‘ಅನ್ಯಗ್ರಹ ಜೀವಿ ‘ಏಲಿಯನ್ಸ್’ ಅಮೇರಿಕಾ ಜೊತೆಗೆ ರಹಸ್ಯವಾಗಿ ಸಂಪರ್ಕ ಸಾಧಿಸಿದೆ. ಏಲಿಯನ್ಸ್ ಇರುವ ಕುರಿತು ಅಮೇರಿಕಾ ಮತ್ತು ಇಸ್ರೇಲ್ಗೆ ಖಚಿತ ಮಾಹಿತಿ ಇದೆ.’
ಇವು ಇಸ್ರೇಲ್ನ ಬಾಹ್ಯಾಕಾಶ ಕಾರ್ಯಕ್ರಮದ ಮಾಜಿ ಮುಖ್ಯಸ್ಥ ಹಮೀಮ್ ಇಶೆದ್ ಅವರ ಸ್ಪಷ್ಟ ನುಡಿಗಳು. ೨೦೨೦ ರಲ್ಲಿ ಅವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಕುತೂಹಲಕಾರಿ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
ಅಮೇರಿಕಾದ ಅಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ವಿಷಯವನ್ನು ಬಹಿರಂಗಪಡಿಸಲು ಉತ್ಸುಕರಾಗಿದ್ದರು. ಆದರೆ ‘ಅದಕ್ಕೆ ಕಾಲ ಪಕ್ವವಾಗಿಲ್ಲ. ಮನುಕುಲ ಏಲಿಯನ್ಸ್ ಇರುವಿಕೆಯ ವಿಷಯವನ್ನು ಜೀರ್ಣಿಸಿಕೊಳ್ಳುವ ಹಂತದಲ್ಲಿ ಈಗ ಇಲ್ಲ’ ಎಂದು ಅನ್ಯಗ್ರಹ ಜೀವಿಗಳು ಅದಕ್ಕೆ ನಿರ್ಬಂಧ ಹೇರಿದವು ಎಂದು ಸುಮಾರು ಮೂವತ್ತು ವರ್ಷಗಳ ಅವಧಿಗೆ ಇಸ್ರೇಲ್ ಬಾಹ್ಯಾಕಾಶ ಯೋಜನೆ ಭದ್ರತಾ ಮುಖ್ಯಸ್ಥರಾಗಿದ್ದ ಅವರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದರು.
ಅವರ ಈ ಹೇಳಿಕೆ ಕುರಿತು ಅಮೇರಿಕಾ ಸರಕಾರ ಯಾವುದೇ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾಗಿದ್ದು, ಈ ಕುರಿತು ಅನುಮಾನ ಹೆಚ್ಚಿಸಿದೆ. ಏಲಿಯನ್ಸ್ ಮನುಕುಲದ ಬಗ್ಗೆ ಅಧ್ಯಯನಕ್ಕೆ ತೀವ್ರ ಆಸಕ್ತಿ ವಹಿಸಿವೆ. ಭೂಮಿಯ ರಚನೆ, ವಿದ್ಯಮಾನಗಳ ಕುರಿತು ಅರಿಯಲು ಅವುಗಳಿಗೆ ಉತ್ಸುಕತೆ ಇದೆ. ಮಂಗಳ ಗ್ರಹದ ನಿಗೂಢ ತಾಣದಲ್ಲಿ ಏಲಿಯನ್ಸ್ ಜೊತೆಗೆ ಅಮೇರಿಕಾದ ಗಗನ ಯಾತ್ರಿಗಳು ಹೆಚ್ಚಿನ ಸಂಶೋಧನೆ ನಡೆಸುವ ಕುರಿತು ಅನ್ಯ ಗ್ರಹಜೀವಿಗಳು ಮತ್ತು ಅಮೇರಿಕಾ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಅಂಶವೂ ಹಮೀಮ್ ಇಶದ್ ಅವರ ಸಂದರ್ಶನವನ್ನು ಆಧರಿಸಿ, ಹಗಾರ್ ಯನಾಯಿ ಬರೆದಿರುವ ‘ದಿ ಯೂನಿವರ್ಸ್ ಬಿಯಾಂಡ್ ಹೊರಿಜಾನ್’ (ಖಿhe Uಟಿiveಡಿse ಃeಥಿoಟಿಜ ಊoಡಿizoಟಿ-ಂ ಅoಟಿveಡಿsಚಿಣioಟಿ Wiಣh Pಡಿoಜಿessoಡಿ ಊಚಿim ಇsheಜ) ಕೃತಿಯಲ್ಲಿ ಉಲ್ಲೇಖಿಸಲಾಗಿದೆ.
ಏಲಿಯನ್ಸ್ ಇರುವಿಕೆ ಪ್ರಕಟವಾಗುತ್ತಿದ್ದಂತೆ ಭೂಮಿಯಲ್ಲಿ ‘ಸಾಮೂಹಿಕ ಉನ್ಮಾದ’ (ಒಚಿss ಊisಣeಡಿiಚಿ) ಸನ್ನಿವೇಶ ಸೃಷ್ಟಿಯಾಗಲಿದೆ ಎನ್ನುವುದು ಅನ್ಯಗ್ರಹ ಜೀವಿಗಳ ನಿಲುವು ಎಂದು ಇಶದ್ ಪ್ರತಿಪಾದಿಸಿದ್ದಾರೆ.
ಅವರ ಸಂದರ್ಶನ ಪ್ರಕಟವಾದ ಸಂದರ್ಭದಲ್ಲಿ, ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಮಾತ್ರ ತಾನು ಅನ್ಯಗ್ರಹ ಜೀವಿಗಳ ಇರುವಿಕೆಯ ಸಾಧ್ಯತೆ ಕುರಿತು ಸಂಶೋಧನೆ ನಡೆಸುತ್ತಿರುವುದಾಗಿಯೂ, ಇದುವರೆಗೆ ಪುರಾವೆ ಲಭಿಸಿಲ್ಲ. ಸೌರವ್ಯೂಹದಾಚೆಗೆ ಜೀವಿಗಳ ಇರುವಿಕೆಯ ಕುರಿತು ಮೂಲಭೂತ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ ಎಂದು ಹೇಳಿತ್ತು.
ಅನ್ಯಗ್ರಹದ ಜೀವಿಗಳು ಬಳಸುತ್ತಿವೆ ಎನ್ನಲಾದ ಗುರುತಿಸಲಾಗದ ಹಾರುವ ವಸ್ತುಗಳ (Uಈಔ) ಅಧ್ಯಯನಕ್ಕೆ, ಹೆಚ್ಚಿನ ಅಪಾಯದ, ಹೆಚ್ಚಿನ ಪ್ರಭಾವದ ವಿಜ್ಞಾನದ ಕಡೆಗೆ ಗಮನ ಕೇಂದ್ರೀಕರಿಸಲು ಸ್ವತಂತ್ರ ತಂಡ ಸ್ಥಾಪಿಸುವುದಾಗಿ ನಾಸಾ ಕಳೆದ ವರ್ಷ ಪ್ರಕಟಿಸಿದೆ.
Uಈಔಗಳ ಕುರಿತು ಸಾರ್ವಜನಿಕರಿಗೆ ಲಭ್ಯವಿರುವ ಹಾರುವ ವಸ್ತುಗಳು, ‘ಯುಫಾಲಜಿ’ ಕುರಿತು ಆಸಕ್ತಿ ಮೂಡಿಸುವುದು ಇದರ ಹಿಂದಿನ ಉದ್ದೇಶ. ಈ ಕುರಿತು ಮೊದಲು ವರದಿ ಮಾಡಿದ ಕೆನ್ನೆಟ್ ಅರ್ನಾಲ್ಡ್ ಅವರ ವರದಿ ಪ್ರಕಟಗೊಂಡ ದಿನದ ನೆನಪಿನಲ್ಲಿ ಜೂನ್ ೨೪ ರಂದು ಕೂಡ ಈ ದಿನಾಚರಣೆ ನಡೆದಿದೆ. UಓIಆಇಓಖಿIಈIಇಆ ಈಐಙIಓಉ ಔಃಎಇಅಖಿ (Uಈಔ) ಎಂಬ ಪದವನ್ನು ೧೯೫೨ ರಲ್ಲಿ ಅಮೇರಿಕಾದ ವಾಯುಪಡೆಯ ಅಧಿಕಾರಿ ಎಡ್ವರ್ಡ್ ರುಪಿಟ್ ಮೊದಲ ಬಾರಿಗೆ ರಚಿಸಿದರು. ಆ ದೇಶದ ಸಂಶೋಧಕ ಹಕ್ಟನ್ ಅಕ್ಡೋಗನ್ ಮೊದಲ ಬಾರಿಗೆ ೨೦೦೧ ರಲ್ಲಿ Uಈಔ ದಿನಾಚರಣೆ ಆಚರಿಸಿದರು.
೧೫೬೧ ರಲ್ಲಿ ನ್ಯೂರೆಂಬರ್ಗ್ನಲ್ಲಿ, ೧೯೪೭ ರ ಜುಲೈ ೨ ರಂದು ರಷ್ಯಾದ ರೋಸ್ವೆಲ್ನಲ್ಲಿ (ಫ್ಲೆöÊಯಿಂಗ್ ಸಾಸರ್’ ಅವಶೇಷಗಳು ಗೋಚರವಾದವು ಎಂದು ವರದಿಯಾಗಿವೆ. ಅಮೇರಿಕಾದ ಮಾಜಿ ಅಧ್ಯಕ್ಷ ರೊನೆಲ್ಡ್ ರೇಗನ್ ೧೯೭೪ ರಲ್ಲಿ ಮತ್ತು ಆ ದೇಶದ ಮಾಜಿ ಅಧ್ಯಕ್ಷ ಜರ್ಮಿ ಕಾರ್ಟರ್ ೧೯೬೯ ರಲ್ಲಿ Uಈಔ ಕಂಡಿದ್ದಾಗಿ ಹೇಳಿದ್ದರು.
ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಹೊಸದಿಲ್ಲಿಯ ನಿವಾಸದ ಮೇಲೆ ೨೦೧೮ ರ ಜೂನ್ ೭ ರ ರಾತ್ರಿ ಗೋಳಾಕಾರದ Uಈಔ ಕಾಣಿಸಿತ್ತು ಎಂಬ ಮಾಹಿತಿಯನ್ನು ಪ್ರಧಾನಿಯವರ ಭದ್ರತಾ ಸಿಬ್ಬಂದಿ ಸ್ವೀಕರಿಸಿದ್ದರು.
ಅಮೇರಿಕಾದಲ್ಲಿ ಕಳೆದ ದಶಕದಲ್ಲಿ Uಈಔ ಗಳು ಕಾಣಿಸಿದ ಕುರಿತು ೧೪೪ ಪ್ರಕರಣಗಳು ವರದಿಯಾಗಿದ್ದು, ಇವುಗಳಲ್ಲಿ ೧೪೩ ಪ್ರಕರಣಗಳ ನಿಖರತೆ ಸ್ಪಷ್ಟಪಡಿಸಲು ಸಾಧ್ಯವಾಗಿಲ್ಲ.
ಅಮೇರಿಕಾ, ರಷ್ಯಾ ಸೇರಿದಂತೆ ವಿಶ್ವದ ನಾನಾ ಕಡೆಗಳಲ್ಲಿ Uಈಔ ಗಳು ಕಾಣಿಸಿದರೂ, ಅವುಗಳ ಖಚಿತತೆ ದೃಢಪಟ್ಟಿಲ್ಲ. ಹಿಂದೆ ನಮ್ಮ ರಾಜ್ಯದಲ್ಲೂ ಮೂಡಿಗೆರೆ, ಪಾವಗಡ, ವಿಜಾಪುರಗಳಿಂದ ಇಂತಹ ವರದಿಗಳು ಬಂದಿದ್ದವು. Uಈಔ ಕುರಿತು ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಬರೆದಿರುವ ‘ಫ್ಲೆöÊಯಿಂಗ್ ಸಾರ್ಸ್’ ಕೃತಿ ಗುರುತಿಸಲಾಗದ ಹಾರುವ ವಸ್ತುಗಳ ಅನೇಖ ಪ್ರಕರಣಗಳ ಕುರಿತು ಆಳವಾದ ಚಿಂತನೆಗಳನ್ನು ಒಳಗೊಂಡಿದೆ.
Uಈಔ ಗಳ ಬಗ್ಗೆ ನಾವು ತೆಗೆದುಕೊಳ್ಳುವ ತೀರ್ಮಾನಗಳಿಗಿಂತ ಮುಖ್ಯವಾಗಿದ್ದು, ಈ ತೀರ್ಮಾನಗಳಿಗೆ ಬುದ್ಧಿ ಮಾಡುವ ಪ್ರಯತ್ನ. ಈ ಬಗ್ಗೆ ಅಂತಿಮ ತೀರ್ಮಾನ ಹೇಳುವಂತವರು ಸದ್ಯಕ್ಕೆ ಭೂಮಂಡಲ ಬಿಟ್ಟರೆ ಇತರೆಡೆ ಯಾರೂ ಇಲ್ಲ ಎಂದು ಅವರು ಈ ಕೃತಿಯಲ್ಲಿ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ Uಈಔ ಗಳ ಬಗ್ಗೆ ಎಚ್ಚರಿಕೆ, ಸಂಶಯ, ಗುಮಾನಿಯೊಂದಿಗೆ ಅಧ್ಯಯನಕ್ಕೆ ಮುಂದಾಗೋಣ. ಇದರಲ್ಲಿ ಸಹಜ ಕುತೂಹಲದೊಂದಿಗೆ ತೊಡಗಿಸಿಕೊಂಡು ಸತ್ಯವೆಂದು ಸ್ಪಷ್ಟವಾಗುವುದನ್ನು ಒಪ್ಪಿಕೊಳ್ಳೋಣ.
- ಕಲ್ಮಾಡಂಡ ದಿನೇಶ್ ಕಾರ್ಯಪ್ಪ, ಮಡಿಕೇರಿ. ಮೊ. ೯೮೪೫೪೯೯೧೧೨.ಕಾಣಿಸಿತ್ತು ಎಂಬ ಮಾಹಿತಿಯನ್ನು ಪ್ರಧಾನಿಯವರ ಭದ್ರತಾ ಸಿಬ್ಬಂದಿ ಸ್ವೀಕರಿಸಿದ್ದರು.
ಅಮೇರಿಕಾದಲ್ಲಿ ಕಳೆದ ದಶಕದಲ್ಲಿ Uಈಔ ಗಳು ಕಾಣಿಸಿದ ಕುರಿತು ೧೪೪ ಪ್ರಕರಣಗಳು ವರದಿಯಾಗಿದ್ದು, ಇವುಗಳಲ್ಲಿ ೧೪೩ ಪ್ರಕರಣಗಳ ನಿಖರತೆ ಸ್ಪಷ್ಟಪಡಿಸಲು ಸಾಧ್ಯವಾಗಿಲ್ಲ.
ಅಮೇರಿಕಾ, ರಷ್ಯಾ ಸೇರಿದಂತೆ ವಿಶ್ವದ ನಾನಾ ಕಡೆಗಳಲ್ಲಿ Uಈಔ ಗಳು ಕಾಣಿಸಿದರೂ, ಅವುಗಳ ಖಚಿತತೆ ದೃಢಪಟ್ಟಿಲ್ಲ. ಹಿಂದೆ ನಮ್ಮ ರಾಜ್ಯದಲ್ಲೂ ಮೂಡಿಗೆರೆ, ಪಾವಗಡ, ವಿಜಾಪುರಗಳಿಂದ ಇಂತಹ ವರದಿಗಳು ಬಂದಿದ್ದವು. Uಈಔ ಕುರಿತು ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಬರೆದಿರುವ ‘ಫ್ಲೆöÊಯಿಂಗ್ ಸಾರ್ಸ್’ ಕೃತಿ ಗುರುತಿಸಲಾಗದ ಹಾರುವ ವಸ್ತುಗಳ ಅನೇಖ ಪ್ರಕರಣಗಳ ಕುರಿತು ಆಳವಾದ ಚಿಂತನೆಗಳನ್ನು ಒಳಗೊಂಡಿದೆ.
Uಈಔ ಗಳ ಬಗ್ಗೆ ನಾವು ತೆಗೆದುಕೊಳ್ಳುವ ತೀರ್ಮಾನಗಳಿಗಿಂತ ಮುಖ್ಯವಾಗಿದ್ದು, ಈ ತೀರ್ಮಾನಗಳಿಗೆ ಬುದ್ಧಿ ಮಾಡುವ ಪ್ರಯತ್ನ. ಈ ಬಗ್ಗೆ ಅಂತಿಮ ತೀರ್ಮಾನ ಹೇಳುವಂತವರು ಸದ್ಯಕ್ಕೆ ಭೂಮಂಡಲ ಬಿಟ್ಟರೆ ಇತರೆಡೆ ಯಾರೂ ಇಲ್ಲ ಎಂದು ಅವರು ಈ ಕೃತಿಯಲ್ಲಿ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ Uಈಔ ಗಳ ಬಗ್ಗೆ ಎಚ್ಚರಿಕೆ, ಸಂಶಯ, ಗುಮಾನಿಯೊಂದಿಗೆ ಅಧ್ಯಯನಕ್ಕೆ ಮುಂದಾಗೋಣ. ಇದರಲ್ಲಿ ಸಹಜ ಕುತೂಹಲದೊಂದಿಗೆ ತೊಡಗಿಸಿಕೊಂಡು ಸತ್ಯವೆಂದು ಸ್ಪಷ್ಟವಾಗುವುದನ್ನು ಒಪ್ಪಿಕೊಳ್ಳೋಣ.
- ಕಲ್ಮಾಡಂಡ ದಿನೇಶ್ ಕಾರ್ಯಪ್ಪ, ಮಡಿಕೇರಿ. ಮೊ. ೯೮೪೫೪೯೯೧೧೨.