ಮಡಿಕೇರಿ, ಜು. ೩: ಹೊಸ ಸಂಸತ್ತಿನಲ್ಲಿ ಪ್ರತಿನಿಧಿಸಲು ವಿಶೇಷವಾದ ‘ಇಂಟ್ಯಾAಜಿಬಲ್’ ಕೊಡವ ಸಂಸದೀಯ ಮತ್ತು ಕೊಡವ ಅಸೆಂಬ್ಲಿ ಕ್ಷೇತ್ರಗಳನ್ನು ರಚಿಸಿ ಸೆಂಟ್ರಲ್ ವಿಸ್ಟಾ ಮತ್ತು ರಾಜ್ಯ ಅಸೆಂಬ್ಲಿಯಲ್ಲಿ ಸಿಕ್ಕಿಮ್‌ನ "ಸಂಘ" ಕ್ಷೇತ್ರದ ರೀತಿಯಲ್ಲಿ ನೀಡುವಂತೆ ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಹಕ್ಕೋತ್ತಾಯ ಮಂಡಿಸಿತು.

ಸಿಎನ್‌ಸಿ ಅಧ್ಯಕ್ಷ ನಂದಿನೆರವAಡ ನಾಚಪ್ಪ ಮಾತನಾಡಿ, ``ಸಂಘ'' ಅಸೆಂಬ್ಲಿ ಕ್ಷೇತ್ರವು ಭಾರತದ ಈಶಾನ್ಯ ಪ್ರದೇಶದ ರಾಜ್ಯವಾದ ಸಿಕ್ಕಿಂನ ೩೨ ಅಸೆಂಬ್ಲಿ ಕ್ಷೇತ್ರಗಳಲ್ಲಿ ಒಂದಾಗಿದೆ. ಈ ಸ್ಥಾನವು ಸಿಕ್ಕಿಂನ ಬೌದ್ಧ ಸನ್ಯಾಸಿ ಸಮುದಾಯಕ್ಕೆ ಮೀಸಲಾಗಿದೆ. ಬೌದ್ಧ ಸನ್ಯಾಸಿಗಳು ಮತ್ತು ಸನ್ಯಾಸಿನಿಗಳು, ರಾಜ್ಯದಲ್ಲಿ ಮಾನ್ಯತೆ ಪಡೆದ ೧೧೧ ಮಠಗಳಲ್ಲಿ ನೋಂದಾಯಿಸಲ್ಪಟ್ಟ ೩,೨೯೩ ಮತದಾರರು ಮಾತ್ರ ಈ ``ಸಂಘ'' ಕ್ಷೇತ್ರದ ಸ್ಥಾನಕ್ಕೆ ಸ್ಪರ್ಧಿಸಬಹುದು ಮತ್ತು ಮತ ಚಲಾಯಿಸಬಹುದು. ಅದೇ ರೀತಿ ಕೊಡವರಿಗೂ ಅವಕಾಶ ನೀಡಬೇಕೆಂದು ಒತ್ತಾಯಿಸಿದರು.

೨೦೨೬ರ ನಂತರ ಕ್ಷೇತ್ರ ಪುನರ್‌ವಿಂಗಡಣೆ ಪ್ರಕ್ರಿಯೆ ನಡೆಸಲಾಗುತ್ತದೆ. ಪ್ರಸ್ತುತ ಹೊಸ ಸಂಸತ್ತು ಭವ್ಯವಾದ ಸೆಂಟ್ರಲ್ ವಿಸ್ಟಾದಲ್ಲಿ ೩೮೪ ರಾಜ್ಯಸಭಾ ಸ್ಥಾನಗಳು ಮತ್ತು ೮೮೮ ಲೋಕಸಭಾ ಸ್ಥಾನಗಳನುಸಾರವಾಗಿ ರಚಿಸಲಾಗಿದೆ ಮತ್ತು ಈ ಸಂಸತ್ತಿನ ಒಟ್ಟು ಆಸನ ಸಾಮರ್ಥ್ಯ ೧೨೭೨ ಆಗಿದೆ. ನಮ್ಮ ಸಂವಿಧಾನದ ಅನುಚ್ಛೇದ ೨೪೪ ಖ/ತಿ ೬ನೇ ಶೆಡ್ಯೂಲ್ ಅಡಿಯಲ್ಲಿ ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆಯನ್ನು ಸೃಷ್ಟಿಸುವ ಮೂಲಕ ಮತ್ತು ಸಾಂಪ್ರದಾಯಿಕ ವಾಸಸ್ಥಳದ ಭೌಗೋಳಿಕ ಸ್ಥಳವನ್ನು ಅದೃಶ್ಯ ಲೋಕಸಭೆ ಮತ್ತು ವಿಧಾನಸಭೆ ಕ್ಷೇತ್ರಗಳಾಗಿ ವಿಶೇಷ ಅಮೂರ್ತ-ವಾಸ್ತವ ಕ್ಷೇತ್ರಗಳಾಗಿ ಗುರುತಿಸುವ ಮೂಲಕ ನಮ್ಮ ಸಾಂಪ್ರದಾಯಿಕ ವಾಸಸ್ಥಳವನ್ನು ಶಾಸನಬದ್ಧವಾಗಿ ರಕ್ಷಿಸಬೇಕು. ಕೊಡಗು ರಾಜಕೀಯ-ಆಡಳಿತ ಘಟಕ ಅಂದರೆ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶವಾಗಿದ್ದರೆ ನಾವು ಅಲ್ಪ ಜನಸಂಖ್ಯೆಯಿದ್ದರೂ ಸಹ, ಅಂತಹವರು ಪ್ರತ್ಯೇಕ ಲೋಕಸಭೆ ಪ್ರಾತಿನಿಧ್ಯವನ್ನು ಪಡೆಯಲು ಅರ್ಹರಾಗಿರುತ್ತಿದ್ದೇವು. ಅಲ್ಲದೆ, ಒಂದು ಪ್ರದೇಶವು ಅಗತ್ಯವಿರುವ ಜನಸಂಖ್ಯೆಯನ್ನು ಒಳಗೊಂಡಿದ್ದರೆ, ಅದು ಜಿಲ್ಲೆಯಾಗಿರುವುದು ಕಡ್ಡಾಯವಲ್ಲ. ಅಂತಹವುಗಳನ್ನು ಅದರ ಜನಸಂಖ್ಯಾ ತೂಕದ ಆಧಾರದ ಮೇಲೆ ಲೋಕಸಭೆ ಮತ್ತು ವಿಧಾನಸಭೆ ಎಂದು ಸೃಷ್ಟಿಸಲಾಗುತ್ತದೆ ಎಂದು ನಾಚಪ್ಪ ಮಾಹಿತಿ ಒದಗಿಸಿದರು.

ವೀಟೋ/ಪರಮಾಧಿಕಾರವನ್ನು ಚಲಾಯಿಸಿ ಮತ್ತು ವಿಶೇಷವಾದ ಕೊಡವ ಅದೃಶ್ಯ-ವರ್ಚುವಲ್ ಕ್ಷೇತ್ರಗಳನ್ನು ರಚಿಸಿ ಕೇಂದ್ರೀಯ ಹೊಸ ಸಂಸತ್ತಿನಲ್ಲಿ ನಮಗೆ ಪ್ರಾತಿನಿಧ್ಯವನ್ನು ಒದಗಿಸುವುದರ ಮೂಲಕ ಕೊಡವರು ನೈಸರ್ಗಿಕ ನ್ಯಾಯ ಮತ್ತು ರಾಷ್ಟಿçÃಯ ಹಿತಾಸಕ್ತಿಯಲ್ಲಿ ಶಾಶ್ವತವಾಗಿ ಸಾಂವಿಧಾನಿಕ ಕಾರ್ಯವಿಧಾನದಲ್ಲಿ ಭಾಗವಹಿಸಲು ಪ್ರಜಾಪ್ರಭುತ್ವದಲ್ಲಿ ಸ್ಥಳ ನೀಡಬೇಕೆಂದು ಒತ್ತಾಯಿಸಿದರು.

ಸತ್ಯಾಗ್ರಹದಲ್ಲಿ ಪ್ರಮುಖರಾದ ಪುಲ್ಲೇರ ಸ್ವಾತಿ ಕಾಳಪ್ಪ, ಬೊಟ್ಟಂಗಡ ಸವಿತಾ, ಕೂಪದಿರ ಪುಷ್ಪ ಮುತ್ತಣ್ಣ, ಚೋಳಪಂಡ ಜ್ಯೋತಿ ನಾಣಯ್ಯ. ಕಲಿಯಂಡ ಪ್ರಕಾಶ್, ಬಾಚರಣಿಯಂಡ ಚಿಪ್ಪಣ್ಣ, ಅಜ್ಜಿಕುಟ್ಟಿರ ಲೋಕೇಶ್, ಚಂಬAಡ ಜನತ್, ಕಾಂಡೇರ ಸುರೇಶ್, ಬೇಪಡಿಯಂಡ ದಿನು, ಅಪ್ಪಾರಂಡ ಪ್ರಸಾದ್, ಪುಟ್ಟಿಚಂಡ ದೇವಯ್ಯ, ನಂದಿನೆರವAಡ ವಿಜು, ಬೊಟ್ಟಂಗಡ ಗಿರೀಶ್, ಕಿರಿಯಮಾಡ ಶರೀನ್, ಪಟ್ಟಮಾಡ ಕುಶ, ಚೋಳಪಂಡ ನಾಣಯ್ಯ, ಮಂದಪAಡ ಮನೋಜ್, ಪುಲ್ಲೇರ ಕಾಳಪ್ಪ, ಅಳಮಂಡ ಜೈ, ಪಟ್ಟಮಾಡ ಪ್ರಕಾಶ್, ಪಟ್ಟಮಾಡ ಅಶೋಕ್, ಕೂಪದಿರ ಉತ್ತಪ್ಪ, ಕೂಪದಿರ ಸಾಬು, ಕಾಟುಮಣಿಯಂಡ ಉಮೇಶ್, ಪಾರುವಂಗಡ ನವೀನ್, ಮಂದಪAಡ ಸೂರಜ್, ಅಜ್ಜಿನಿಕಂಡ ಮಾಚಯ್ಯ, ಮೇದುರ ಕಂಠಿ, ಪುದಿಯೊಕ್ಕಡ ಕಾಶಿ, ಚಂಡೀರ ರಾಜಾ ಪಾಲ್ಗೊಂಡಿದ್ದರು.