ಸೋಮವಾರಪೇಟೆ, ಜೂ. ೨೭: ಕಾಲೇಜು ಶಿಕ್ಷಣ ಇಲಾಖೆ, ಯಡೂರು ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಹಿಳಾ ದೌರ್ಜನ್ಯ ನಿಗ್ರಹ ಸಮಿತಿ ಹಾಗೂ ವಾಣಿಜ್ಯಶಾಸ್ತç ವಿಭಾಗದ ಸಹಭಾಗಿತ್ವದಲ್ಲಿ ಕಾಲೇಜು ಸಭಾಂಗಣದಲ್ಲಿ ‘ಮಹಿಳಾ ದೌರ್ಜನ್ಯ ತಡೆ ಮತ್ತು ಪೋಕ್ಸೊ ಕಾಯ್ದೆ’ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಾಗಾರ ನಡೆಯಿತು.
ಕಾರ್ಯಾಗಾರದಲ್ಲಿ ಭಾಗಿಯಾಗಿ ಉಪನ್ಯಾಸ ನೀಡಿದ ವಕೀಲೆÀ ಹೆಚ್.ಆರ್. ಪವಿತ್ರ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರದಂತಹ ಹೇಯಕೃತ್ಯಗಳಿಗೆ ಕಾನೂನಿನಲ್ಲಿ ಕಠಿಣವಾದ ಶಿಕ್ಷೆಯಿದೆ. ಲೈಂಗಿಕ ಹಾಗೂ ಇತರ ಎಲ್ಲಾ ರೀತಿಯ ಅಪರಾಧ, ದೌರ್ಜನ್ಯಗಳಿಂದ ಮಕ್ಕಳನ್ನು ರಕ್ಷಿಸುವ ಉದ್ದೇಶದಿಂದ ೨೦೧೨ರಲ್ಲಿ ಪೋಕ್ಸೊ ಕಾಯ್ದೆ ಜಾರಿಗೆ ಬಂದಿದೆ. ಅತಿಹೆಚ್ಚು ಮೊಬೈಲ್ ಬಳಕೆ, ಹದಿಹರೆಯದ ಆಕರ್ಷಣೆಗೆ ಒಳಗಾಗಿ ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗುವಂತ ಸಂದರ್ಭಗಳನ್ನು ಯಾರು ತಂದುಕೊಳ್ಳದAತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಲೈಂಗಿಕ ಕಿರುಕುಳಕ್ಕೆ ಸಂಬAಧಿಸಿದAತೆ ಗಂಡು ಮಕ್ಕಳಲ್ಲೂ ಮಾನಸಿಕ ಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆ ಆಗಬೇಕಿದೆ. ಪೋಷಕರು ತಮ್ಮ ಮಕ್ಕಳಿಗೆ ಈ ಬಗ್ಗೆ ತಿಳಿ ಹೇಳಬೇಕು. ಹೆಣ್ಣು ಮಕ್ಕಳು ಶಾಲಾ-ಕಾಲೇಜು ಪ್ರಯಾಣದ ಸಂದರ್ಭದಲ್ಲಿ ಸಾಕಷ್ಟು ಕಿರುಕುಳವನ್ನು ಅನುಭವಿಸುತ್ತಿರುತ್ತಾರೆ. ಪ್ರೌಢಾವಸ್ಥೆಯನ್ನು ತಲುಪುವ ಮೊದಲು ಶೇ.೨೫ರಷ್ಟು ಹುಡುಗಿಯರು ಕೆಲವು ರೀತಿಯ ನಿಂದನೆ ಅಥವಾ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವುದು ಸಾಮಾನ್ಯವಾಗಿದೆ. ಶಾಲಾ-ಕಾಲೇಜು ಹಂತದಲ್ಲೇ ಲೈಂಗಿಕ ದೌರ್ಜನ್ಯ ಹಾಗೂ ತಡೆಗಟ್ಟುವ ವಿಷಯದಲ್ಲಿ ಮುಕ್ತವಾಗಿ ಚರ್ಚೆಯಾಗಬೇಕಿದೆ ಎಂದು ಅಭಿಪ್ರಾಯಿಸಿದರು.
ವೇದಿಕೆಯಲ್ಲಿ ಕಾಲೇಜು ಪ್ರಾಂಶುಪಾಲೆ ಧನಲಕ್ಷಿö್ಮÃ, ಪ್ರಾಧ್ಯಾಪಕಿ ಡಾ. ಕುಸುಮ, ಮುಖ್ಯಪೇದೆ ವೀಣಾ, ಸಿಬ್ಬಂದಿ ಹೆಚ್.ಜೆ. ಜವರಪ್ಪ ಇದ್ದರು.