ವೀರಾಜಪೇಟೆ, ಜು. ೩: ಸಹಕಾರಿ ಸಂಸ್ಥೆಗಳಲ್ಲಿ ಅಧಿಕಾರಿಗಳ ಹಸ್ತಕ್ಷೇಪ ಇರಬಾರದು. ಅಧಿಕಾರಿಗಳ ಹಸ್ತಕ್ಷೇಪ ಹಾಗೂ ನಿರ್ಲಕ್ಷö್ಯತನದಿಂದ ಇಂದು ಹಲವಾರು ಪ್ರಕರಣಗಳು ರಾಜ್ಯ ಉಚ್ಚ ನ್ಯಾಯಾಲಯದಲ್ಲಿವೆ. ಇದು ಸಹಕಾರಿ ಕ್ಷೇತ್ರಕ್ಕೆ ಮಾರಕ ಎಂದು ವೀರಾಜಪೇಟೆ ಶಾಸಕರಾದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಹೇಳಿದರು.
ಕಾಕೋಟುಪರಂಬು ಕೃಷಿ ಪತ್ತಿನ ಸಹಕಾರ ಸಂಘದ ರೂ. ೪೫ ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ರಾಜ್ಯದ ಅಡ್ವಕೇಟ್ ಜನರಲ್ ಆಗಿದ್ದ ಸಂದರ್ಭ ಸಹಕಾರಿ ಕ್ಷೇತ್ರಕ್ಕೆ ಸಂಬAಧಿಸಿದ ಹಲವಾರು ಪ್ರಕರಣಗಳ ಬಗ್ಗೆ ವಾದ ಮಂಡಿಸಿದ್ದೇನೆ. ರಾಜ್ಯದಲ್ಲಿ ಸಹಕಾರಿ ಸಂಸ್ಥೆಗಳಲ್ಲಿ ಶಿಸ್ತುಬದ್ದ ಪ್ರಾಮಾಣಿಕ ವಾಗಿ ಕೆಲಸ ನಿರ್ವಹಿಸುತ್ತಿರುವುದು ಕೊಡಗು ಜಿಲ್ಲೆ ಮಾತ್ರ. ಹಿಂದೆ ನಮ್ಮ ಪೂರ್ವಜರು ಕಟ್ಟಿ ಬೆಳೆಸಿದ ಸಹಕಾರಿ ಸಂಸ್ಥೆಗಳು ಇಂದಿಗೂ ಉತ್ತಮವಾಗಿದೆ ಎಂದರೆ ನಾವು ಅವರಿಗೆ ನೀಡುತ್ತಿರುವ ಗೌರವ ಎಂದರು.
ಜಿಲ್ಲೆಯ ಒಂದೆರಡು ಸಹಕಾರಿ ಸಂಸ್ಥೆಗಳನ್ನು ಹೊರತುಪಡಿಸಿದರೆ ಉಳಿದ ಎಲ್ಲಾ ಸಹಕಾರಿ ಸಂಸ್ಥೆಗಳು ಅವ್ಯವಹಾರ ಹಾಗೂ ಹಣ ದುರುಪಯೋಗ ಇಲ್ಲದೆ ಪ್ರಗತಿ ಸಾಧಿಸಿದೆ ಎಂದು ಶ್ಲಾಘಿಸಿದರು.
ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಮಾತನಾಡಿ, ಸ್ವತಂತ್ರ ಪೂರ್ವ ದಲ್ಲಿಯೇ ಆರಂಭಗೊAಡ ಸಹಕಾರಿ ಕ್ಷೇತ್ರ ಗ್ರಾಮೀಣ ಭಾಗದಲ್ಲಿ ಪ್ರಗತಿ ಸಾಧಿಸಿ ರಾಷ್ಟಿçÃಕೃತ ಬ್ಯಾಂಕ್ಗಳಿಗೆ ಪೈಪೋಟಿ ನೀಡುತ್ತಿರುವುದು ಅವರುಗಳಿಗೆ ನುಂಗಲಾರದ ತುತ್ತಾಗಿದೆ. ಸಾಲ ಸೌಲಭ್ಯಗಳನ್ನು ಪಡೆದುಕೊಂಡ ರೈತರು ಸರಿಯಾದ ಸಮಯಕ್ಕೆ ಸಾಲ ಮರು ಪಾವತಿ ಮಾಡಿದರೆ ಸಹಕಾರ ಸಂಘಗಳು ಉಳಿದುಕೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಮಾತನಾಡಿ ಜಿಲ್ಲೆಯಲ್ಲಿ ನೂರಕ್ಕೂ ಅಧಿಕ ಸಂಘ ಸಂಸ್ಥೆಗಳಿದ್ದು, ಅದರಲ್ಲಿ ೭೧ ಸಹಕಾರಿ ಸಂಘ ಹಾಗೂ ಬ್ಯಾಂಕ್ಗಳು ಲಾಭದಲ್ಲಿ ಮುಂದುವರೆಯುತ್ತಿವೆ. ಹಲವು ಸಹಕಾರಿ ಬ್ಯಾಂಕ್ಗಳು ಕೋಟಿಗಳಲ್ಲಿ ವ್ಯವಹಾರ ನಡೆಸುತ್ತಿದ್ದು, ರಾಷ್ಟಿçÃಕೃತ ಬ್ಯಾಂಕುಗಳಿಗೆ ಪೈಪೋಟಿ ನೀಡುತ್ತಿವೆ. ಜಿಲ್ಲೆಯ ಸಹಕಾರ ಕ್ಷೇತ್ರ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದ್ದು ಎಲ್ಲಾ ಜಿಲ್ಲೆಗಳಿಗೆ ಮಾದರಿಯಾಗಿದೆ. ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಫ್ರೂಟ್ ತಂತ್ರಾAಶ ಬೇರೆ ಜಿಲ್ಲೆಗಳಿಗೆ ವರದಾನವಾದರೆ ಕೊಡಗು ಜಿಲ್ಲೆಯ ಮಟ್ಟಿಗೆ ಮಾರಕವಾಗಿದೆ. ಈ ತಂತ್ರಾAಶದಿAದ ಜಿಲ್ಲೆಯ ರೈತರು ಕಂಗಾಲಾಗುತ್ತಿದ್ದು, ಸಹಕಾರಿ ಬ್ಯಾಂಕ್ಗಳಿAದ ಸಾಲ ಸೌಲಭ್ಯಗಳನ್ನು ಪಡೆಯಲು ಕಷ್ಟವಾಗುತ್ತಿರುವ ಕಾರಣ ಜಿಲ್ಲೆಯ ಶಾಸಕರುಗಳು ಹಾಗೂ ವಿಧಾನ ಪರಿಷತ್ ಸದಸ್ಯರುಗಳು ವಿಧಾನಸಭೆಯಲ್ಲಿ ಧ್ವನಿಎತ್ತಿ ಜಿಲ್ಲೆಯ ರೈತರನ್ನು ಸಂಕಷ್ಟದಿAದ ಪಾರು ಮಾಡಬೇಕು ಎಂದು ಹೇಳಿದರು.
ಕಾಕೋಟುಪರಂಬು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪೂಳಂಡ ವಿನು ಪೆಮ್ಮಯ್ಯ ಮಾತನಾಡಿ, ಸಹಕಾರ ಸಂಘವು ೧೯೫೯ರಲ್ಲಿ ೪೫೧ ಸದಸ್ಯರೊಂದಿಗೆ ಪ್ರಾರಂಭಗೊAಡು ಕೇವಲ ನಾಲ್ಕೇರಿ ಗ್ರಾಮಕ್ಕೆ ಮಾತ್ರ ಸೀಮಿತವಾಗಿತ್ತು. ೧೯೭೬ರಲ್ಲಿ ಸರ್ಕಾರದ ನಿಬಂಧನೆಗಳಿAದ ಅರಮೇರಿ ಗ್ರಾಮಕ್ಕೆ ವಿಸ್ತರಿಸಲಾಯಿತು. ಪ್ರಸ್ತುತ ೯೩೦ ಸದಸ್ಯರಿದ್ದಾರೆ. ಸಂಘದ ಹಳೆಯ ಕಟ್ಟಡ ರಸ್ತೆಬದಿಯಲ್ಲಿದ್ದ ಕಾರಣ ರಸ್ತೆ ವಿಸ್ತರಣೆ ಆಗುವ ಸಂದರ್ಭ ಕಟ್ಟಡಕ್ಕೆ ಹಾನಿ ಉಂಟಾಗು ವುದರಿಂದ ಕಾಕೋಟುಪರಂಬು ಕಾಲಭೈರವ ದೇವಾಲಯ ಸಮಿತಿ ಸಂಘಕ್ಕೆ ೨೫ ಸೆಂಟ್ ಜಾಗವನ್ನು ಉದಾರವಾಗಿ ನೀಡಿದ ಫಲವಾಗಿ ಕಟ್ಟಡ ನಿರ್ಮಿಸಲು ಸಾಧ್ಯವಾಯಿತು ಎಂದು ಮಾಹಿತಿ ನೀಡಿದರು.
ಇದೇ ಸಂದರ್ಭ ಶಾಸಕ ಎ.ಎಸ್. ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಸಂಘದ ಮಾಜಿ ಅಧ್ಯಕ್ಷರುಗಳಾದ ಮೇವಡ ಸುಬ್ಬಯ್ಯ, ಮಂಡೇಟಿರ ದೇವಯ್ಯ, ಕಟ್ಟೆರ ಕುಟ್ಟಪ್ಪ, ಮಂಡೇಟಿರ ಸುರೇಶ್, ಚಂಬAಡ ಮಾಚಯ್ಯ, ಬಾಚಿರ ಬಿದ್ದಪ್ಪ, ಪಳೆಯಂಡ ರಾಬಿನ್ ದೇವಯ್ಯ, ಗುತ್ತಿಗೆದಾರರಾದ ಮೇವಡ ಪೂವಯ್ಯ, ಪೊನ್ನಕಚ್ಚಿರ ಸುಭಾಷ್ ಅವರುಗಳನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಕೇಂದ್ರ ಸಹಕಾರ ಬ್ಯಾಂಕ್ನ ಉಪಾಧ್ಯಕ್ಷ ಕೇಟೊಳಿರ ಹರೀಶ್ ಪೂವಯ್ಯ, ನಿರ್ದೇಶಕರಾದ ಪಟ್ರಪಂಡ ರಘು ನಾಣಯ್ಯ, ಹೊಟ್ಟೆಂಗಡ ರಮೇಶ್, ಕೋಲತಂಡ ಸುಬ್ರಮಣಿ, ಕುಂಞAಗಡ ಅರುಣ್ ಭೀಮಯ್ಯ, ಸಹಕಾರ ಅಭಿವೃದ್ದಿ ಅಧಿಕಾರಿ ಎಂ.ಎಸ್ ಮೋಹನ್, ವ್ಯವಸ್ಥಾಪಕ ಕಟ್ಟೆರ ಪೂಣಚ್ಚ ಮತ್ತಿತರರು ಉಪಸ್ಥಿತರಿದ್ದರು. ಉಪಾಧ್ಯಕ್ಷೆ ಮೇವಡ ವಸ್ಮಾ ಸ್ವಾಗತಿಸಿದರು. ಎಸ್.ಎಂ.ಎಸ್ ಶಾಲಾ ಶಿಕ್ಷಕಿ ಸೀಮಾ ಕಾರ್ಯಕ್ರಮ ನಿರೂಪಿಸಿದರು. ಮೂಳೆರ ಸುಬ್ಬಯ್ಯ ವಂದಿಸಿದರು.