ಮಡಿಕೇರಿ, ಜೂ. ೨೭: ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಯ ವತಿಯಿಂದ ‘ಭವಿಷ್ಯ ನಿಧಿ ನಿಮ್ಮ ಹತ್ತಿರ' ೨.೦ ಅಡಿಯಲ್ಲಿ ಮಾಹಿತಿ ಕಾರ್ಯಕ್ರಮ ಸಂಘಟನೆಯ ಮೈಸೂರು ಪ್ರಾದೇಶಿಕ ಕಚೇರಿಯಿಂದ ಮಡಿಕೇರಿ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ನಡೆಯಿತು. ಪಿ.ಎಫ್ ಸದಸ್ಯರು ಹಾಗೂ ಪಿಂಚಣಿದಾರರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಹಿತಿ ಪಡೆದುಕೊಂಡರು.

ತಾಲೂಕು ಪಂಚಾಯಿತಿ ಖಾತ ವ್ಯವಸ್ಥಾಪಕಿ ಸುನಿತಾ, ಡಿ.ಎನ್.ಒ ಬಿ.ಎನ್ ರಮೇಶ್, ಡಿ.ಪಿ.ಎ ಸಂಪತ್ ಕುಮಾರ್, ಎಸ್.ಎಸ್.ಎಸ್.ಎ ಪಿ.ಎಂ ಸುಲೋಚನಾ ಹಾಜರಿದ್ದರು.