ಸೋಮವಾರಪೇಟೆ, ಜೂ. ೨೭ : ರೋಟರಿ ಕ್ಲಬ್ ಆಫ್ ಸೋಮವಾರಪೇಟೆ ಹಿಲ್ಸ್ ಅಧ್ಯಕ್ಷರಾಗಿ ನಂಗಾರು ವಸಂತ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಚೇತನ್ ಚಂದ್ರಾಜು ಆಯ್ಕೆಯಾದರು.
ಈಚೆಗೆ ಸಂಘದ ಅಧ್ಯಕ್ಷ ಎಚ್.ಸಿ. ಲೋಕೇಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಖಜಾಂಚಿಯಾಗಿ ಜಿ.ಡಿ. ನವೀನ್, ವಿವಿಧ ಘಟಕಗಳಿಗೆ ಪದಾಧಿಕಾರಿಗಳಾಗಿ ಶಶಿಧರ್, ಬಿ.ಎಸ್. ಸುಂದರ್, ಪಿ.ಕೆ. ರವಿ, ಬಿ.ಎಂ. ದಿನೇಶ್, ಡಾ|| ರಾಕೇಶ್ ಪಟೇಲ್, ಡಾ|| ಕೃಷ್ಣಾನಂದ, ಎಚ್.ಸಿ. ನಾಗೇಶ್, ಎಚ್.ಬಿ. ಹೃಷಿಕೇಶ್, ಎಂ.ಎA. ಪ್ರಕಾಶ್ ಕುಮಾರ್, ಎಂ.ಡಿ. ಪ್ರದೀಪ್, ಎಸ್.ಬಿ. ಯಶ್ವಂತ್, ಎ.ಪಿ. ವೀರರಾಜು, ಜೆ.ಕೆ. ಪೊನ್ನಪ್ಪ, ರಾಜಶ್ರೀ ಸದಾನಂದ್ ಹಾಗೂ ವೀಣಾ ಮನೋಹರ್ ನೇಮಕವಾದರು.