್ ಜಸ್ಟ್ ರೋಬೋಟಿಕ್ಸ್ ವಿಭಾಗದ ಸಿ.ಡಿ. ಬ್ರಿಜೇಶ್ ಅವರು ಗಳು ಮುಂದಿನ ಕಾಲಘಟ್ಟದಲ್ಲಿ ಈ ಹೊಸ ಆವಿಷ್ಕಾರ ಯಾವ ರೀತಿಯಾಗಿ ಕಾರ್ಯನಿರ್ವಹಿಸುತ್ತದೆ ಎಂಬ ಬಗ್ಗೆ ಮಕ್ಕಳಿಗೆ ಉಪನ್ಯಾಸ ನೀಡಿದರು. ಅಲ್ಲದೆ ಮುಂಬರುವ ದಿನಗಳಲ್ಲಿ ತಮ್ಮ ಪಠ್ಯ ವಿಷಯಗಳ ಬೋಧನೆ ಅವಧಿಯ ಜೊತೆಗೆ "ರೋಬೋಟಿಕ್ಸ್ ಸೈನ್ಸ್" ಎಂಬ ವಿಷಯವನ್ನು ಅಳವಡಿಸುವುದಾಗಿ ಹಾಗೂ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ವಿದ್ಯಾರ್ಥಿ ಗಳಿಗೆ ಹೇಳಿದರು.
ಕಾರ್ಯಕ್ರಮದಲ್ಲಿ ಶಾಲೆ ಆಡಳಿತ ಮಂಡಳಿ ಅಧ್ಯಕ್ಷ ಬಿ.ಎಸ್. ಸುದೇಶ್, ಕಾರ್ಯದರ್ಶಿ ವಿನೋದ್ ಪಿ.ಎನ್. ಹಾಗೂ ಪೋಷಕರು ಉಪಸ್ಥಿತರಿದ್ದರು.