ಪೊನ್ನಂಪೇಟೆ, ಜೂ. ೨೬: ಜಿಲ್ಲೆಯ ಶ್ರೀಮಂತ ಸಂಸ್ಕೃತಿಯ ಮೇಲೆ ಅತ್ಯಾಚಾರ ನಡೆಯುತ್ತಿದ್ದು, ಜಿಲ್ಲೆಯಲ್ಲಿ ಸಾಮಾಜಿಕ ಅಭದ್ರತೆ ಕಾಡುತ್ತಿದೆ. ಯಾವುದೇ ಕಾರಣಕ್ಕೂ ಕೊಡವರು ತಮ್ಮ ಜಾಗವನ್ನು ಹೊರಗಿನವರಿಗೆ ಮಾರಾಟ ಮಾಡಿ ಹೋಗದಂತೆ ಅಖಿಲ ಕೊಡವ ಸಮಾಜ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಕರೆ ನೀಡಿದರು.

ಕೊಡವ ರೈಡರ್ಸ್ ಕ್ಲಬ್ ಮುಂದಾಳತ್ವದಲ್ಲಿ ಬಾಂಡಿAಗ್ ಬ್ಲೂಮ್ಸ್ ಕೊಡಗು ಸಂಸ್ಥೆ ಹಾಗೂ ಗೋಣಿಕೊಪ್ಪ ಕಾವೇರಿ ಕಾಲೇಜು ಎನ್‌ಎಸ್‌ಎಸ್ ಘಟಕದ ಸಹಯೋಗದಲ್ಲಿ ಕೋಣಂಗೇರಿ ತುಪ್ಪನಾಣಿ ಭಗವತಿ ದೇವಸ್ಥಾನದ ಆವರಣದಲ್ಲಿ ನಡೆದ ಗಿಡ ನೆಡುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಜಿಲ್ಲೆಯ ಪರಿಸ್ಥಿತಿ ಹಿಂದಿನAತಿಲ್ಲ. ಜಿಲ್ಲೆಯಲ್ಲಿ ಸಾಮಾಜಿಕ ಅಭದ್ರತೆ ಕಾಡುವುದರ ಜೊತೆಗೆ ಪ್ರಾಕೃತಿಕ ಅಸಮತೋಲನ ಎದುರಾಗಿದೆ. ಒಂದೆಡೆ ಗಿಡ ನೆಡುವ ಕೆಲಸವಾಗುತ್ತಿದ್ದರೆ, ಮತ್ತೊಂದೆಡೆ ಕಾಡಿನಲ್ಲಿ ಮಾತ್ರವಲ್ಲ ನಾಡಿನಲ್ಲಿ ಕೂಡ ಮರಗಳ ಹನನವಾಗುತ್ತಿದೆ. ಸ್ಥಳೀಯರಿಂದ ಅರಣ್ಯವನ್ನು ಕಾಪಾಡುವ ಕೆಲಸವಾದರೆ, ಹೊರಗಿನ ಮರಗಳ್ಳರಿಂದ ಅರಣ್ಯ ನಾಶವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಮಾತನಾಡಿ, ಒಂದು ಸಮಯದಲ್ಲಿ ಭತ್ತದ ಕಣಜವಾಗಿದ್ದ ಕೊಡಗಿನಲ್ಲಿ ಭತ್ತ ಬೆಳೆಯುವ ಪ್ರದೇಶಗಳು ಮಾಯವಾಗಿದೆ. ಇದಕ್ಕೆ ಮೂಲ ಕಾರಣ ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದಿರುವುದು. ರೈತರ ಭತ್ತ ಬೆಳೆಯುವ ಪ್ರದೇಶಕ್ಕೆ ಇಂತಿಷ್ಟು ಸಹಾಯಧನ ನೀಡಬೇಕಿದೆ ಎಂದು ಅಭಿಪ್ರಾಯಪಟ್ಟರು. ಭತ್ತದ ಗದ್ದೆಗಳಿಗೆ ನೀರುಣಿಸುವ ಬರೆಕಾಡ್ ಹಾಗೂ ದೇವರಕಾಡು ಹೀಗೆ ಒಂದೊAದು ಅರಣ್ಯಕ್ಕೂ ಒಂದೊAದು ಹೆಸರಿಟ್ಟು ಅರಣ್ಯ ರಕ್ಷಣೆ ಮಾಡುವ ಜೊತೆಗೆ ನೀರಿನ ಸೆಲೆಯನ್ನು ಕಾಪಾಡಿದ ವಿಜ್ಞಾನಿಗಳು ನಮ್ಮ ಹಿರಿಯರು. ಇದನ್ನು ನಮ್ಮ ಇಂದಿನ ಪೀಳಿಗೆ ನಾಶ ಮಾಡಿದೆ. ಆದರೆ ನಂತರದ ದಿನಗಳಲ್ಲಿ ಕಾಡಿನ ಬಗ್ಗೆ ಮಾಹಿತಿ ಇಲ್ಲದವರು ಕೂಡ ಅರಣ್ಯ ಮಂತ್ರಿಗಳಾಗಿ ಆಯ್ಕೆಯಾಗುತ್ತಿರುವುದು ನಮ್ಮ ದುರ್ದೈವ ಎಂದು ವಿಷಾದಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ರೈಡರ್ಸ್ ಕ್ಲಬ್ ಸ್ಥಾಪಕಾಧ್ಯಕ್ಷ ಅಜ್ಜಿಕುಟ್ಟೀರ ಪ್ರಥ್ವಿ ಸುಬ್ಬಯ್ಯ, ಕ್ಲಬ್ ಬೆಳೆದು ಬಂದಿರುವ ಹಾದಿಯ ಬಗ್ಗೆ ತಿಳಿಸಿ, ಗಿಡನೆಡುವ ಉದ್ದೇಶಗಳನ್ನು ಹಾಗೂ ಪ್ರತಿವರ್ಷ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ದೇವಸ್ಥಾನ ಅವರಣದಲ್ಲಿ ಗಿಡ ನೆಟ್ಟ ಬಳಿಕ, ಹುದಿಕೇರಿ ಸಮುದಾಯ ಆರೋಗ್ಯ ಕೇಂದ್ರ ಆವರಣದಲ್ಲಿ ಗಿಡ ನೆಡಲಾಯಿತು. ಕೊಡವ ಜನಾಂಗದ ಕಾರೋಣ ಹಿಡಿಯುವ ಗೆಜ್ಜೆತಂಡ್ ಬಳಕೆಯ ಕರಿಮರ ಸೇರಿದಂತೆ, ಹಣ್ಣಿನ ಗಿಡಗಳು, ಕಾಡು ಜಾತಿಯ ಗಿಡಗಳನ್ನು ನೆಡಲಾಯಿತು. ಈ ಸಂದರ್ಭ ದಾನಿಗಳು ಹಾಗೂ ಸಮಾಜ ಸೇವಕ ಅಜ್ಜಿಕುಟ್ಟೀರ ಶಾಂತು ಪೂಣಚ್ಚ, ಬಾಂಡಿAಗ್ ಬ್ಲೂಮ್ಸ್ ಕೊಡಗು ಅಧ್ಯಕ್ಷೆ ಬಾಚಮಾಡ ಲಿಜೇಟ್ ಭವಿ ಕುಮಾರ್, ತುಪ್ಪನಾಣಿ ಭಗವತಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕುಪ್ಪಣಮಾಡ ಗಣೇಶ್, ಅಂಜಿಕೇರಿ ನಾಡ್ ಜೋಡಿ ತಕ್ಕರಲ್ಲಿ ಒಬ್ಬರಾದ ಚಕ್ಕೇರ ರಾಜೇಶ್, ಕಾವೇರಿ ಕಾಲೇಜು ಎನ್.ಎಸ್.ಎಸ್. ಅಧಿಕಾರಿ ಮಂದೆಯAಡ ವನಿತ್ ಕುಮಾರ್, ಕೊಡವ ರೈಡರ್ಸ್ ಕ್ಲಬ್ ಸದಸ್ಯರು, ಬಾಂಬಿAಗ್ ಬ್ಲೂಮ್ಸ್ ಸದಸ್ಯರು, ಗ್ರಾಮಸ್ಥರು, ಗೋಣಿಕೊಪ್ಪ ಕಾವೇರಿ ಕಾಲೇಜು ಎನ್.ಎಸ್.ಎಸ್. ವಿದ್ಯಾರ್ಥಿಗಳು, ವೀರಾಜಪೇಟೆ ತ್ರೀವೇಣಿ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಚೆನ್ನಪಂಡ ಕಲ್ಪನ ತಿಮ್ಮಯ್ಯ ಕಾರ್ಯಕ್ರಮ ನಿರೂಪಿಸಿದರು.