ಭಾಗಮಂಡಲ, ಜು. ೩: ಭಾಗಮಂಡಲದಲ್ಲಿ ಎರಡು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ತ್ರಿವೇಣಿ ಸಂಗಮದಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದೆ.

ಈಗ ಸುರಿಯುತ್ತಿರುವ ಮಳೆಯಿಂದ ರೈತರಲ್ಲಿ ಸಂತಸ ಉಂಟಾಗಿದೆ. ಅಲ್ಲಲ್ಲಿ ಬಿತ್ತನೆ ಕಾರ್ಯ ಆರಂಭವಾಗಿದೆ. ಕಳೆದ ವರ್ಷ ಜೂನ್ ೨೩ರಂದು ಬಿತ್ತನೆ ಕಾರ್ಯ ನಡೆದಿತ್ತು. ಈ ಬಾರಿ ೧೦ ದಿನ ತಡವಾಗಿ ರೈತರು ಬಿತ್ತನೆ ಆರಂಭಿಸಿದ್ದು ನಾಟಿ ಕಾರ್ಯವು ತಡವಾಗಿ ಆಗಲಿದೆ. ಜೂನ್ ಮೊದಲ ವಾರ ಬಿತ್ತನೆ ಮಾಡುತ್ತಿದ್ದವರು ಈ ಬಾರಿ ನಾಟಿ ಕೆಲಸ ಕೈಬಿಟ್ಟಿದ್ದಾರೆ. ಕೆಲವರು ಮೂರು ತಿಂಗಳ ಬೆಳೆ ಮಾಡಲು ಮುಂದಾಗಿದ್ದಾರೆ.

-ಸುನಿಲ್ ಕುಯ್ಯಮುಡಿ.