ಮಡಿಕೇರಿ, ಜೂ. ೨೬: ಶ್ರೀ ಶಕ್ತಿ ಅಸೋಸಿಯೇಷನ್, ಶಕ್ತಿ ಧಾಮ ಹಾಸ್ಪಿಟಲ್ ಹಾಗೂ ಸಮಾಜ ಸೇವಾ ವಿಭಾಗ ಜ್ಞಾನ ಕಾವೇರಿ ಚಿಕ್ಕ ಅಳುವಾರ ಕೊಡಗು ವಿಶ್ವವಿದ್ಯಾಲಯ ಇವರ ಸಹಯೋಗದೊಂದಿಗೆ “ಅಂರ‍್ರಾಷ್ಟಿçÃಯ ಮಾದಕ ವಸ್ತುಗಳ ದುರುಪಯೋಗ ಮತ್ತು ಕಾನೂನು ಬಾಹಿರ ಸಾಗಾಟ ವಿರೋಧಿ ದಿನಾಚರಣೆ’’ ಕಾರ್ಯಕ್ರಮವು ತಾ. ೨೭ ರಂದು (ಇಂದು) ಬೆಳಿಗ್ಗೆ ೧೦.೩೦ ಗಂಟೆಗೆ ಶಕ್ತಿ ಧಾಮ ಹಾಸ್ಪಿಟಲ್ ಕುಶಾಲನಗರದಲ್ಲಿ ನಡೆಯಲಿದೆ.

ಶಕ್ತಿಧಾಮ ಐಆರ್‌ಸಿಎ ಆರೋಗ್ಯ ಅಧಿಕಾರಿ ಡಾ.ಭರತ್, ಸೋಮವಾರಪೇಟೆ ಪೊಲೀಸ್ ಉಪ ಅಧೀಕ್ಷಕ ಆರ್.ವಿ. ಗಂಗಾಧರಪ್ಪ, ವಿಶೇಷಚೇತನರ ಕಲ್ಯಾಣಾಧಿಕಾರಿ ವಿಮಲ ಕೊಡಗು ವಿಶ್ವವಿದ್ಯಾಲಯ ಜ್ಞಾನ ಕಾವೇರಿ ಚಿಕ್ಕಳುವಾರ ಸಮಾಜ ಸೇವಾ ವಿಭಾಗದ ಅಧ್ಯಾಪಕರಾದ ಕೆ.ಹರಿಣಾಕ್ಷಿ, ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.