ಮಡಿಕೇರಿ, ಜು. ೩: ವಾಟೆಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಕರ್ನಾಟಕ ವಿದ್ಯಾರ್ಥಿ ಸಂಘಟನೆ, ಭೂಮಿ ಮತ್ತು ಹೋರಾಟ ಸಮಿತಿ ಬೆಂಗಳೂರು ಇವರ ವತಿಯಿಂದ ನೋಟ್ ಪುಸ್ತಕ ಹಾಗೂ ಪೆನ್ಸಿಲ್‌ಗಳನ್ನು ವಿತರಿಸಲಾಯಿತು.ದಾನಿಗಳಾದ ಶ್ರೀನಿವಾಸ ಮತ್ತು ಡಿ. ವಿಜಯಮ್ಮ ಅವರ ಸಹಯೋಗದೊಂದಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ.ವಿ. ಕುಸುಮಾ, ಸದಸ್ಯ ಮೊಣ್ಣಪ್ಪ, ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಹಾಗೂ ಪೆನ್, ಪೆನ್ಸಿಲ್ ವಿತರಿಸಿದರು. ಕಾರ್ಯಕ್ರಮದಲ್ಲಿ ಕೆ.ವಿ.ಎಸ್. ಸಂಘಟನಾ ಸದಸ್ಯ ಕೆ.ಎಂ. ರಂಜಿತ್ ಹಾಗೂ ಶಾಲಾ ಶಿಕ್ಷಕರು ಹಾಜರಿದ್ದರು.