ಪೊನ್ನಂಪೇಟೆ, ಜು. ೩ : ಪೊನ್ನಂಪೇಟೆ ನ್ಯಾಯಾಲಯದಲ್ಲಿ ದಫೇದಾರ್ ಆಗಿ ಕಾರ್ಯ ನಿರ್ವಹಿ ಸುತ್ತಿದ್ದ ಈರಪ್ಪ ಅವರು ನಿವೃತ್ತಿ ಗೊಂಡ ಹಿನ್ನೆಲೆಯಲ್ಲಿ ನ್ಯಾಯಾಲ ಯದ ಸಿಬ್ಬಂದಿ ಅವರನ್ನು ಗೌರವಿಸಿ ಬೀಳ್ಕೊಟ್ಟರು. ಪೊನ್ನಂಪೇಟೆ ನ್ಯಾಯಾಲಯದ ಸಿವಿಲ್ ನ್ಯಾಯಾ ಧೀಶರಾದ ಆಶಾ ಅವರ ಅಧ್ಯಕ್ಷತೆ ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವೀರಾಜಪೇಟೆ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರಾದ ನಾಗಿರೆಡ್ಡಿ, ಶಿರಸ್ತೇದಾರರಾದ ಪಾರ್ವತಿ, ಎಫ್.ಡಿ.ಎ. ರೋಚನ, ಎಸ್.ಡಿ.ಎ ಕವಿತ, ಸ್ಟೆನೋಗ್ರಾಫರ್ ರವಿ ಪ್ರಸಾದ್, ಸೇರಿದಂತೆ ಸಿಬ್ಬಂದಿಗಳು, ಮಾತನಾಡಿದರು. ನ್ಯಾಯಾಲಯದ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಹಾಜರಿದ್ದರು.