ಮಡಿಕೇರಿ ಜು. ೩: ವಾಲ್ನೂರು ತ್ಯಾಗತ್ತೂರು ಗ್ರಾ.ಪಂಗೆ ಒಳಪಡುವ ಒಂಟಿಯAಗಡಿಯಲ್ಲಿದ್ದ ಗ್ರಾ.ಪಂ ನ ಹಳೆಯ ಕಚೇರಿ ಮತ್ತೆ ಕಾರ್ಯಾರಂಭ ಮಾಡಲಿದೆ.

ವಾರದ ಬುಧವಾರ ಮತ್ತು ಶನಿವಾರ ಕಚೇರಿ ತೆರೆದು ಗ್ರಾಮಸ್ಥರ ಅರ್ಜಿಗಳನ್ನು ವಿಲೇವಾರಿ ಮಾಡುವಂತೆ ತಹಶೀಲ್ದಾರರು ಗ್ರಾಮ ಲೆಕ್ಕಿಗರಿಗೆ ಸೂಚನೆ ನೀಡಿದ್ದಾರೆ.

ಕಳೆದ ಅನೇಕ ವರ್ಷಗಳಿಂದ ಕಚೇರಿಗೆ ಬೀಗ ಜಡಿಯಲ್ಪಿಟ್ಟಿದ್ದ ಕಾರಣ ಗ್ರಾಮಸ್ಥರು ಕುಶಾಲನಗರ ನಾಡಕಚೇರಿಯನ್ನು ಅವಲಂಬಿಸಬೇಕಾಗಿತ್ತು. ಕುಶಾಲನಗರಕ್ಕೆ ನಿತ್ಯ ಹೋಗಿ ಬರುವುದು ಕಷ್ಟವಾಗುತ್ತಿದ್ದ ಕಾರಣ ಮತ್ತು ಅನಾನುಕೂಲತೆಯ ಕುರಿತು ಗ್ರಾಮಸ್ಥರ ಪರವಾಗಿ ಈ ಹಿಂದೆ “ಶಕ್ತಿ” ವರದಿ ಪ್ರಕಟಿಸಿತ್ತು.

ಅಲ್ಲದೆ ಗ್ರಾ.ಪಂ ಮಾಜಿ ಸದಸ್ಯ ಅಂಚೆಮನೆ ಸುಧಿ, ತಾ.ಪಂ ಮಾಜಿ ಸದಸ್ಯ ವಿ.ಕೆ.ಲೋಕೇಶ್, ಬೆಳೆಗಾರರಾದ ಡಿ.ಪಿ.ಮಾಚಯ್ಯ ಹಾಗೂ ಡಿ.ಕೆ.ಪುನೀತ್ ಅವರುಗಳ ನಿಯೋಗ ಅಂದಿನ ಶಾಸಕ ಎಂ.ಪಿ.ಅಪ್ಪಚ್ಚುರAಜನ್ ಅವರ ಗಮನ ಸೆಳೆದು ಹಳೆಯ ಕಚೇರಿ ಪುನರಾರಂಭಿಸಲು ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಿದ್ದರು. ಈ ಕುರಿತು ತಹಶೀಲ್ದಾರರು ಕೂಡ ಸೂಚನೆ ನೀಡಿ ಕಚೇರಿ ತೆರೆಯುವಂತೆ ತಿಳಿಸಿದ್ದರೂ ಇಲ್ಲಿಯವರೆಗೆ ಕಾರ್ಯಾರಂಭವಾಗಿರಲಿಲ್ಲ. ಇದೀಗ ಮತ್ತೆ ತಹಶೀಲ್ದಾರ್ ಪ್ರಕಾಶ್ ಅವರು ಆದೇಶ ಮಾಡಿರುವ ಹಿನ್ನೆಲೆ ವಾರದ ಎರಡು ದಿನ ಕಚೇರಿ ತೆರೆಯಲು ಸಮ್ಮತಿ ದೊರೆತ್ತಿದೆ.